ವರದಿ: ಮುಸ್ತಫ ಸಿದ್ದಾಪುರ

ಸಿದ್ದಾಪುರ, ಡಿ. ೧೫: ತುರ್ತು ಅವಶ್ಯಕತೆಗಾಗಿ ಎ.ಟಿ.ಎಂ ಮೆಶಿನ್‌ಯಂತ್ರ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದವರು ಪರದಾಡುವ ಸ್ಥಿತಿ ಆಗಿಂದಾಗ್ಗೆ ನಿರ್ಮಾಣವಾಗುತ್ತಿದೆ.

ಈ ಹಿಂದೆ ಸಿದ್ದಾಪುರದ ರಾಷ್ಟಿçÃಕೃತ ಬ್ಯಾಂಕ್‌ವೊAದರಲ್ಲಿ ಹಳೆಯ ಎ.ಟಿ.ಎಂ ಯಂತ್ರದಲ್ಲಿ ಹಣ ‘ಡ್ರಾ’ ಮಾಡಲು ಮಾತ್ರ ಅವಕಾಶವಿತ್ತು. ಈ ಯಂತ್ರ ದುರಸ್ತಿಯಾದ ಬಳಿಕ ಹೊಸ ಎ.ಟಿ.ಎಂ ಯಂತ್ರ ಅಳವಡಿಸಲಾಗಿದ್ದು, ಹೊಸ ಯಂತ್ರದಲ್ಲಿ ಡ್ರಾ ಜೊತೆಗೆ ಹಣ ಜಮಾ (ಡೆಪಾಸಿಟ್) ಮಾಡಲು ವ್ಯವಸ್ಥೆ ಇದೆ. ಇದರಿಂದಾಗಿ ಸಾರ್ವಜನಿಕರಿಗೆ ಬ್ಯಾಂಕ್ ಮುಚ್ಚಿದ ಸಂದರ್ಭಗಳಲ್ಲಿ ಹಣ ಜಮಾ ಮಾಡಲು ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ತುರ್ತು ಅವಶ್ಯಕತೆಗಾಗಿ ಎ.ಟಿ.ಎಂ ಮೂಲಕ ಹಣ ಜಮಾ ಮಾಡುತ್ತಿರುವವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸಂಬAಧಿಗೆ ತುರ್ತಾಗಿ ರೂ ೪೦ ಸಾವಿರ ಜಮಾ ಮಾಡಿದಾಗ ಹಣ ಖಾತೆಗೆ ಜಮಾ ಆಗಲಿಲ್ಲ. ಬಳಿಕ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಬ್ಯಾಂಕಿನಲ್ಲಿ ದೂರು ನೀಡಲು ಸಾಧ್ಯವಾಗದೆ ಪರದಾಡುವಂತಾಯಿತು. ಹಣ್ಣು ವ್ಯಾಪಾರಿಯೊಬ್ಬರು ರೂ ೨೨ ಸಾವಿರ ಜಮಾ ಮಾಡಿದಾಗಲೂ ಇದೇ ರೀತಿ ಪರದಾಡುವಂತಾಯಿತು. ಇ.ಎಂ.ಐ ಗಾಗಿ ವ್ಯಕ್ತಿಯೊಬ್ಬರು ಜಮಾ ಮಾಡಿದ ರೂ ೨ ಸಾವಿರ ತಕ್ಷಣಕ್ಕೆ ಜಮಾ ಆಗದ ಪರಿಣಾಮ, ಸಮಯಕ್ಕೆ ಸರಿಯಾಗಿ ಇ.ಎಂ.ಐ ಪಾವತಿಸದ ಕಾರಣ ಹೆಚ್ಚಿನ ಶುಲ್ಕ ಪಾವತಿಸಬೇಕಾದ ಸಂಕಷ್ಟ ಅನುಭವಿಸಿತ್ತು. ಇದಲ್ಲದೆ ಆಗಿಂದಾಗ್ಗೆ ಇಂತಹ ಘಟನೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ದೂರಿಕೊಂಡಿದ್ದಾರೆ. ಆದರೆ ಜಮಾ ಮಾಡಿದ ಹಣ ಮಾತ್ರ ಕಳೆದುಕೊಳ್ಳುವುದಿಲ್ಲ. ಬದಲಾಗಿ ತಕ್ಷಣಕ್ಕೆ ಜಮಾ ಆಗದ ಮೊತ್ತ ೭ ದಿನಗಳ ಒಳಗಾಗಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಎ.ಟಿ.ಎಂ ಮೂಲಕ ಜಮಾ ಮಾಡಿದ ಹಣ ಖಾತೆಗೆ ಜಮಾ ಆಗದಿದ್ದರೆ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಬೇಕಾಗುತ್ತದೆ. ದೂರು ನೀಡಿದ ೭ ದಿನಗಳ ಒಳಗೆ ಒಟ್ಟು ಮೊತ್ತ ಖಾತೆಗೆ ಜಮಾ ಆಗಲಿದೆ. ಆದ್ದರಿಂದ ತುರ್ತು ಅವಶ್ಯಕತೆಗಾಗಿ ಹಣ ಜಮಾ ಮಾಡುವವರು ಎಚ್ಚರ ವಹಿಸಬೇಕಾಗಿದೆ.

ಹಳೆಯ ನೋಟುಗಳನ್ನು ಯಂತ್ರಗಳ ಮೂಲಕ ಜಮಾ ಮಾಡುವಾಗ ಈ ರೀತಿಯಲ್ಲಿ ಸಂಭವಿಸಲು ಸಾಧ್ಯವಿದೆ. ಡ್ರಾ ಮಾಡಲು ಮಾತ್ರ ಎ.ಟಿ.ಎಂ ಯಂತ್ರ ಬಳಸುವುದು ಉತ್ತಮ. ಜಮಾ ಮಾಡುವವರು ಸಾಧ್ಯವಾದಷ್ಟು ಬ್ಯಾಂಕ್ ಮೂಲಕ ಜಮಾ ಮಡುವುದು ಒಳ್ಳೆಯದು ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ತಾ. ೧೪ರಂದು ಸಂಜೆ ಎ.ಟಿ.ಎಂ ಮೆಶಿನ್ ಮೂಲಕ ರೂ ೨೨ ಸಾವಿರ ಜಮಾ ಮಾಡಲಾಗಿತ್ತು. ಬಳಿಕ ಎರಡು ದಿನ ಬ್ಯಾಂಕ್ ರಜೆ ಇತ್ತು. ಮೂರನೇ ದಿನ ಬ್ಯಾಂಕಿಗೆ ಲಿಖಿತ ದೂರು ನೀಡಲಾಗಿದೆ. ಇವತ್ತಿಗೆ ೬ ದಿನಗಳಾಗಿದೆ, ಹಣ ಜಮಾ ಆಗಿಲ್ಲ. ವ್ಯಾಪಾರದ ತುರ್ತು ಅವಶ್ಯಕತೆಗಾಗಿ ಹಣ ಜಮಾ ಮಾಡಿ ಸಂಕಷ್ಟ ಎದುರಾಗಿದೆ ಎಂದು ಹಣ್ಣು ವ್ಯಾಪಾರಿ ಅನ್ವರ್ ಹೇಳಿದ್ದಾರೆ.