ವೀರಾಜಪೇಟೆ, ಡಿ. ೧೭: ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್ (ಬಿ.ಐ.ಇ) ಕಳೆದ ವರ್ಷ ನಡೆಸಿದ ಡಿಪ್ಲೋಮಾ ಇನ್ ಇಸ್ಲಾಮಿಕ್ ಸ್ಟಡೀಸ್ ಪರೀಕ್ಷೆಯ ಕನ್ನಡ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಅನೀಶಾ ರಿಯಾಝ್ ಅವರನ್ನು ಮಹಲ್ ಸಂಗಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಪಿ.ಕೆ. ಅಬ್ದುಲ್ ರೆಹೆಮಾನ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಕೆ.ಟಿ. ಬಷೀರ್ ಹಾಗೂ ಕೆ.ಪಿ. ಯೂಸುಫ್ ಹಾಜಿ ಹಾಜರಿದ್ದರು.