ವೀರಾಜಪೇಟೆ, ಡಿ. ೧೬: ವಿದ್ಯಾರ್ಥಿಗಳಲ್ಲಿ ಬಹುಮುಖ ಪ್ರತಿಭೆಗಳು ಅಡಗಿವೆ. ಪ್ರತಿಭೆಗಳನ್ನು ಅನಾವರಣ ಮಾಡಲು ವೇದಿಕೆ ಗಳನ್ನು ಕಲ್ಪಿಸಿಕೊಡಲು ಕಾಲೇಜುಗಳು ಮುಂದಾಗಬೇಕು ಎಂದು ಮೈಸೂರು ಬೃಂದಾವನ ಆಸ್ಪತ್ರೆಯ ನಿರ್ದೇಶಕ ಅಪ್ಪನೆರವಂಡ ಮನೋಜ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ಪದವಿ ಕಾಲೇಜು ವೀರಾಜಪೇಟೆ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ಕಾವೇರಿ ಅನೋಕ ವಿದ್ಯಾರ್ಥಿಗಳ ಪ್ರತಿಭಾ ಉತ್ಸವ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮನೋಜ್ ಕುಮಾರ್ ಅವರು, ವಿದ್ಯಾರ್ಥಿ ಜೀವನವು ಅಮೂಲ್ಯವಾದದು. ಒಮ್ಮೆ ಕಳೆದುಹೋದ ಬಾಲ್ಯ ಮತ್ತೊಮ್ಮೆ ಹಿಂದಿರುಗುವುದಿಲ್ಲ ಎಂಬುವುದು ಪ್ರಕೃತಿ ನಿಯಮ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಪ್ರಮುಖ ಆದ್ಯತೆ ನೀಡುವುದು ವಿದ್ಯಾರ್ಥಿಗಳ ಗುರಿಯಾಗಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆಗಳು ಹುದುಗಿರುತ್ತದೆ. ಪೋಷಕರು ಮತ್ತು ಗುರುಸ್ಥಾನದಲ್ಲಿರುವವರು ಗುರುತಿಸಿ ಬಹಿರಂಗಗೊಳಿಸಬೇಕು ಎಂದರು.

ಕಾವೇರಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಇಟ್ಟೀರ ಬಿದ್ದಪ್ಪ ಅವರು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿ ರೂಪುಗೊಳಿ ಸುವ ದೇಗುಲವಾಗಿವೆ. ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಸಂಯಮ, ಬಹು ಮುಖ್ಯ. ಕಲಿಕೆಯ ಮೇಲಿರುವ ಉದಾತ್ತವಾದ ನಂಬಿಕೆಯಿAದ ಮಾತ್ರ ಉತ್ತರೋತ್ತರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ವೇದಿಕೆಯಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ. ಬಿ.ಎನ್. ಶಂಕರ್‌ನಾರಾಯಣ್, ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್.ಎಂ. ನಾಣಯ್ಯ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ. ಕೆ.ಜಿ. ವೀಣಾ, ಕಾಲೇಜು ವಿದ್ಯಾರ್ಥಿ ಅಭಿವೃದ್ಧಿ ಸಂಘದ ಸಲಹೆಗಾರ ಬೆನೆಡಿಕ್ಟ್ ಸಾಲ್ಡನ್ನಾ, ಉಪಸ್ಥಿತ ರಿದ್ದರು. ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೂರ್ನಾಡು, ಸರ್ಕಾರಿ ಪದವಿಪೂರ್ವ ಕಾಲೇಜು ವೀರಾಜಪೇಟೆ, ಮಾರುತಿ ಪದವಿ ಪೂರ್ವ ಕಾಲೇಜು ಮೂರ್ನಾಡು, ರ‍್ಯಾಫೆಲ್ಸ್ ಪದವಿಪೂರ್ವ ಕಾಲೇಜು ನಾಪೋಕ್ಲು ಕಾವೇರಿ ಕಾಲೇಜು ಗೋಣಿಕೊಪ್ಪಲು, ಕಾವೇರಿ ಕಾಲೇಜು ವೀರಾಜಪೇಟೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಪಾಲಿಬೆಟ್ಟ, ಒಟ್ಟು ಏಳು ಕಾಲೇಜುಗಳಿಂದ ೧೭೨ ಮಂದಿ ವಿದ್ಯಾರ್ಥಿಗಳು ಆವಿಷ್ಕಾರ (ರೀಲ್ಸ್) ಸ್ವರಾಂಜಲಿ (ದೇಶಭಕ್ತಿ ಗೀತೆ) ಗುಂಗುರೂ (ಜನಪದ ನೃತ್ಯ) ತಲಾಶ್ (ನಿಧಿ ಹುಡುಕುವುದು) ತಾಕತ್ತ್ (ಹಗ್ಗಜಗ್ಗಾಟ) ಸ್ರುೃತಿ (ಗ್ರಹಿಕೆ ಶಕ್ತಿ) ಎಂಬ ಏಳು ವಿಭಾಗಗಳಲ್ಲಿ ವಿದ್ಯಾರ್ಥಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಪಾರಿತೋಷಕಗಳನ್ನು ವಿತರಿಸಲಾಯಿತು. ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಚಿತ್ರಕ್ಷಾ, ವಿಷ್ಣು ಮಾಸ್ಟರ್ ಕಾರ್ಯನಿರ್ವಹಿಸಿದರು. ಅಮ್ಮಣಿಚಂಡ ಪ್ರವೀಣ್ ಮತ್ತು ಮುಲ್ಲೇಂಗಡ ರೇವತಿ ಪೂವಯ್ಯ ಗೀತಾ ಗಾಯನ ಸ್ಪರ್ಧೆಗೆ ತೀರ್ಪು ಗಾರರಾಗಿ ಕಾರ್ಯನಿರ್ವಹಿಸಿದರು.

ಕಾವೇರಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ. ಕೆ.ಜಿ. ವೀಣಾ ಸ್ವಾಗತಿಸಿದರೆ, ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ತೌಸೀಫ್, ದೀಕ್ಷಿತಾ ಪೊನ್ನಮ್ಮ, ಎ.ಆರ್. ಮುತ್ತಮ್ಮ ಮತ್ತು ಉಪನ್ಯಾಸಕಿ ಅಂಬಿಕ ಉತ್ತಪ್ಪ ಕಾರ್ಯಕ್ರಮ ನಿರೂಪಣೆ ಮಾಡಿದರು, ಉಪನ್ಯಾಸಕ ಬೆನಡಿಕ್ಟ್ ಸಲ್ಡಾನ ಅವರು ಸರ್ವರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಕಾವೇರಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳು ಹಾಜರಿದ್ದರು.