ಗೋಣಿಕೊಪ್ಪ ವರದಿ, ಡಿ. ೧೮: ನ್ಯಾಷನಲ್ ರೈಫಲ್ ಅಸೋಸಿಯೇಷನ್ ವತಿಯಿಂದ ಕೇರಳದ ವಟ್ಟವೂಡ್‌ಕಾವ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪದ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮತ್ತು ಕಾಲ್ಸ್ ಶಾಲೆಯ ೬ ಕ್ರೀಡಾಪಟುಗಳು ಭಾಗವಹಿಸಿ ಸಾಧನೆ ಮಾಡಿದ್ದಾರೆ.
ನಿಶ್ಮ ನೀಲಮ್ಮ ಟ್ರಯಲ್ಸ್ಗೆ ಆಯ್ಕೆ, ಎಸ್. ಅಭಿಷೇಕ್, ನಿಹಾ ಪ್ರಶಾಂತ್‌ಗೆ ಶೂಟರ್ ಬಹುಮಾನ ಪಡೆದರು. ಪಿ.ಪಿ. ಮುತ್ತಮ್ಮ, ವಿದ್ಯಾ ಅರುಣ್, ಸೋನಿಕಾ ಭಾಗವಹಿಸಿದ್ದರು.