ಮಡಿಕೇರಿ, ಡಿ. ೧೮: ಬಿರುನಾಣಿ ಗ್ರಾಮ ಪಂಚಾಯಿತಿ ಬಾಡಗರಗ ಕೇರಿ ಗ್ರಾಮ ಕೂಟಿಯಾಲದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ದುರ್ಗವಾಹಿನಿ ಸಂಘಟನೆಯ ಮಾತೃ ಶಕ್ತಿ ಘಟಕ ರಚನೆ ಮಾಡಲಾಯಿತು.

ಪೊನ್ನಂಪೇಟೆ ತಾಲೂಕು ವಿ.ಎಚ್.ಪಿ ಅಧ್ಯಕ್ಷ ಪಂದ್ಯAಡ ಹರೀಶ್, ವಿ.ಎಚ್.ಪಿ. ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ಅಮ್ಮತೀರ ಸುರೇಶ್, ಪೊನ್ನಂಪೇಟೆ ತಾಲೂಕು ಭಜರಂಗದಳ ಸಂಚಾಲಕ ಅಣ್ಣೀರ ಸಜನ್ ಗಣಪತಿ, ಜಿಲ್ಲಾ ದುರ್ಗವಾಹಿನಿ ಸಂಯೋಜಕಿ ಅಂಬಿಕಾ ಉತ್ತಪ್ಪ, ಟಿ.ಶೆಟ್ಟಿಗೇರಿ ಘಟಕ ಭಜರಂಗದಳ ಅಧ್ಯಕ್ಷ ಮಿದೇರಿರ ಸಂತೋಷ್, ಟಿ.ಶೆಟ್ಟಿಗೇರಿ ಘಟಕ ಅಖಾಡ ಪ್ರಮುಖ್ ತಂಬುಕುತ್ತೀರ ಪೂವಣ್ಣ ಅವರ ಸಮ್ಮುಖದಲ್ಲಿ ಘಟಕ ರಚನೆ ಆಯಿತು. ಕೂಟಿಯಾಲ ಘಟಕದ ವಿ.ಎಚ್.ಪಿ. ಅಧ್ಯಕ್ಷ ಮುತ್ತು, ಕಾರ್ಯದರ್ಶಿ ಕೃಷ್ಣ, ಭಜರಂಗದಳ ಸಂಚಾಲಕ ಶರತ್, ಸಹ ಸಂಚಾಲಕ ಕೀರ್ತನ್, ಗೋ ರಕ್ಷಕ್ ಪ್ರಮುಖ್ ಮಣಿಕಂಠ, ಸಹ ಪ್ರಮುಖ್ ಕೀರ್ತಿ ಕುಮಾರ್, ಅಖಾಡ ಪ್ರಮುಖ್ ಕವೀನ್, ಸುರಕ್ಷ ಪ್ರಮುಖ್ ರಂಜಿತ್, ಮಾತೃ ಶಕ್ತಿ ಪ್ರಮುಖ್ ಸರಳ, ಸಹ ಪ್ರಮುಖ್ ಪ್ರೇಮ, ದುರ್ಗವಾಹಿನಿ ಸಂಯೋಜಕ ಕೆ.ಜಿ. ಕೃತಿಕ, ಸತ್ಸಂಗ ಪ್ರಮುಖ್ ಲೋಕೇಶ್ ಇವರುಗಳನ್ನು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಲಾಯಿತು.