ಕೂಡಿಗೆ, ಡಿ. ೧೭: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಜಲಮೂಲಗಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ನೆರವೇರಿಸಿ ನಂತರ ಮಾತನಾಡಿ, ಜಲಮೂಲಗಳ ಸಂರಕ್ಷಣಾ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು. ಆಂದೋಲನ ಕಾರ್ಯಾಗಾರದಲ್ಲಿ ಜಲಜೀವನ್ ಮಿಷನ್ ಯೋಜನೆಯ ಗುರಿ ಮತ್ತು ಉದ್ದೇಶ, ಸಮುದಾಯದ ಸಹಭಾಗಿತ್ವದ ಬಗ್ಗೆ, ಬೂದು ನೀರಿನ ನಿರ್ವಹಣೆ ಮಾಡುವ ಕುರಿತು, ಮಳೆ ನೀರು ಕೊಯ್ಲು ಅಳವಡಿಸಿಕೊಂಡು ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಹಾಗೂ ಕುಡಿಯುವ ನೀರಿನ ಮಿತ ಬಳಕೆ ಕುರಿತು, ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ಜೆಜೆಎಂ ವಿಭಾಗದ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಜೆಜೆಎಂ ಅನುಷ್ಠಾನ ಬೆಂಬಲ ಸಂಸ್ಥೆಯಾದ ಕ್ರೆಡಿಟ್ ಐ ಸಂಸ್ಥೆಯ ಜಗ್ಗೇಶ್, ಪವನ್, ಶಾಲಾ ಶಿಕ್ಷಕರಾದ ದಿನೇಶ್ ಆಚಾರಿ, ನಾಗೇಂದ್ರ, ಜಗದೀಶ್, ಮಂಜು, ಚಿದಂಬರ,ಅಶ್ವತಿ, ಸೇರಿದಂತೆ ಸಂಸ್ಥೆಯ ಸಂಯೋಜಕರು, ಇಲಾಖೆ ಅಧಿಕಾರಿ ವರ್ಗದವರು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಜಲಮೂಲಗಳ ಕುರಿತು ಜಾಥಾ ಕಾರ್ಯಕ್ರಮವು ನಡೆಯಿತು.