ಸುಂಟಿಕೊಪ್ಪ, ಡಿ. ೧೮: ಸುಂಟಿಕೊಪ್ಪದಲ್ಲಿ ತಾಜ್ಯ ನೀರು ಮರು ಸಂಸ್ಕರಣಾ ಘಟಕ ಸ್ಥಾಪನೆಗೆ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೇರವೇರಿಸಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿಸಲಾದ ನೀರನ್ನು ಊರಿನ ಗಿಡಗಳಿಗೆ ಮತ್ತು ಇತರ ಉದ್ದೇಶಗಳಿಗೆ ಬಳಸಬಹುದಾಗಿದೆ. ರೂ. ೮೦ ಲಕ್ಷದ ಈ ಘಟಕವು ಜಿಲ್ಲೆಯಲ್ಲಿ ೧೩ ಗ್ರಾಮ ಪಂಚಾಯಿತಿಗಳಿಗೆ ಮಂಜೂರಾಗಿದೆ ಎಂದರು. ಈ ಸಂದರ್ಭ ಕಸ ವಿಲೇವಾರಿ ಘಟಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತ್ಯಾಜ್ಯಗಳ ವರ್ಗೀಕರಣ ಕೊಠಡಿಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರಕುಮಾರ್, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ಸೋಮನಾಥ್, ರಫೀಕ್ಖಾನ್, ಆಲಿಕುಟ್ಟಿ, ರೇಷ್ಮ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಬಿ.ಕೆ. ಪ್ರಶಾಂತ್, ವಾಸುದೇವ್, ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಚಿ ರಮೇಶ್ ಪಿಳ್ಳೆ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಕೆ. ಮೋಹನ್, ಪಂಚಾಯಿತಿ ದ್ವಿತೀಯ ಲೆಕ್ಕಸಹಾಯಕಿ ಚಂದ್ರಕಲಾ, ಡಿ.ಎಂ. ಮಂಜುನಾಥ್, ಶ್ರೀನಿವಾಸ್ ಹಾಗೂ ಪೌರಕಾರ್ಮಿಕರು ಇದ್ದರು.