ಮಡಿಕೇರಿ, ಡಿ. ೧೬: ವಕೀಲರ ಸಂರಕ್ಷಣೆ ಕಾಯಿದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಇಂದು ಮಡಿಕೇರಿಯ ವಕೀಲರು ನ್ಯಾಯಾಲಯ ಮುಂಭಾಗ ಪ್ರತಿಭಟಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ಮಾತನಾಡಿ, ವಕೀಲರು ನ್ಯಾಯಾಂಗದ ಗೌರವ ಮತ್ತು ಘನತೆಯನ್ನು ಕಾಪಾಡಿಕೊಂಡು ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಕೆಲಸ ಮಾಡುವಾಗ ಸಾರ್ವಜನಿಕರಿಂದಲೂ, ಪೊಲೀಸರಿಂದಲೂ ದೌರ್ಜನ್ಯ, ಬೆದರಿಕೆ, ಹಲ್ಲೆ ನಡೆಯುತಿದ್ದು, ಜನ ಸಾಮಾನ್ಯರಿಗೆ ರಕ್ಷಣೆ ಕೊಡುವ ವಕೀಲರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ವಕೀಲರು ಭಯದ ವಾತಾವರಣ ದಲ್ಲಿ ಕೆಲಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಹೇಳಿದರು.
ವಕೀಲರ ಸಂರಕ್ಷಣೆ ಕಾಯಿದೆ ೨೦೨೧ನ್ನು ಜಾರಿಗೆ ತಂದು ವಕೀಲರು ನಿರ್ಭಯವಾಗಿ ಕೆಲಸ ಮಾಡುವಂತ ಸನ್ನಿವೇಶ ಸರ್ಕಾರ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದರು. ಕಾಯಿದೆ ಜಾರಿಗೆ ತರದಿದ್ದರೆ ಮುಂದೆ ವಕೀಲರ ಮೇಲೆ ನಿರಂತರ ದೌರ್ಜನ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿ ಸಿದರು. ಬೆಳಗಾವಿಯಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ವಕೀಲರ ಸಂರಕ್ಷಣೆ ಕಾಯಿದೆಯನ್ನು ಮಂಡಿಸಬೇಕು ಮತ್ತು ಕಾನೂನನ್ನು ಜಾರಿಗೆ ತಂದು ವಕೀಲ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದÀರ್ಭ ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷ ಕೆ.ಎಸ್. ತಮ್ಮಯ್ಯ, ಜಂಟಿ ಕಾರ್ಯದರ್ಶಿ ಎಂ.ವಿ. ಸಂಜಯ್ ರಾಜ್, ಖಜಾಂಚಿ ಬಿ.ಸಿ. ದೇವಿಪ್ರಸಾದ್, ಪದಾಧಿಕಾರಿ ಗಳಾದ ಡಿ.ಕೆ. ರಾಜೇಶ್, ಪಿ.ಆರ್. ಚಂದನ್, ಡಿ.ಎನ್. ಡೊಮಿನಿಕ್, ಭಾನುಪ್ರಕಾಶ್, ತಾಹ ಯಾಸೀನ್, ಸುದಯ್ ನಾಣಯ್ಯ, ದಿವ್ಯಾ ನಂಜಪ್ಪ, ಲತಾಕುಮಾರಿ ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದು ಭಾಗವಹಿಸಿದ್ದರು.