ಪ್ರಧಾನಿ ಮೋದಿ ದೃಷ್ಟಿಕೋನ ರಷ್ಯಾ ಮೇಲೆ ಪ್ರಭಾವ ಬೀರಿದೆ
ವಾಷಿಂಗ್ಟನ್, ಡಿ. ೧೮: ಅಣ್ವಸ್ತç ಶಸ್ತಾçಸ್ತç ಬಳಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನ ರಷ್ಯಾ ಮೇಲೆ ಪ್ರಭಾವ ಬೀರಿದ್ದು, ಉಕ್ರೇನ್ ಯುದ್ಧದ ವಿಷಯದಲ್ಲಿ ಜಾಗತಿಕ ಮಟ್ಟ ದುರಂತವೊAದನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ಸಿಐಎ ಮುಖ್ಯಸ್ಥ ಬಿಲ್ಬರ್ನ್ಸ್ ಹೇಳಿದ್ದಾರೆ. ಇನ್ನು ಇದೇ ವೇಳೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಅಣ್ವಸ್ತç ಬಳಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅದೂ ಸಹ ರಷ್ಯನ್ನರ ಮೇಲೆ ಪ್ರಭಾವ ಬೀರಿದೆ ಎಂದು ಸಂದರ್ಶನದಲ್ಲಿ ಬುಲ್ ಬರ್ನ್ಸ್ ಅಭಿಪ್ರಾಯಪಟ್ಟಿದ್ದಾರೆ. ಅಣ್ವಸ್ತçಗಳ ವಿಷಯ ಬೆದರಿಸುವ ಉದ್ದೇಶವಾಗಿದೆ, ಯುದ್ಧತಂತ್ರದಲ್ಲಿ ಅಣ್ವಸ್ತçಗಳ ಬಳಕೆ ಯೋಜನೆಗೆ ಸ್ಪಷ್ಟ ಸಾಕ್ಷö್ಯಗಳು ಕಾಣುತ್ತಿಲ್ಲ ಎಂದು ಸಿಐಎ ಮುಖ್ಯಸ್ಥ ಬಿಲ್ ಬರ್ನ್ಸ್ ಹೇಳಿದ್ದಾರೆ. ತಾ. ೩ ರಂದು ಮಾತನಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಯುದ್ಧ ಇನ್ನಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಿದ ಬೆನ್ನಲ್ಲೇ ಸಿಐಎ ಮುಖ್ಯಸ್ಥ ಬಿಲ್ ಬರ್ನ್ಸ್ ಈ ಹೇಳಿಕೆ ನೀಡಿದ್ದಾರೆ. ಅಣು ಯುದ್ಧದ ಬೆದರಿಕೆ ಇನ್ನೂ ಹೆಚ್ಚಾಗಲಿದೆ ಎಂದೂ ಬಿಲ್ ಬರ್ನ್ಸ್ ಎಚ್ಚರಿಸಿದ್ದಾರೆ. ರಷ್ಯಾದ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಪುಟಿನ್, ರಷ್ಯಾ ತನ್ನ "ಲಭ್ಯವಿರುವ ಎಲ್ಲಾ ವಿಧಾನಗಳಿಂದ" ಹೋರಾಡುತ್ತದೆ ಎಂದು ಹೇಳಿದ್ದರು.
ಭಾರತ ಮಹಿಳಾ ಹಾಕಿ ತಂಡಕ್ಕೆ ನೇಷನ್ಸ್ ಕಪ್
ವೆಲೆನ್ಸಿ, ಡಿ. ೧೮: ವೆಲೆನ್ಸಿಯಾದಲ್ಲಿ ನಡೆದ ಎಫ್ಐಎಚ್ ಮಹಿಳಾ ನೇಷನ್ಸ್ ಕಪ್ ೨೦೨೨ರ ಫೈನಲ್ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಸ್ಪೇನ್ ಅನ್ನು ೧-೦ ಗೋಲುಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಭಾರತ ಎಫ್ಐಹೆಚ್ ಮಹಿಳಾ ಹಾಕಿ ಪ್ರೊ ಲೀಗ್ ೨೦೨೩-೨೪ಗೆ ಅರ್ಹತೆ ಪಡೆದಿದೆ. ಅಂತಿಮ ಪಂದ್ಯದಲ್ಲಿ ಭಾರತದ ಪರ ಗುರ್ಜಿತ್ ಕೌರ್ (೬ನೇ ನಿಮಿಷದಲ್ಲಿ) ಏಕೈಕ ಗೋಲು ದಾಖಲಿಸಿದರು. ಸವಿತಾ ಪುನಿಯಾ ನೇತೃತ್ವದ ಭಾರತ ಮಹಿಳಾ ತಂಡ ಫೈನಲ್ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದಿತ್ತು. ಪಂದ್ಯದ ಆರನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಂಡದ ಖಾತೆ ತೆರೆದರು. ದ್ವಿತೀಯಾರ್ಧದ ಆರಂಭದಲ್ಲಿ ಸ್ಪೇನ್ ಆಕ್ರಮಣಕಾರಿ ಆಟವಾಡಿತು ಆದರೆ ಭಾರತೀಯ ಮಹಿಳೆಯರ ವಿರುದ್ಧ ಈ ಶೈಲಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಂದ್ಯದ ೩೨ನೇ ನಿಮಿಷದಲ್ಲಿ ಟೀಂ ಇಂಡಿಯಾ ಮತ್ತೊಂದು ಪೆನಾಲ್ಟಿ ಗಳಿಸಿತು. ಆದರೆ ಈ ವೇಳೆ ಗುರ್ಜಿತ್ ಗೋಲು ಹೊಡೆಯುವಲ್ಲಿ ವಿಫಲರಾದರು. ಎಫ್ಐಎಚ್ ಮಹಿಳಾ ನೇಷನ್ಸ್ ಕಪ್ ೨೦೨೨ ಗೆದ್ದ ಭಾರತೀಯ ಮಹಿಳಾ ಹಾಕಿ ತಂಡದ ಪ್ರತಿ ಆಟಗಾರನಿಗೆ ರೂ ೨ ಲಕ್ಷ ಮತ್ತು ಪ್ರತಿ ಸಹಾಯಕ ಸಿಬ್ಬಂದಿಗೆ ರೂ ೧ ಲಕ್ಷವನ್ನು ಹಾಕಿ ಇಂಡಿಯಾ ಘೋಷಿಸಿದೆ.
ಪಾಕಿಸ್ತಾನದಲ್ಲಿ ನಿರಂತರ ಉಗ್ರ ದಾಳಿ
ಪೇಶಾವರ, ಡಿ. ೧೮: ಭಯೋತ್ಪಾದನೆ ಪೋಷಿತ ಪಾಕಿಸ್ತಾನದಲ್ಲಿ ಇದೀಗ ನಿರಂತರವಾಗಿ ಉಗ್ರ ದಾಳಿಗಳು ನಡೆಯುತ್ತಿವೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾದ ಪೊಲೀಸ್ ಠಾಣೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದು ದಾಳಿಯಲ್ಲಿ ಕನಿಷ್ಟ ನಾಲ್ವರು ಪಾಕಿಸ್ತಾನಿ ಪೊಲೀಸರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ದಕ್ಷಿಣ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಲಕಿ ಮಾರ್ವಾಟ್ನಲ್ಲಿರುವ ಬರ್ಗೈ ಪೊಲೀಸ್ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇನ್ನು ದಾಳಿಯಲ್ಲಿ ಉಗ್ರರು ಹ್ಯಾಂಡ್ ಗ್ರೆನೇಡ್ಗಳು ಮತ್ತು ರಾಕೆಟ್ ಲಾಂಚರ್ಗಳ ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಮೆಹಮೂದ್ ಖಾನ್ ದಾಳಿಯನ್ನು ಹೇಡಿತನದ ಕೃತ್ಯ ಎಂದು ಬಣ್ಣಿಸಿದ್ದಾರೆ ಮತ್ತು ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ತಕ್ಷಣದ ವರದಿಯನ್ನು ಕೇಳಿದ್ದಾರೆ. ಅಧ್ಯಕ್ಷ ಆರಿಫ್ ಅಲ್ವಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಇನ್ನು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೂ ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ದಾಳಿಯನ್ನು ಖಂಡಿಸಿದರು. ಇನ್ನು ದಾಳಿಯ ಹೊಣೆ ಸದ್ಯಕ್ಕೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ ಜಿಲ್ಲೆಯಲ್ಲಿ ಪೊಲೀಸರ ಮೇಲಿನ ಹಿಂದಿನ ದಾಳಿಗಳನ್ನು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೊತ್ತುಕೊಂಡಿತ್ತು.
ಅಫ್ಘಾನಿಸ್ತಾನದಲ್ಲಿ ೧೨ ಮಂದಿ ಸಜೀವ ದಹನ
ಕಾಬೂಲ್, ಡಿ. ೧೮: ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತ್ಯದ ಸುರಂಗದೊಳಗೆ ತೈಲ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ೧೨ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಸಲಾಂಗ್ ಸುರಂಗದೊಳಗೆ ಭೀಕರ ಸ್ಫೋಟ ಸಂಭವಿಸಿತ್ತು. ನಂತರ ಬೆಂಕಿ ಹೊತ್ತಿಕೊಂಡು ೧೨ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಇನ್ನು ಹಲವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪ್ರಾಂತೀಯ ಆಡಳಿತದ ವಕ್ತಾರ ಹಿಕ್ಮತುಲ್ಲಾ ಶಮೀಮ್ ಕ್ಸಿನ್ಹುವಾಗೆ ತಿಳಿಸಿದರು. ಈ ಘಟನೆಯಿಂದಾಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಉತ್ತರದ ಎಂಟು ಪ್ರಾಂತ್ಯಗಳೊAದಿಗೆ ಸಂಪರ್ಕಿಸುವ ೩,೦೦೦ ಮೀಟರ್ ಎತ್ತರದ ಸಲಾಂಗ್ ಸುರಂಗವು ಸಂಚಾರಕ್ಕೆ ಅಡ್ಡಿಯಾಗಿತ್ತು ಎಂದು ಸ್ಥಳೀಯರು. ಸದ್ಯ ಬೆಂಕಿ ನಂದಿಸಲಾಗಿದ್ದು ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಶಮೀಮ್ ಹೇಳಿದರು.
ವಸ್ತçಸಂಹಿತೆ ವಿರೋಧಿ ಹೋರಾಟ ; ನಟಿಯ ಬಂಧನ
ಟೆಹರಾನ್, ಡಿ. ೧೮: ಇರಾನ್ನಲ್ಲಿ ನಡೆಯುತ್ತಿರುವ ಹಿಜಾಬ್ ಹಾಗೂ ವಸ್ತçಸಂಹಿತೆ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ ಕಾರಣಕ್ಕೇ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದ ನಟಿ ಟೆರಾಹ್ನೆ ಅಲಿದೊಸ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಅಲಿದೂಸ್ತಿ (೩೮) ಕಳೆದ ಮೂರು ತಿಂಗಳಿAದ ಹಿಜಾಬ್ ವಿರೋಧಿ ಹೋರಾಟದಲ್ಲಿ ಸಕ್ರಿಯರಾಗಿದ್ದು, ಹಿಜಾಬ್ ಕಡ್ಡಾಯ ಕಾನೂನಿನ ಬದಲಾವಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಪೋಸ್ಟ್ಗಳನ್ನು ಹಾಕುತ್ತಿದ್ದರು. ಇರಾನ್ ಪೋಲಿಸರು ನಟಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಸದ ಧೈರ್ಯಶೀಲಮಾನೆ ಆಗಮನಕ್ಕೆ ನಿರ್ಬಂಧ
ಬೆಳಗಾವಿ, ಡಿ. ೧೮: ಕರ್ನಾಟಕ-ಮಹಾರಾಷ್ಟç ಗಡಿ ಸಂಘರ್ಷದ ಬೆನ್ನಲ್ಲೇ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಹಾರಾಷ್ಟç ಜನಪ್ರತಿನಿಧಿಗಳು ಮಾಡುತ್ತಿದ್ದು, ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲಮಾನೆ ಬೆಳಗಾವಿಗೆ ಬರುವುದಾಗಿ ಹೇಳಿ ಪತ್ರ ರವಾನಿಸಿದ್ದಾರೆ. ತಾ. ೧೯ ರಂದು ವ್ಯಾಕ್ಸಿನ್ ಡಿಪೋದಲ್ಲಿ ಆಯೋಜಿಸಿರುವ ಮಹಾ ಮೇಳದಲ್ಲಿ ಮಹಾರಾಷ್ಟç ಗಡಿ ಸಲಹಾಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲಮಾನೆ ಬೆಳಗಾವಿಗೆ ಬರುವುದಾಗಿ ಪತ್ರ ಬರೆದು ತಮಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಅದರ ಜೊತೆ ಪ್ರವಾಸದ ಪಟ್ಟಿಯನ್ನು ಲಗ್ಗತ್ತಿಸಿದ್ದಾರೆ. ವಿಧಾನ ಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ಈ ಮಹಾಮೇಳ ನಡೆಸುತ್ತಿದೆ. ಬೆಳಗಾವಿಗೆ ಸಂಸದ ಧೈರ್ಯಶೀಲಮಾನೆ ಭೇಟಿ ಕುರಿತಂತೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಮಾನೆಯವರ ಭೇಟಿಗೆ ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ನಗರದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಮಗ್ರ ವರದಿ ನೀಡುವಂತೆಯೂ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಮಾನೆಯವರಿಗೆ ಬೆಳಗಾವಿ ಭೇಟಿಗೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಧೈರ್ಯಶೀಲ ಮಾನೆ ಭೇಟಿ ನೀಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಧೈರ್ಯಶೀಲ್ ಅವರು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಕರ್ನಾಟಕ-ಮಹಾರಾಷ್ಟç ಗಡಿಯಲ್ಲಿರುವ ಕುಗುನೊಳ್ಳಿ ಚೆಕ್ಪೋಸ್ಟ್ಗೆ ಬರುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ಸೂಚಿಸಿವೆ.