ಸೋಮವಾರಪೇಟೆ, ಡಿ. ೧೭: ತಾಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್ನ ೨೦೨೧-೨೨ನೇ ಸಾಲಿನ ಸರ್ವ ಸದಸ್ಯರ ಸಭೆ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯಿತು.

ಟ್ರಸ್ಟ್ ಅಧ್ಯಕ್ಷ ಎಂ.ಟಿ. ದಾಮೋದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಲವು ವಿಚಾರಗಳ ಬಗ್ಗೆ ಹಿರಿಯ ನಾಗರಿಕರು ಚರ್ಚಿಸಿದರು. ಹಿರಿಯ ನಾಗರಿಕರಿಗೆ ಸಂಬAಧಿಸಿದ ಕೆಲವು ಕಾನೂನುಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಸರಕಾರಿ ಕಚೇರಿಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ನೀಡಿ ಅವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕೆಂದು ರಾಜ್ಯ ಸರಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಮೂಲಕ ೨೦೨೧ರ ಜೂನ್ ತಿಂಗಳಲ್ಲಿ ಆದೇಶ ಹೊರಡಿಸಿದ್ದರೂ ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಇದು ಪಾಲನೆಯಾಗುತ್ತಿಲ್ಲ ಎಂದು ಬಹುತೇಕ ಹಿರಿಯ ನಾಗರಿಕರು ಸಭೆಯ ಗಮನಕ್ಕೆ ತಂದರು. ಖಾಸಗಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕೆಂದು ನಿವೃತ್ತ ಮುಖ್ಯ ಶಿಕ್ಷಕ ಹಾಲೇಬೇಲೂರು ನಿರ್ವಾಣಿ ಶೆಟ್ಟಿ ಹೇಳಿದರು. ಧಾರ್ಮಿಕ ಕ್ಷೇತ್ರಗಳಲ್ಲಿ ಹಿರಿಯರನ್ನು ಸರದಿ ಸಾಲಿನಲ್ಲಿ ನಿಲ್ಲಿಸುತ್ತಾರೆ. ಬಹುತೇಕರು ವಯೋಸಹಜ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆಯುವಂತೆ ನಿವೃತ್ತ ಪ್ರಾಂಶುಪಾಲ ಪುಟ್ಟುಸ್ವಾಮಿ ಹೇಳಿದರು. ಆಸ್ತಿ ದುರಸ್ತಿಗೆ ಸಂಬAಧಿಸಿದ ಕಡತಗಳು ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಧೂಳು ಹಿಡಿದಿದೆ. ಕಚೇರಿಗೆ ಪ್ರತಿ ಸೋಮವಾರ ಅಲೆದು ಸಾಕಾಗಿದೆ ಎಂದು ಹಿರಿಯ ನಾಗರಿಕರಾದ ಐ.ಹೆಚ್. ನಿಂಗಪ್ಪ ಹೇಳಿದರು.

ಹಿರಿಯ ನಾಗರಿಕರಿಗೆ ಇಲಾಖೆಯಿಂದ ದೊರಕುವ ಸೌಲಭ್ಯಗಳ ಕುರಿತು ಕ್ಷೇತ್ರ ಜಿಲ್ಲಾ ನಿರ್ವಹಣಾಧಿಕಾರಿ ಕೆ.ವಿ. ಭರತ್ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಕೆ.ಎಸ್. ಶ್ರೀಕಂಠ, ಕಾರ್ಯದರ್ಶಿ ಸಿ.ಕೆ. ಮಲ್ಲಪ್ಪ, ಸಹಕಾರ್ಯದರ್ಶಿ ಹೆಚ್.ಸಿ. ಚಂಗಪ್ಪ, ಖಜಾಂಚಿ ಡಿ.ಟಿ. ಪುರಂದರ ಮತ್ತಿತರ ಪದಾಧಿಕಾರಿಗಳು ಇದ್ದರು.