ಸೋಮವಾರಪೇಟೆ, ಡಿ. ೧೫: ಇಲ್ಲಿಗೆ ಸಮೀಪದ ತಪೋಕ್ಷೇತ್ರ ಮನೆ ಹಳ್ಳಿ ಮಠದಲ್ಲಿ ೨೧ನೇ ವರ್ಷದ ೨೫ಸಹಸ್ರ ದೀಪೋತ್ಸವ ಕಾರ್ಯಕ್ರಮ ನಡೆಯಿತು. ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಆಧ್ಯಾತ್ಮದಿಂದ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯವೆಂದು ಹೇಳಿದರು.
ಆಸ್ತಿ, ಅಂತಸ್ತಿಗಿAತ ಮನಃಸಂತೋಷ ಮುಖ್ಯ. ಮನುಷ್ಯ ಮಾನಸಿಕವಾಗಿ ನೆಮ್ಮದಿ ಕಾಣಬೇಕಾದರೆ ಆಧ್ಯಾತ್ಮಿಕವಾಗಿ ದೇವರ ಮೊರೆ ಹೋಗಲೇಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮನೆ ಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಕ್ಷೇತ್ರದಲ್ಲಿ ದೇವಾಲಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳ ಲಾಗಿದೆ. ಇದಕ್ಕೆ ಭಕ್ತರ ಸಹಕಾರ ಬೇಕೆಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೆಸವತ್ತುರು ಮಠದ ಬಸವರಾಜೆಂದ್ರ ಸ್ವಾಮೀಜಿ, ಹಾಸನ ತಣ್ಣೀರು ಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಚಿಕ್ಕ ಬಳ್ಳಾಪುರದ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ, ಬೆಂಗಳೂರು ಸೆಷನ್ ಕೋರ್ಟ್ನ ನ್ಯಾಯಾಧೀಶರಾದ ಜಯಶ್ರೀ, ವೀರಾಜಪೇಟೆಯ ವೈದ್ಯರಾದ ಡಾ.ಬೋಪಣ್ಣ, ಪ್ರಮುಖರಾದ ಜ್ಞಾನೇಶ್ವರಿ, ಮಾಗೋಡು ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆಯ ಗೀತಗಾಯನ ತಂಡದವರ ಭಕ್ತಿಗೀತೆ ಗಾಯನ ನಡೆಯಿತು.