ಮಡಿಕೇರಿ, ಡಿ. ೧೭: ಉಡುಪಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಮಡಿಕೇರಿಯ ವಿಶಾಲಾಕ್ಷಿ ವೈ ಎನ್ ಅವರು ಕಾಲ್ನಡಿಗೆ ಸ್ಪರ್ಧೆ ಹಾಗೂ ೮೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ೬೦ ವರ್ಷ ಮೇಲ್ಪಟ್ಟ ವಯೋಮಾನ ವಿಭಾಗದಲ್ಲಿ ಭಾಗವಹಿಸಿದ ಇವರು ೫ ನಿಮಿಷ ೬ ಸೆಕೆಂಡುಗಳಲ್ಲಿ ೮೦೦ ಮೀಟರ್ ಓಟ ಹಾಗೂ ೩ ಕಿ.ಮಿ ಕಾಲ್ನಡಿಗೆ ಸ್ಪರ್ಧೆಯನ್ನು ೨೪ ನಿಮಿಷಗಳಲ್ಲಿ ಪೂರೈಸುವ ಮೂಲಕ ೨ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.