ಮಡಿಕೇರಿ, ಡಿ. ೧೭: ಲೋಕೋಪಯೋಗಿ ಇಲಾಖೆ, ಮಡಿಕೇರಿ ವಿಭಾಗದ ವತಿಯಿಂದ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ, ೨೦೨೧-೨೨ ಮತ್ತು ೨೦೨೨-೨೩ನೇ ಸಾಲಿನಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಸರ್ಕಾರದ ವತಿಯಿಂದ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿಸಿದ್ದು, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿ, ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಹಾಗೆಯೇ ಹಲವು ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿ ವಿವಿಧ ಹಂತದಲ್ಲಿದ್ದು, ಡಿಸೆಂಬರ್ ಅಂತ್ಯದೊಳಗೆ ಗುತ್ತಿಗೆದಾರರನ್ನು ನಿಗದಿಪಡಿಸಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ತಿಳಿಸಿದ್ದಾರೆ.
ಕಾಮಗಾರಿಯ ವಿವರ ಇಂತಿದೆ: ೨೦೨೧-೨೨ ಹಾಗೂ ೨೦೨೨-೨೩ನೇ ಸಾಲಿನಲ್ಲಿ ಅಪೆಂಡಿಕ್ಸ್-ಇ ವೀರಾಜಪೇಟೆ ಕ್ಷೇತ್ರದಲ್ಲಿ ಅನುಮೋದನೆಯಾದ ಕಾಮಗಾರಿಗಳಿಗೆ ಒಟ್ಟು ರೂ. ೨೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ೧೫ ಕಾಮಗಾರಿ ತೆಗೆದುಕೊಳ್ಳಲಾಗಿದ್ದು ಟೆಂಡರ್ ಆಹ್ವಾನಿಸಲಾಗಿದೆ. ೨೦೨೨ ರ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಗೆ ಗುತ್ತಿಗೆದಾರರನ್ನು ನಿಗದಿಪಡಿಸಿ ಕಾಮಗಾರಿ ಪ್ರಾರಂಭವಾಗಲಿದೆ.
ಮಡಿಕೇರಿ ತಾಲೂಕು ಮಡಿಕೇರಿ-ಭಾಗಮಂಡಲ-ಕರಿಕೆ-ತಣ್ಣಿಮಾನಿ ರಸ್ತೆ ಕಿ.ಮೀ. ೫೧ ರಿಂದ ೫೨ ಹಾಗೂ ೫೭.೭೦ ರಿಂದ ೫೯.೭೦ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦೦ ಲಕ್ಷ, ಮಡಿಕೇರಿ ತಾಲೂಕು ಹುಣಸೂರು-ತಲಕಾವೇರಿ ರಸ್ತೆ ಕಿ.ಮೀ. ೮೪ ರಿಂದ ೮೬ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦೦ ಲಕ್ಷಗಳು, ಮಡಿಕೇರಿ ತಾಲೂಕು ಕಡಂಗ-ಎಡಪಾಲ-ಬಾವಲಿ-ಚೆಯ್ಯAಡಣೆ ರಸ್ತೆ ಕಿ.ಮೀ. ೬.೩೦ ರಿಂದ ೧೨ ರವರೆಗೆ ಅಭಿವೃದ್ಧಿ ಕಾಮಗಾರಿಗೆ ೧೯೦ ಲಕ್ಷ, ಮಡಿಕೇರಿ ತಾಲೂಕು ಕೆ. ಪೆರಾಜೆ-ಆಲಟ್ಟಿ-ಕಾಪುಮಲೆ-ಮಂದಾಲಪಡಿ ಕುಂಬಳಚೇರಿ ವಿಎಸ್ಎಸ್ಎನ್ ರಸ್ತೆ ಕಿ.ಮೀ. ರಸ್ತೆ ಕಿ.ಮೀ. ೨ ರಿಂದ ೧೨ ರವರೆಗೆ ಅಭಿವೃದ್ಧಿ ಕಾಮಗಾರಿಗೆ ೧೭೦ ಲಕ್ಷಗಳು.
ಮಡಿಕೇರಿ ತಾಲೂಕು ತಾಳತ್ಮನೆ-ಮೇಕೇರಿ-ಬಿಳಿಗೇರಿ-ಅರವತ್ತೋಕ್ಲು ಬೆಟ್ಟಗೇರಿ ರಸ್ತೆ ಕಿ.ಮೀ. ೭ ರಿಂದ ೧೨ ರವರೆಗೆ ಅಭಿವೃದ್ಧಿ ಕಾಮಗಾರಿಗೆ ೧೬೫ ಲಕ್ಷ, ವೀರಾಜಪೇಟೆ ತಾಲೂಕು ಪೊನ್ನಂಪೇಟೆ-ಕಾನೂರು-ನಿಟ್ಟೂರು ರಸ್ತೆ ಕಿ.ಮೀ. ೧೬.೬೦ ರಿಂದ ೧೭.೬೦ ಮತ್ತು ಕಿ.ಮೀ. ೨೧.೮೦ ರಿಂದ ೨೨.೬೦ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦೦ ಲಕ್ಷಗಳು, ವೀರಾಜಪೇಟೆ ತಾಲೂಕು ಬಿಟ್ಟಂಗಾಲ-ಕೂಟಿಯಾಲ ರಸ್ತೆ ಕಿ.ಮೀ. ೨.೫೦ ರಿಂದ ೪.೫೦ ರವರೆಗೆ ಮತ್ತು ೮ ರಿಂದ ೮.೬೦ ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ೨೦೦ ಲಕ್ಷಗಳು, ವೀರಾಜಪೇಟೆ ತಾಲೂಕು ಬೇತ್ರಿ-ಹೆಮ್ಮಾಡು-ಪಾರಾಣೆ ರಸ್ತೆ ಕಿ.ಮೀ. ೧ ರವರೆಗೆ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦೦ ಲಕ್ಷಗಳು.
ಮಡಿಕೇರಿ ತಾಲೂಕು ಕೊರಂಗಾಲ-ಚೇರAಗಾಲ-ಭಾಗಮAಡಲ ರಸ್ತೆ ಕಿ.ಮೀ. ೯ ರವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೭೫ ಲಕ್ಷಗಳು, ವೀರಾಜಪೇಟೆ ತಾಲೂಕು ಒಂಟಿಯAಗಡಿ-ಹಚ್ಚಿನಾಡು ರಸ್ತೆ ಕಿ.ಮೀ. ೫ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦೦ ಲಕ್ಷಗಳು, ವೀರಾಜಪೇಟೆ ತಾಲೂಕು ಶ್ರೀಮಂಗಲ-ನಾಲ್ಕೇರಿ ರಸ್ತೆ ಕಿ.ಮೀ. ೫ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦೦ ಲಕ್ಷಗಳು, ವೀರಾಜಪೇಟೆ ತಾಲೂಕು ಮಾಯಮುಡಿ-ಬಾಳಾಜಿ-ಜೋಡುಬೆಟ್ಟಿ-ಕುಂದ ರಸ್ತೆ ಕಿ.ಮೀ. ೪ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦೦ ಲಕ್ಷ, ವೀರಾಜಪೇಟೆ ತಾಲೂಕು ಕೆದಮುಳ್ಳೂರು-ಕಡಂಗ ರಸ್ತೆ ಕಿ.ಮೀ. ೬ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೨೦೦ ಲಕ್ಷ, ವೀರಾಜಪೇಟೆ ತಾಲೂಕು ಬಿಟ್ಟಂಗಾಲ - ವಿ. ಬಾಡಗ-ಕುಟ್ಟಂದಿ - ಬಿ. ಶೆಟ್ಟಿಗೇರಿ ರಸ್ತೆ ಕಿ.ಮೀ. ೪ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦೦ ಲಕ್ಷ ಹಾಗೂ ವೀರಾಜಪೇಟೆ ತಾಲೂಕು ನಲ್ಲೂರು-ಬೆಸಗೂರು-ಬೆಕ್ಕೆಸೊಡ್ಲೂರು ರಸ್ತೆ ಕಿ.ಮೀ. ೪ ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. ೧೦೦ ಲಕ್ಷಗಳು ಒಟ್ಟು ರೂ. ೨೦೦೦ ಲಕ್ಷ.
ನಬಾರ್ಡ್-೨೭ ರಡಿಯಲ್ಲಿ ರೂ. ೨.೩೦ ಕೋಟಿಗೆ ಮಡಿಕೇರಿ-ಕುಟ್ಟ ರಸ್ತೆಯ ಸರಪಳಿ ೨೫.೯೫ ಕಿ.ಮೀ.ನಲ್ಲಿ ರಸ್ತೆ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿ ತೆಗೆದುಕೊಳ್ಳಲಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ವೀರಾಜಪೇಟೆ ತಾಲೂಕು ಹುಣಸೂರು-ತಲಕಾವೇರಿ ರಸ್ತೆಯ ಸರಪಳಿ ೨೧.೬೦ ರಿಂದ ೬೧ ಕಿ.ಮೀ. ರವರೆಗೆ (ಆಯ್ದ ಭಾಗಗಳಲ್ಲಿ) ಅಭಿವೃದ್ಧಿ ಹಾಗೂ ವೀರಾಜಪೇಟೆ ತಾಲೂಕು ಕೊಣನೂರು-ಮಾಕುಟ್ಟ ರಸ್ತೆಯ ಸರಪಳಿ ೫೦.೨೬ ಕಿ.ಮೀ. ರಿಂದ ೭೫ ರವರೆಗೆ (ಆಯ್ದ ಭಾಗಗಳಲ್ಲಿ) ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ರೂ. ೨೩ ಕೋಟಿ ಅಂದಾಜು ಮೊತ್ತದಲ್ಲಿ ತೆಗೆದುಕೊಳ್ಳಲಾಗಿದ್ದು ಎಂ.ಎಸ್. ರೇವಣ್ಣ (ಅನ್ನಪೂರ್ಣೇಶ್ವರಿ ಕನ್ಸ್ಸ್ಟçಕ್ಷನ್) ಗುತ್ತಿಗೆದಾರರು, ಮೈಸೂರು ಅವರು ಕಾಮಗಾರಿ ಪ್ರಾರಂಭಿಸಿರುತ್ತಾರೆ. ಅಮ್ಮತ್ತಿ-ವೀರಾಜಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿಯು ಪ್ರಗತಿಯಲ್ಲಿದೆ.
೨೦೨೨-೨೩ನೇ ಸಾಲಿನ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ನಿರ್ವಹಣಾ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಆಗಿಂದಾಗ್ಗೆ ಬೀಳುತ್ತಿರುವ ಮಳೆಯಿಂದಾಗಿ ನಿರ್ವಹಣಾ ಕಾಮಗಾರಿ ಪ್ರಾರಂಭಿಸಲು ವಿಳಂಬವಾಗಿದ್ದು, ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲಾಗುವುದು.
೨೦೧೯-೨೦ ಹಾಗೂ ೨೦೨೦-೨೧ನೇ ಸಾಲಿನಲ್ಲಿ ಅಪೆಂಡಿಕ್ಸ್-ಇ ರಡಿಯಲ್ಲಿ ಮಂಜೂರಾಗಿ ಗುತ್ತಿಗೆದಾರರನ್ನು ನಿಗದಿಪಡಿಸಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ನಿರ್ವಹಿಸದೇ ಇದ್ದ ಕಾಮಗಾರಿಗಳಾದ ವೀರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದ ಮತ್ತರ ಪರಿಶಿಷ್ಟ ಜಾತಿ ಕಾಲೋನಿಯಿಂದ ಲಕ್ಷಣತೀರ್ಥ ನದಿ ಮೂಲಕ ನಾಲ್ಕೇರಿ ಗ್ರಾಮದ ಲಕ್ಕುಂದ ಪೈಸಾರಿ ಕಡೆಯಿಂದ ಕುಟ್ಟ ಸಂಪರ್ಕಿಸುವ ರಸ್ತೆ ಕಾಮಗಾರಿ (ಒಂದು ಬಾರಿ ಅಭಿವೃದ್ಧಿ) ರೂ. ೧೯೫ ಲಕ್ಷಗಳು, ಮಡಿಕೇರಿ ತಾಲೂಕು ಮದೆ-ಬೆಟ್ಟತ್ತೂರು-ಕೊಳಗದಾಳು-ಚೇರಂಬಾಣೆ ರಸ್ತೆ ಸರಪಳಿ ೧೦ ಕಿ.ಮೀ. ರಿಂದ ೧೩ ಕಿ.ಮೀ. ವರೆಗೆ ರಸ್ತೆ ಅಭಿವೃದ್ಧಿ ರೂ. ೨೦೦ ಲಕ್ಷಗಳು.
ಮೂರ್ನಾಡು-ನಾಪೋಕು ್ಲ- ರಸ್ತೆ ಸರಪಳಿ ೪ ರವರೆಗೆ ರೂ. ೨೦೦ ಲಕ್ಷಗಳು, ಪೊನ್ನಂಪೇಟೆ-ಕಾನೂರು-ನಿಟ್ಟೂರು ರಸ್ತೆಯ ಸರಪಳಿ ೨.೮೫ ಯಿಂದ ೭ ಕಿ.ಮೀ. ವರೆಗೆ ರಸ್ತೆ ರೂ. ೨೦೦ ಲಕ್ಷಗಳು. ಈ ಕಾಮಗಾರಿ ಸಂಬAಧ ಮರು ಟೆಂಡರ್ ಆಹ್ವಾನಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ತಿಳಿಸಿದ್ದಾರೆ.