*ಗೋಣಿಕೊಪ್ಪ, ಡಿ. ೧೬: ವಿಶ್ವ ವಿಶೇಷಚೇತನರ ದಿನ, ಏಡ್ಸ್ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪೊನ್ನಂಪೇಟೆ ನ್ಯಾಯಾಲಯದ ನ್ಯಾಯಾಧೀಶರುಗಳಾದ ಕೆ.ಎಸ್. ಆಶಾ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸಿವಿಲ್ ನ್ಯಾಯಾಧೀಶೆ ಕೆ.ಎಸ್. ಆಶಾ ಮಾತನಾಡಿ, ಕಾನೂನು ನಮ್ಮ ಹಕ್ಕು, ಅದನ್ನು ನಾವು ಪಡೆದು ಕೊಳ್ಳಲು ಕಾನೂನಿನ ಸರಳ ಸೂತ್ರ ಗಳನ್ನು ತಿಳಿದುಕೊಳ್ಳಬೇಕೆಂದು ಹೇಳಿದರು. ವಿಶೇಷಚೇತನರು ದೇಶದಲ್ಲಿ ಹಲವು ಸಾಧನೆಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ನಮ್ಮೊಡನೆ ಇರುವ ದಿವ್ಯಾಂಗರನ್ನು ಅನುಕಂಪ ದಿಂದ ಕಾಣದೇ ಅವರಿಗೆ ಉತ್ತಮ ಪ್ರೋತ್ಸಾಹ ಮತ್ತು ವೇದಿಕೆ ನೀಡುವ ಮೂಲಕ ಸಾಧನೆಯ ಹಾದಿಯೆಡೆಗೆ ಕರೆದೊಯ್ಯಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮೇಲ್ವಿಚಾರಕಿ ಶ್ವೇತ ಮುತ್ತಪ್ಪ ಮಾತನಾಡಿ, ಏಡ್ಸ್ ತಡೆಗಟ್ಟುವ ಮಾರ್ಗಗಳ ಬಗ್ಗೆ ತಿಳಿಸಿದರು.
ಪೊನ್ನಂಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕೆ.ಆರ್. ರಾಜೇಶ್ ಮುಂದಾಳತ್ವದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಪೊನ್ನಂಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ಮುತ್ತಪ್ಪ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಕೆ.ಜಿ. ವಿಮಲ, ಹಿರಿಯ ಆರೋಗ್ಯ ನಿರೀಕ್ಷಕ ಶಶಿಕಾಂತ್, ಬಿ.ಆರ್.ಸಿ. ವನಜಾಕ್ಷಿ, ಜಿಲ್ಲಾ ದಿವ್ಯಾಂಗ ಒಕ್ಕೂಟದ ಉಪಾಧ್ಯಕ್ಷ ಆಯಿಷಾ, ತಾಲೂಕು ಅಧ್ಯಕ್ಷ ಗಣೇಶ್, ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿ ರೀತ, ಪಾಲಿಬೆಟ್ಟ ಚೆಷೈರ್ ಹೋಮ್ಸ್ ಮುಖ್ಯೋಪಾ ಧ್ಯಾಯ ಶಿವರಾಜ್ ಹಾಜರಿದ್ದರು.
ವಿಶೇಷಚೇತನ ತಾಲೂಕು ಪ್ರತಿನಿಧಿ ಪ್ರಥಮ್, ಚೈಷೈರ್ ಹೋಮ್ಸ್ ಶಾಲೆಯ ಮುಖ್ಯ ಶಿಕ್ಷಕ ಶಿವರಾಜ್ ಇವರನ್ನು ಸನ್ಮಾನಿಸಲಾಯಿತು.