ಗೋಣಿಕೊಪ್ಪ ವರದಿ, ಡಿ. ೧೭: ರೋಟರಿ ಸಂಸ್ಥೆ ಪರಿಸರ, ಜಲ ರಕ್ಷಣೆ, ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಲು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.

ರೋಟರಿ ಕಚೇರಿಯಲ್ಲಿ ಆಯೋಜಿಸಿದ್ದ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಅಂರ‍್ರಾಷ್ಟಿçÃಯ ಅಧ್ಯಕ್ಷೆ ಜೆನಿಫರ್ ಜೋನ್ಸ್ ಮಹಿಳಾ ಚಿಂತನೆಯAತೆ ವನಸಿರಿ, ಜಲಸಿರಿ, ಆರೋಗ್ಯ ಸಿರಿ, ವಿದ್ಯಾ ಸಿರಿ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲ ವರ್ಗಕ್ಕೂ ಯೋಜನೆ ತಲುಪಿಸುವ ಜವಾಬ್ದಾರಿ ನಿಭಾಯಿಸುತ್ತಿದೆ.

ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ೮೮ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಂದೇ ಒಂದು ಚೌಕಟ್ಟಿನಲ್ಲಿ ಮಾನವೀಯ ಮೌಲ್ಯಕ್ಕೆ ಬೆಲೆ ನೀಡುತ್ತಿದೆ. ಪರಿಸರ ಕಾಳಜಿ ಮೂಡಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪೋಲಿಯೋ ನಿರ್ಮೂಲನೆಯಲ್ಲಿ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ರೋಟರಿ ಕೈಜೋಡಿಸಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಮಾತ್ರ ಪೊಲಿಯೋ ರೋಗ ನಿರ್ಮೂಲನೆ ಆಗಬೇಕಿದೆ. ಈ ದೇಶಗಳು ಕೂಡ ಲಸಿಕೆ ನೀಡುವಲ್ಲಿ ಉತ್ತಮ ಸ್ಪಂದನ ನೀಡುತ್ತಿದ್ದು, ವಿಶ್ವದಲ್ಲಿ ಪೋಲಿಯೋ ನಿರ್ಮೂನೆಯಲ್ಲಿ ಮಹತ್ವದ ಕಾರ್ಯಕ್ರಮ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಆಡಳಿತ ಕಾರ್ಯದರ್ಶಿ ಕೆ. ನಾರಾಯಣಹೆಗ್ಡೆ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ೩೬೭೫ ಸದಸ್ಯರಿದ್ದು, ಸಭೆ, ಕಾರ್ಯಕ್ರಮಗಳ ಮೂಲಕ ಚಟುವಟಿಕೆಯಿಂದ ಮುನ್ನಡೆ ಯುತ್ತಿದೆ. ೮೫೪ ಪ್ರಾಜೆಕ್ಟ್, ೭೨ ನೀರು ಸಂರಕ್ಷಣೆ, ೩೭೩ ಪರಿಸರ, ೪೪೦ ವಿವಿಧ ಕಾರ್ಯಕ್ರಮಗಳ ಮೂಲಕ ಉದ್ದೇಶ ಈಡೇರಿಸುತ್ತಿದೆ ಎಂದರು. ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ. ಶುಭಾಷಿಣಿ ಮಾತನಾಡಿ, ಸಂಘದಿAದ ೬ ತಿಂಗಳಲ್ಲಿ ಸಾಮಾಜಿಕ ಜವಾಬ್ದಾರಿ ಹೊತ್ತ ೫೦ ಕಾರ್ಯಕ್ರಮಗಳು ಆಗಿವೆ.

ರಕ್ತದಾನ ಶಿಬಿರ, ಕ್ಯಾನ್ಸರ್ ರೋಗ ನಿರ್ಮೂಲನೆ ಜಾಗೃತಿ, ಗೋಣಿಕೊಪ್ಪದಲ್ಲಿ ಸ್ವಾಗತ ಫಲಕದ ಮೂಲಕ ಗ್ರಾಮಗಳ ಪರಿಚಯ ಮಾಹಿತಿ, ಉದ್ಯಾನ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಹಾಯಕ ಗವರ್ನರ್ ರತನ್ ತಮ್ಮಯ್ಯ, ವಲಯ ಸೇನಾನಿ ನೆವಿನ್ ಬೆಳ್ಯಪ್ಪ, ಕಾರ್ಯದರ್ಶಿ ಅರುಣ್ ತಮ್ಮಯ್ಯ ಇದ್ದರು.