ಸೋಮವಾರಪೇಟೆ, ಡಿ. ೧೬: ಟಿಂಬರ್ ಕೆಲಸಕ್ಕೆ ತೆರಳಿದ್ದ ಸಂದರ್ಭ ಕಾರ್ಮಿಕನೋರ್ವ ಕುಸಿದು ಬಿದ್ದು ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ಗೌಡಳ್ಳಿ ಗ್ರಾಮದಲ್ಲಿ ನಡೆದಿದೆ.
ತಣ್ಣೀರುಹಳ್ಳ ಗ್ರಾಮದ ನಿವಾಸಿ ಕುಂಞÂ ಅವರ ಪುತ್ರ, ರವಿ(೩೦) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಗೌಡಳ್ಳಿ ವಿಎಸ್ಎಸ್ಎನ್ಗೆ ಸೇರಿದ ತೋಟದಲ್ಲಿ ಘಟನೆ ನಡೆದಿದ್ದು, ಟಿಂಬರ್ ಕೆಲಸಕ್ಕೆ ತೆರಳಿದ್ದ ಸಂದರ್ಭ ಏಕಾಏಕಿ ಕುಸಿದು ಬಿದ್ದ ಹಿನ್ನೆಲೆ ಸಹ ಕಾರ್ಮಿಕರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ರವಿ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಾನು ಮರ ಕಡಿಯುತ್ತಿದ್ದ ಸಂದರ್ಭ ಸುಮಾರು ೪೦ ಅಡಿ ದೂರದಲ್ಲಿ ನಿಂತಿದ್ದ ರವಿ ಅವರು ದಿಢೀರ್ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗಿಲ್ಲ ಎಂದು ಅಬ್ಬೂರುಕಟ್ಟೆಯ ಕಾರ್ಮಿಕ ಅಣ್ಣಪ್ಪ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.