ಗೋಣಿಕೊಪ್ಪ ವರದಿ, ಡಿ. ೧೫: ಬೆಳೆ ನಷ್ಟ ಪರಿಹಾರವಾಗಿ ರೈತರ ಖಾತೆಗೆ ಜಮಾ ಆಗಿರುವ ಹಣವನ್ನು ಹಳೆಯ ಸಾಲಕ್ಕೆ ಹಿಡಿದಿಟ್ಟುಕೊಳ್ಳುವ ಬ್ಯಾಂಕ್ಗಳ ವಿರುದ್ದ ಪ್ರತಿಭಟಿಸುವುದಾಗಿ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚ ಎಚ್ಚರಿಸಿದೆ. ಟಿ.ಶೆಟ್ಟಿಗೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕರಿಗೆ ಮೋರ್ಚ ವತಿಯಿಂದ ಮನವಿ ಸಲ್ಲಿಸಿ ಎಚ್ಚರಿಸಲಾಯಿತು.
ಅತಿವೃಷ್ಠಿ ಪರಿಹಾರವಾಗಿ ಸರ್ಕಾರ ರೈತರಿಗೆ ಪರಿಹಾರ ಜಮೆ ಮಾಡುತ್ತಿದೆ. ಇಂತಹ ಹಣವನ್ನು ಸಾಲ ಪಡೆದ ರೈತರ ಖಾತೆಯಿಂದ ಪಡೆದುಕೊಳ್ಳುತ್ತಿರುವುದನ್ನು ಮೋರ್ಚಾ ಆಕ್ಷೇಪಿಸಿದೆ.
ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ ಮಾತನಾಡಿ, ರಾಷ್ಟಿçÃಯ ವಿಪತ್ತು ನಿರ್ವಹಣಾ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪರಿಹಾರ ನಿಧಿ ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ನೆರವಿನಿಂದ ಜಿಲ್ಲೆಯ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ೧ ಹೆಕ್ಟೇರ್ಗೆ ೨೮ ಸಾವಿರ, ೨ ಹೆಕ್ಟೇರ್ವರೆಗೆ ೫೬ ಸಾವಿರ ಖಾತೆಗಳಿಗೆ ಸಂದಾಯವಾಗುತ್ತಿದೆ. ತುರ್ತು ಪರಿಹಾರವನ್ನು ಬೇರೆ ಸಾಲಗಳಿಗೆ ವಸೂಲಿ ಮಾಡುತ್ತಿರುವುದನ್ನು ಖಂಡಿಸುವುದಾಗಿ ತಿಳಿಸಿದರು.