ಮಡಿಕೇರಿ, ಡಿ. ೧೭: ಮಡಿಕೇರಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಗರ ಮಂಡಲ ಕಾರ್ಯಕಾರಿಣಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ಸವಿತಾ ರಾಕೇಶ್ ಅವರು ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಗರ ಮಂಡಲದ ಸದಸ್ಯರುಗಳ ಸಹಾಯದಿಂದ ನಿರ್ವಹಿಸಿರುವ ಬಗ್ಗೆ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪಕ್ಷ ನಿಷ್ಠೆ, ಶಿಸ್ತು, ಸಂಯಮ, ಸಂಘಟನೆ, ಮುಂದಿನ ಚುನಾವಣೆಗೆ ನಾರಿ ಶಕ್ತಿಯ ಜವಾಬ್ದಾರಿ, ಬೂತ್ ಮಟ್ಟದಲ್ಲಿ ಮಹಿಳೆಯರ ಉಪಸ್ಥಿತಿ ಹೆಚ್ಚಿಸುವ ಬಗ್ಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ತೆಗೆದುಕೊಂಡಿರುವ ಹೆಜ್ಜೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶರೀನ್ ಸುಬ್ಬಯ್ಯ, ರಾಜ್ಯ ಸಮಾಜದ ವಿವಿಧ ರಂಗಗಳಲ್ಲಿ ಮಹಿಳೆಯರ ಪಾತ್ರಗಳ ಬಗ್ಗೆ, ರಾಜ್ಯ ಸರ್ಕಾರ ಮುಂದಿನ ಮಹಿಳಾ ಕಾರ್ಯಕ್ರಮಗಳನ್ನು ನಡೆಸಲು ನೀಡಿರುವ ಮಾಹಿತಿ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ ಮಾತನಾಡಿ, ಸರಕಾರ ಮಹಿಳೆಯರ ಉನ್ನತಿಯ ಬಗ್ಗೆ ತೆಗೆದುಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿರುದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾದಪ್ಪ, ಸತೀಶ, ಎಸ್‌ಸಿ ನಗರ ಪ್ರಧಾನ ಕಾರ್ಯದರ್ಶಿ ಶ್ವೇತಾ ಪ್ರಶಾಂತ್, ಭವಾನಿ, ಉಪಾಧ್ಯಕ್ಷರುಗಳಾದ ಮಂಜುಳ, ಸುನಿತಾ ಸಂಪತ್ ರುಕ್ಮಿಣಿ, ಉಷಾ ಕುಮಾರಿ ಖಜಾಂಚಿ ಕವಿತಾ, ಕಾರ್ಯದರ್ಶಿಗಳಾದ ಸುಶೀಲ ವಾಸುದೇವ್, ಸವಿತಾ ಅರುಣ್ ಪ್ರಫುಲ ಗೋಪಾಲಕೃಷ್ಣ, ಸಬಿತಾ, ಕೀರ್ತಿ, ಸದಸ್ಯರುಗಳಾದ ಮಲ್ಲಾರ್ ಮಣಿ, ಶ್ರೀದೇವಿ, ಪವಿತ್ರ ಗಿರೀಶ್, ಸಂಧ್ಯಾ ಅಶೋಕ್, ಚಂದ್ರಿಕಾ, ಭಾರತಿ ಶಿವಾಜಿ, ಶುಭ ವಿಶ್ವನಾಥ್, ವೈಭವಿ, ಮೀನಾ ಕುಮಾರಿ, ನಗರಸಭಾ ಸದಸ್ಯರುಗಳಾದ ಶಾರದಾ, ಗೌರಮ್ಮ ಉಪಸ್ಥಿತರಿದ್ದರು.
ಶ್ವೇತಾ ಪ್ರಶಾಂತ್ ಸ್ವಾಗತಿಸಿ, ಭವಾನಿ ವಂದಿಸಿ, ಪ್ರಫುಲ್ಲ ಗೋಪಾಲಕೃಷ್ಣ ಪ್ರಾರ್ಥಿಸಿದರು. ಗಾಂಧಿ ಮೈದಾನದಲ್ಲಿ ೧೦೦೦ಕ್ಕೂ ಹೆಚ್ಚು ಮಹಿಳೆಯರಿಗೆ ಡ್ರೆöÊವಿಂಗ್ ತರಬೇತಿ ನೀಡಿದ ಭಾಗೀರಥಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.