ಮಡಿಕೇರಿ, ಡಿ. ೧೮: ಇಟಲಿಯಲ್ಲಿ ಜರುಗಿದ ಅಂತರರಾಷ್ಟಿçÃಯ ಮಟ್ಟದ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಮಹಿಳಾ ವಿಭಾಗದಿಂದ ಇದೇ ಪ್ರಥಮ ಬಾರಿಗೆ ದೇಶಕ್ಕೆ ಪದಕವೊಂದು ಲಭಿಸಿದೆ.
ಕೊಡಗಿನ ಕ್ರೀಡಾತಾರೆ ತೆಕ್ಕಡ ಭವಾನಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಡುವುದರೊAದಿಗೆ ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿಗೆ ಮತ್ತೊಂದು ಗರಿ ಮೂಡಿದಂತಾಗಿದೆ.
ಇಟಲಿಯಲ್ಲಿ ನಡೆದ ರೈಫೆಸನ್ ಲ್ಯಾಂಗ್ಲಾಫ್ ಕಪ್ ಕ್ರಾಸ್ಕಂಟ್ರಿ ಸ್ಕೀಯಿಂಗ್ ಸ್ಪರ್ಧೆಯಲ್ಲಿ ೫ ಕಿ.ಮೀ. ರೇಸ್ನಲ್ಲಿ ಭವಾನಿ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ.
ರಾಷ್ಟಿçÃಯ ಮಟ್ಟದಲ್ಲಿ ದಕ್ಷಿಣ ಭಾರತದಿಂದ ಸಾಧನೆ ಮಾಡಿದ್ದ ಏಕೈಕ ಸ್ಕೀಯಿಂಗ್ ಪಟುವಾಗಿದ್ದ ಭವಾನಿ ಅವರಿಗೆ ಇದು ಚೊಚ್ಚಲ ಅಂತರರಾಷ್ಟಿçÃಯ ಪದಕವಾಗಿದೆ. ಸ್ಕೀಯಿಂಗ್ ಕ್ರಾಸ್ಕಂಟ್ರಿಯಲ್ಲಿ ಭಾರತ ಮಹಿಳಾ ವಿಭಾಗದಲ್ಲಿ ಇದೇ ಪ್ರಥಮ ಬಾರಿಗೆ ಪದಕ ಪಡೆದುಕೊಂಡಿದೆ. ಈ ಸಾಧನೆಯ ಮೂಲಕ ಭವಾನಿ ೨೦೨೩ರ ಸ್ಲೊವೇನಿಯಾದಲ್ಲಿ ಫೆಬ್ರವರಿಯಲ್ಲಿ ಜರುಗಲಿರುವ ನಾರ್ಡಿಕ್ ವಿಶ್ವ ಚಾಂಪಿಯನ್ ಶಿಪ್ಗೂ ಅರ್ಹತೆ ಪಡೆದುಕೊಂಡಿದ್ದು, ದೇಶವನ್ನು ಪ್ರತಿನಿಧಿಸಲಿದ್ದಾರೆ.
ಭವಾನಿ ಮೂಲತಃ ನಾಪೋಕ್ಲು ಪೇರೂರಿನ ತೆಕ್ಕಡ ನಂಜುAಡ ಹಾಗೂ ಪಾರ್ವತಿ ದಂಪತಿಯ ಪುತ್ರಿ.