ಸುಂಟಿಕೊಪ್ಪ, ಡಿ. ೧೭: ಶಾಲಾ ಕಾಲೇಜು ಮಕ್ಕಳಿಗೆ ಕೆಎಸ್‌ಆರ್‌ಟಿ ಬಸ್‌ಪಾಸ್ ಇದ್ದರೂ ಬಸ್‌ನಿಂದ ಅರ್ಧ ದಾರಿಯಲ್ಲಿ ಇಳಿಸಿದ ಘಟನೆ ನಡೆದಿದೆ.

ಸುಂಟಿಕೊಪ್ಪ ಹೋಬಳಿಯ ಗ್ರಾಮಾಂತರ ಪ್ರದೇಶದ ಹರದೂರು ಗ್ರಾಮದಿಂದ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ವ್ಯಾಸಂಗಕ್ಕೆ ತೆರಳಿದ ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಕಾಲೇಜು ಮುಗಿಸಿ ಮಡಿಕೇರಿಯಿಂದ ಬಸ್ ಏರಿದ ವಿದ್ಯಾರ್ಥಿಗಳನ್ನು ಟೋಲ್‌ಗೇಟ್ ಬಳಿ ನಿರ್ವಾಹಕ ಹಣ ಕೇಳಿದ ಸಂದರ್ಭ ಮಕ್ಕಳು ಬಸ್‌ಪಾಸ್ ನೀಡಿದ್ದಾರೆ. ಇದನ್ನು ನಿರಾಕರಿಸಿದ ನಿರ್ವಾಹಕ ಮಕ್ಕಳ ಬಳಿ ದರ್ಪದಲ್ಲಿ ಮಾತನಾಡಿ, ಇಳಿಸಿ ಮುಂದೆ ಸಾಗಿದ್ದಾರೆ. ಇದರಿಂದ ಕಂಗಾಲದ ಮಕ್ಕಳು ನಂತರ ಮನೆಯವರಿಗೆ ಕರೆ ಮಾಡಿ ಬೇರೆ ವಾಹನದಲ್ಲಿ ರಾತ್ರಿ ೭.೩೦ ಗಂಟೆಗೆ ಮನೆ ತಲುಪಿದ್ದಾರೆ. ಪೋಷಕರು ಸಾರಿಗೆ ವ್ಯವಸ್ಥಾಪಕರಿಗೆ ಹಾಗೂ ಜಿಲ್ಲಾಧಿಕಾರಿಗೆ ಈ ಸಂಬAಧ ದೂರು ನೀಡಿದ್ದಾರೆ.