ಮಡಿಕೇರಿ, ಡಿ. ೧೬: ವೀರಾಜಪೇಟೆಯ ಕಾವೇರಿ ಪದವಿಪೂರ್ವ ಕಾಲೇಜಿನ ೨೦೨೨-೨೩ನೇ ಶೈಕ್ಷಣಿಕ ವರ್ಷದ ಪೋಷಕರ-ಅಧ್ಯಾಪಕರ ಸಭೆ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಪೋಷಕರ-ಅಧ್ಯಾಪಕರ ಸಂಘದ ಸಂಚಾಲಕಿ ಅರ್ಧಶಾಸ್ತç ಉಪನ್ಯಾಸಕಿ ಚೀಯಕಪೂವಂಡ ರಶೀತರವರು ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾವೇರಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಪ್ರೊಫೆಸರ್ ಇಟ್ಟೀರ ಕೆ. ಬಿದ್ದಪ್ಪ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ದುಶ್ಚಟಗಳಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕೆಂದರು.
ವೇದಿಕೆಯಲ್ಲಿ ಕಾವೇರಿ ಎಜುಕೇಶನ್ ಸೊಸೈಟಿಯ ನಿರ್ದೇಶಕರಾದ ಕುಪ್ಪಂಡ ಬೆಳ್ಯಪ್ಪ, ಪೋಷಕ-ಅಧ್ಯಾಪಕರ ಸಂಘದ ಸದಸ್ಯ ಜಗನ್ ಉಪಸ್ಥಿತರಿದ್ದರು. ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಂ. ನಾಣಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೋಷಕ-ಅಧ್ಯಾಪಕರ ಸಂಘದ ಸಂಚಾಲಕಿ ಅರ್ಥಶಾಸ್ತç ಉಪನ್ಯಾಸಕಿ ಚಿಯಕಪೂವಂಡ ರಶೀತ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿಯ ಸಂಘದ ಸಂಚಾಲಕಿ ಕನ್ನಡ ಉಪನ್ಯಾಸಕಿ ಕಾಳೇಂಗಡ ಎಂ. ದಮಯಂತಿ ವಂದಿಸಿದರು.