ವೀರಾಜಪೇಟೆ, ಡಿ. ೧೭: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ರೂ. ೫೩ ಲಕ್ಷ ಪರಿಹಾರ ವಿತರಿಸುವಂತೆ ವಿಮೆ ಕಂಪೆನಿಗೆ ನ್ಯಾಯಾಲಯ ಆದೇಶಿಸಿದೆ. ವೀರಾಜಪೇಟೆಯ ಮೀನುಪೇಟೆ ನಿವಾಸಿ ಆರ್.ಎಂ. ಪೈರೋಸ್ ೨೦೧೬ರಲ್ಲಿ ಅಪಘಾತಕ್ಕೆ ಒಳಗಾಗಿದ್ದು, ಈ ಸಂಬAಧ ೨೦೧೯ರಲ್ಲಿ ಅಪಘಾತದ ಪರಿಹಾರವನ್ನು ಕೋರಿ ವೀರಾಜಪೇಟೆಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ವೀರಾಜಪೇಟೆ ನ್ಯಾಯಾಲಯ ಪರಿಹಾರ ನೀಡುವಂತೆ ವಿಮೆ ಕಂಪೆನಿಗೆ ಆದೇಶಿಸಿದೆ. ಗಾಯಾಳು ಪೈರೋಸ್ ೨೨.೬.೨೦೧೬ರಂದು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಆತನ ವಾಹನಕ್ಕೆ ಆಲ್ಟೋ ಕಾರ್ ಡಿಕ್ಕಿ ಪಡಿಸಿತ್ತು. ಈ ಸಂಬAಧ ವೀರಾಜಪೇಟೆ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಿಸಲಾಗಿತ್ತು. ಗಾಯಾಳು ಯುವಕ ತೀವ್ರ ಸ್ವರೂಪದ ಅಪಘಾತಕ್ಕೆ ಒಳಗಾಗಿದ್ದರು. ಈ ಸಂಬAಧ ವೀರಾಜಪೇಟೆಯ ನ್ಯಾಯಾಲಯದಲ್ಲಿ ಪರಿಹಾರ ಕೋರಿ ಪ್ರಕರಣ ದಾಖಲಿಸಲಾಗಿತ್ತು. ಸಿವಿಲ್ ನ್ಯಾಯಾಧೀಶರಾದ ಎಂ.ಜೆ. ಲೋಕೇಶ್ ತೀರ್ಪು ನೀಡಿದ್ದು, ರೂಪಾಯಿ ೫೩ ಲಕ್ಷವನ್ನು ಶೇ. ೯ರ ಬಡ್ಡಿಯಂತೆ ವಿಮೆ ಕಂಪೆನಿ ಪಾವತಿಸಬೇಕೆಂದು ಆದೇಶ ನೀಡಿದೆ. ಪ್ರಕರಣದ ಅರ್ಜಿದಾರನ ಪರವಾಗಿ ವಕೀಲ ಡಿ.ಸಿ. ದ್ರುವ ವಕಾಲತ್ತು ವಹಿಸಿದ್ದರು.