ಮಡಿಕೇರಿ, ಡಿ. ೧೮: ಒಂದು ವರ್ಷದೊಳಗೆ ಕೊಡಗು ಜಿಲ್ಲೆಯಲ್ಲಿನ ವಿದ್ಯುತ್ ಸಂಬAಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ವಿದ್ಯುತ್ ಪರಿವೀಕ್ಷಣಾಧಿಕಾರಿ ತೀತಿರ ರೋಶನ್ ಅಪ್ಪಚ್ಚು ಭರವಸೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್‌ಕ್ಲಬ್‌ನ ೨೪ನೇ ವಾರ್ಷಿಕೋತ್ಸವ ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಇಂಧನ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸಂಬAಧಿತ ಸಮಸ್ಯೆಗಳು

(ಮೊದಲ ಪುಟದಿಂದ) ಹಲವಷ್ಟಿವೆ. ೫ ತಾಲೂಕುಗಳಲ್ಲಿಯೂ ಅಗತ್ಯವಾದಷ್ಟು ವಿದ್ಯುತ್ ಸರಬರಾಜು ಸಾಧ್ಯವಾಗುತ್ತಿಲ್ಲ. ಉಪಕೇಂದ್ರಗಳ ಸಂಖ್ಯೆಯೂ ಕಡಿಮೆ ಇದೆ. ಪ್ರಾಕೃತಿಕ ವಿಕೋಪದ ಬಳಿಕ ವಿದ್ಯುತ್ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿರುವುದು ತನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ದಕ್ಷಿಣ ಕೊಡಗಿನಲ್ಲಿ ಉಪಕೇಂದ್ರ ಸ್ಥಾಪನೆಗೆ ಯೋಜನೆ ತಯಾರಿಸಿ ಅನುಷ್ಠಾನ ಮಾಡಲಾಗುತ್ತಿದೆ. ಶ್ರೀಮಂಗಲ, ಹುದಿಕೇರಿ, ವೀರಾಜಪೇಟೆ, ಸಿದ್ದಾಪುರ, ಕಳತ್ಮಾಡು, ಭಾಗಮಂಡಲ, ಸಂಪಾಜೆ, ಕೊಡ್ಲಿಪೇಟೆ, ಹಾನಗಲ್ಲು, ಮಾದಾಪುರ, ಕೂಡಿಗೆ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಉಪಕೇಂದ್ರ ಸ್ಥಾಪಿಸುವ ಪ್ರಸ್ತಾವನೆಯೂ ಇದೆ. ಇದರಿಂದ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬಹುದಾಗಿದೆ. ಈ ಯೋಜನೆ ಕಾರ್ಯಗತ ಮಾಡಲಾಗುವುದು. ಹಾಸನದಿಂದ ವಿದ್ಯುತ್ ಕಲ್ಪಿಸಲು ಚಿಂತನೆ ಕೂಡ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ, ಕೈಗಾರಿಕೆ ಒಳಗೊಂಡAತೆ ಅಭಿವೃದ್ಧಿಗೆ ವಿದ್ಯುತ್‌ನ ಅವಶ್ಯಕತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ದೊರೆಯಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಳ್ಳಲಿದ್ದೇವೆ ಎಂದ ಅವರು, ಕೊಡಗಿಗೆ ಯಾವುದೇ ಇಲಾಖೆಗೆ ಸಂಬAಧಿಸಿದ ಸಹಾಯ ಮಾಡಲು ತಾನು ಸಿದ್ಧನಿದ್ದೇನೆ ಎಂದು ಭರವಸೆಯ ಮಾತುಗಳನ್ನಾಡಿದರು.

ಪ್ರೆಸ್‌ಕ್ಲಬ್ ಬೆಳ್ಳಿಹಬ್ಬ ಆಚರಣೆ ಸಮಿತಿಯ ಅಧ್ಯಕ್ಷ ಡಾ. ಉಳ್ಳಿಯಡ ಎಂ ಪೂವಯ್ಯ ಮಾತನಾಡಿ, ಒಂದು ಸಂಸ್ಥೆ ೨೫ ವರ್ಷ ಪೂರೈಸುವುದು ಮೈಲುಗಲ್ಲಾಗಿದೆ. ೨೪ ವರ್ಷ ಕ್ಲಬ್ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಬೆಳ್ಳಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಮಾದರಿಯಾಗಬೇಕೆಂದರು.

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ಭಾರತ ದೇಶ ಸ್ವಾವಲಂಬಿಯಾಗುತ್ತಿದೆ. ಎಲ್ಲಾ ರಂಗದಲ್ಲೂ ಸಮಸ್ಯೆಗಳು ಇರುತ್ತವೆ. ಧೈರ್ಯದಿಂದ ಪರಿಹಾರ ಕಂಡುಕೊಳ್ಳುವ ಮೂಲಕ ಮುಂದೆ ಸಾಗುವಂತೆ ಕರೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸದಸ್ಯರ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಸೃಷ್ಟಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ. ನಮ್ಮ ಚಿಂತನೆಗಳು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ವೈಯಕ್ತಿಕ ಬೆಳವಣಿಗೆಯೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪ್ರತಿಭಾ ಪುರಸ್ಕಾರ

ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಾದ ಆರ್. ಸಮರ್ಥ್, ಎಂ.ಕೆ. ಜೀಶ್ಮಾ, ಎಂ.ಕೆ ಜಸ್ಮಿತ, ಎ.ವಿ. ಸಮೃದ್ಧಿ, ಧರುಣ್ ಪ್ರಶೋಬ್, ಬಾಚರಣಿಯಂಡ ಪರಿಧಿ ಪೊನ್ನಮ್ಮ, ಪೊನ್ನೇಟಿ ತಿಷ್ಯಾ, ಕೆ.ಎಸ್. ದೀಕ್ಷಾ., ವಿ.ಎ. ಚಿಂತನ್, ಬಿ.ಎಸ್. ಚೇತನಾ ರೈ, ವಿ.ಜಿ. ಅಗಿಲ್, ಕೆ.ಜಿ. ಶಿವಾನಿ, ಪಿ.ಸಿ. ಕಾಜಲ್, ಅಲ್ಲಾರಂಡ ರಸಜನ ಮಾದಪ್ಪ, ಪಿ.ಪಿ. ಪ್ರೀಶ್ಮ, ಇ.ವಿ. ನಿಶಾನ್, ಎನ್. ಸಾಗರಿಕ ಎಸ್.ಪಿ, ಚಿತ್ತಾರ ಹಾಗೂ ಎಸ್.ಪಿ. ಇಂಚರ ಅವರುಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಜೊತೆಗೆ ರಾಜ್ಯ ಪ್ರಶಸ್ತಿ ಪಡೆದ ಬಿ.ಆರ್. ಸವಿತಾ ರೈ, ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪಡೆದ ಎ.ಆರ್ ಕುಟ್ಟಪ್ಪ, ನವೀನ್ ಸುವರ್ಣ, ಹಿರಿಕರ ರವಿ, ಚಂದನ್ ನಂದರಬೆಟ್ಟ, ಪಾರ್ಥ ಚಿಣ್ಣಪ್ಪ, ಹೆಚ್.ಕೆ ಜಗದೀಶ್, ಇಸ್ಮಾಯಿಲ್, ಅಕ್ಷಯ್ , ಕಿಶೋರ್ ನಾಚಪ್ಪ, ಸಂತೋಷ್ ರೈ, ಅನು ಕಾರ್ಯಪ್ಪ, ಜಗದೀಶ್ ಜೋಡುಬೀಟಿ, ರೆಜಿತ್ ಕುಮಾರ್ ಗುಹ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಲರವ

ವಾರ್ಷಿಕೋತ್ಸವ ಅಂಗವಾಗಿ ಸಂಘದ ಸದಸ್ಯರು ಹಾಗೂ ಕುಟುಂಬದವರಿಗೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ನೃತ್ಯ, ಗಾಯನ, ಛದ್ಮವೇಶ, ಮಹಿಳೆಯರಿಗಾಗಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳು ನಡೆದವು.

ಕಾರ್ಯಕ್ರಮದ ಸಂಚಾಲಕ ಕ್ಲಬ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರೆಜಿತ್ ಕುಮಾರ್ ಗುಹ್ಯ ಹಾಜರಿದ್ದರು. ನಿರ್ದೇಶಕ ನವೀನ್ ಡಿಸೋಜ ಸ್ವಾಗತಿಸಿ, ಸುನಿಲ್ ಪೊನ್ನೇಟಿ ನಿರೂಪಿಸಿ, ಖಜಾಂಜಿ ಬೊಳ್ಳಜ್ಜಿರ ಅಯ್ಯಪ್ಪ ವಂದಿಸಿದರು. ಕ.ಸ.ಪಾ ಮಡಿಕೇರಿ ಹೋಬಳಿ ಗೌರವ ಕಾರ್ಯದರ್ಶಿ ಪ್ರತಿಮಾ ಹರೀಶ್ ರೈ, ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ರೇವತಿ ರಮೇಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.