ಕೂಡಿಗೆ, ಡಿ. ೧೭: ಗುಡ್ಡೆಹೊಸೂರು-ಕುಶಾಲನಗರ ನಡುವಿನ ರಾಷ್ಟಿçÃಯ ಹೆದ್ದಾರಿಯಲ್ಲಿ ತಾ. ೧೬ರ ರಾತ್ರಿ ಮ್ಯಾಕ್ಸಿಕ್ಯಾಬ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮ್ಯಾಕ್ಸಿಕ್ಯಾಬ್‌ನಲ್ಲಿದ್ದ ೮ ಮಂದಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮ್ಯಾಕ್ಸಿಕ್ಯಾಬ್ (ಕೆಎ ೪೬ ೨೨೯೯) ಕುಶಾಲನಗರದಿಂದ ಸುಂಟಿಕೊಪ್ಪದ ಕಡೆಗೆ ಬರುತ್ತಿದ್ದ ಬಲೆನೋ ಕಾರು (ಕೆಎ ೧೨ ಝೆಡ್ ೮೫೬೦) ನಡುವೆ ಗುಡ್ಡೆಹೊಸೂರುವಿನಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಮ್ಯಾಕ್ಸಿಕ್ಯಾಬ್‌ನಲ್ಲಿದ್ದ ಒಟ್ಟು ೧೨ ಮಂದಿ ಪೈಕಿ ೮ ಮಂದಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ. ಗಾಯಾಳುಗಳನ್ನು ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಗಾಯಗೊಂಡ ರೈತರು ಕೇರಳ ರಾಜ್ಯದ ಕಾಸರಗೋಡಿಗೆ ಕೃಷಿ ಮೇಳದ ಸಮಾರಂಭಕ್ಕೆ ತೆರಳಿ ವಾಪಾಸ್ ಬರುವಾಗ ಘಟನೆ ಸಂಭವಿಸಿದೆ.

ಎರಡು ವಾಹನಗಳ ಮುಂಭಾಗವೂ ಸಂಪೂರ್ಣವಾಗಿ ಜಖಂಗೊAಡಿವೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.