ಕುಶಾಲನಗರ, ಡಿ. ೧೯: ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಥಮ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. ಸ್ಥಳೀಯ ಕನ್ನಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಸಲಹೆಗಾರ ಟಿ.ಪಿ. ರಮೇಶ್, ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಸಮ್ಮೇಳನದ ಯಶಸ್ವಿಗಾಗಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮನವಿ ಮಾಡಿದರು. ಸಲಹೆಗಾರ ಟಿ.ಪಿ. ರಮೇಶ್ ಸಮ್ಮೇಳನದ ಬಗ್ಗೆ ಮಾಹಿತಿ ಒದಗಿಸಿದರು. ಯುವ ಜನಾಂಗವನ್ನು ಸಾಹಿತ್ಯದೆಡೆಗೆ ಕೊಂಡೊಯ್ಯುವ ಕೆಲಸವಾಗಬೇಕು ಎಂದರು.

ಇದೇ ಸಂದರ್ಭ ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿ ಹಣಕಾಸು ಸಮಿತಿ ಸೇರಿದಂತೆ ಉಪಸಮಿತಿಗಳ ಅಧ್ಯಕ್ಷರು, ಸಂಚಾಲಕರು ಮತ್ತು ಕಾರ್ಯ ದರ್ಶಿಗಳ ಆಯ್ಕೆ ಮಾಡಲಾಯಿತು.

ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ. ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಸಲಹೆಗಾರರಾದ ವಿ.ಪಿ. ಶಶಿಧರ್, ಕೆ.ಪಿ. ಚಂದ್ರಕಲಾ, ಫ್ಯಾನ್ಸಿ ಮುತ್ತಣ್ಣ, ರಂಗಸ್ವಾಮಿ, ತಾಲೂಕು ಪದಾಧಿಕಾರಿಗಳಾದ ಎಸ್. ನಾಗರಾಜು, ಕೆ.ವಿ. ಉಮೇಶ್, ನೆರೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ-ಸAಸ್ಥೆಗಳ ಪ್ರಮುಖರು ಇದ್ದರು.