ಕೂಡಿಗೆ, ಡಿ. ೧೭: ಹಾರಂಗಿ ಯಲ್ಲಿರುವ ವೃಕ್ಷೋದ್ಯಾನ ಮತ್ತು ಸಾಕಾನೆ ಶಿಬಿರಕ್ಕೆ ತೆರಳುವ ರಸ್ತೆಯ ದುರಸ್ತಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳ ಒದಗಿಸುವಂತೆ ಕೂಡು ಮಂಗಳೂರು ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್ ನಾಯಕ್ ಸಂಬAಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದರು.

ಸದಸ್ಯ ಭಾಸ್ಕರ್ ನಾಯಕ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಂ ಅವರನ್ನು ಭೇಟಿ ಮಾಡಿ ಅಭಿವೃದ್ಧಿಪಡಿಸುವ ವಿಷಯಗಳ ಬಗ್ಗೆ ಚರ್ಚಿಸಿದರು. ಪ್ರವಾಸಿಗರನ್ನು ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಆಗಬೇಕಾದಂತ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಯಿತು. ಪ್ರವೇಶ ದ್ವಾರದಿಂದ ಆನೆಗಳು ಇರುವ ಸ್ಥಳಕ್ಕೆ ಸುಮಾರು ೨ ಕಿಲೋಮೀಟರ್ ದೂರವಿದ್ದು, ರಸ್ತೆಯು ತೀರಾ ಹದಗೆಟ್ಟು ಕೆಸರುಮ ಯವಾಗಿರುವುದರಿಂದ ರಸ್ತೆಯನ್ನು ಸರಿಪಡಿಸುವುದು ಮತ್ತು ಸಫಾರಿ ವಾಹನ ವ್ಯವಸ್ಥೆಯನ್ನು ಮಾಡುವಂತೆ ಗಮನ ಸೆಳೆದರು. ಅರಣ್ಯ ಇಲಾಖೆಯ ವತಿಯಿಂದ ರೂ. ೫ ಲಕ್ಷ ನಷ್ಟ ಹಣ ಬಿಡುಗಡೆಯಾಗಿದ್ದು, ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ವಾಹನಗಳ ಚಾಲನೆ ಅನುಕೂಲ ವಾಗಲೂ ರಸ್ತೆಯ ವ್ಯವಸ್ಥೆ ಮಾಡಲಾಗುವುದು. ಇದರ ಜೊತೆಯಲ್ಲಿ ಅಭಿವೃದ್ಧಿಯ ಕ್ರಿಯಾ ಯೋಜನೆ ಸಿದ್ದವಾಗಿದ್ದು, ಅದರ ಅನುಗುಣವಾಗಿ ರಾಜ್ಯ ಸರಕಾರದಿಂದ ಹಣ ಬಿಡುಗಡೆ ಅದ ತಕ್ಷಣವೇ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೊಳಲಾಗುವುದು ಎಂದು ಕುಶಾಲನಗರದ ವಲಯ ಅರಣ್ಯ ಅಧಿಕಾರಿ ಶಿವರಾಮ್ ತಿಳಿಸಿದ್ದಾರೆ.