ಮೂರ್ನಾಡು, ಡಿ. ೧೭: ಕೇಂದ್ರ ಸರ್ಕಾರದ ಪ್ರತಿ ಮನೆಗೆ ಕುಡಿಯುವ ಶುದ್ಧ ನೀರಿನ ಜಲ ಜೀವನ್ ಮಿಷನ್ (ಎಎಒ) ಯೋಜನೆಯನ್ನು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ. ಬಾಡಗ ಗ್ರಾಮ ಮತ್ತು ಕಿಗ್ಗಾಲು ಗ್ರಾಮಕ್ಕೆ ನೀರು ಸರಬರಾಜಿಗೆ ಬೇಕಾದ ಜಾಕ್‌ವೆಲ್‌ನ ಕಾಮಗಾರಿಗೆ ಕಾವೇರಿ ನದಿಯ ಬಾಳೆಮುಡಿ ಕುಂಡ್ ಎಂಬಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಅವರು ಭೂಮಿಪೂಜೆಯನ್ನು ನೆರವೇರಿಸಿದರು.

ಈ ಯೋಜನೆಯಿಂದ ಎಂ ಬಾಡಗ ಗ್ರಾಮದ ೩೯೦ ಪಲಾನುಭವಿಗಳು ಮತ್ತು ಕಿಗ್ಗಾಲು ಗ್ರಾಮದ ೨೩೭ ಪಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಕಾರ್ಯಕ್ರಮದಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಚಂದ್ರಶೇಖರ್, ಉಪಾಧ್ಯಕೆÀ್ಷ ಮುಂಡAಡ ವಿಜಯಲಕ್ಷಿö್ಮ, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಚಂದ್ರ ಮೌಳಿ, ಗ್ರಾಮ ಪಂಚಾಯಿತಿ ಸದಸ್ಯರು, ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರದ ಪ್ರಮುಖರು ಬೂತ್ ಅಧ್ಯಕ್ಷರು, ಕಾರ್ಯಕರ್ತರು, ಇಂಜಿನಿಯರ್ ವಿಭಾಗದವರು, ಗ್ರಾಮಸ್ಥರು ಹಾಜರಿದ್ದರು.