ವನಸಿರಿ ಯೋಜನೆಯಡಿ ಗಿಡ ನಾಟಿ

ಕೂಡಿಗೆ, ಡಿ. ೧೫: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ವತಿಯಿಂದ ಹಸಿರು ನಿಧಿ ಸ್ಥಾಪಿಸುವ ಮೂಲಕ ವನಸಿರಿ ಯೋಜನೆಯಡಿ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಹೇಳಿದರು.

ಕುಶಾಲನಗರ ಕೈಗಾರಿಕೋದ್ಯಮಿ ಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ವತಿಯಿಂದ ಸ್ವಾತಂತ್ರೊö್ಯÃತ್ಸ ವದ ಅಮೃತ ಮಹೋತ್ಸವದ ಅಂಗವಾಗಿ ಹಸಿರು ನಿಧಿ ಅಭಿಯಾನದಡಿ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟಿçÃಯ ಹಸಿರು ಪಡೆ ಇಕೋ ಕ್ಲಬ್ ಹಾಗೂ ರಾಷ್ಟಿçÃಯ ಸೇವಾ ಯೋಜನಾ ಘಟಕ (ಎನ್.ಎಸ್.ಎಸ್), ಎಸ್‌ಡಿಎಂಸಿ ಆಶ್ರಯದಲ್ಲಿ ಕೂಡ್ಲೂರು ಗ್ರಾಮದ ಶಾಲಾ ಮೈದಾನದಲ್ಲಿ ಗಿಡನೆಡುವ "ವನಸಿರಿ" ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ವರ್ಷ ನಿಗದಿತ ಪ್ರಮಾಣ ದಲ್ಲಿ ವನಸಿರಿ ಯೋಜನೆಯಡಿ ಗಿಡ ನೆಟ್ಟು ಬೆಳೆಸುವ ಯೋಜನೆಯನ್ನು ಈ ಶಾಲೆಯಿಂದ ಆರಂಭಿಸಲಾಗಿದೆ. ಪ್ರತಿ ವರ್ಷ ೫೦೦ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆ ಹಮ್ಮಿಕೊಳ್ಳ ಲಾಗಿದೆ ಎಂದರು.

ಪ್ರತಿಯೊಬ್ಬರೂ ಗಿಡನೆಟ್ಟು ಬೆಳೆಸುವ ಮೂಲಕ ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸಲು ಪಣ ತೊಡಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಗಿಡ ನೆಡುವ ಮೂಲಕ ಹಸಿರು ಪರಿಸರ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಈ ಸಹಕಾರ ಸಂಘದ ವತಿಯಿಂದ ಈ ಶಾಲೆಯ ಅಂಗಳದಲ್ಲಿ ಗಿಡ ನೆಟ್ಟು ಬೆಳೆಸುವ ಯೋಜನೆ ಅನುಷ್ಠಾನ ಗೊಳಿಸುವ ಮೂಲಕ ಎಲ್ಲರಲ್ಲೂ ಹಸಿರು ಬೆಳೆಸಿ ಪರಿಸರ ಸಂರಕ್ಷಿಸಲು ಪ್ರೇರೇಪಣೆ ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು.

ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಪರಿಸರ ದಿನ ಎಂಬುದು ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯ ಪರಿಸರ ದಿನ ಆಚರಿಸುವ ಮೂಲಕ ನಾವು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಿದೆ ಎಂದರು.

ಸAಘದ ನಿರ್ದೇಶಕರೂ ಆದ ವಕೀಲ ಆರ್.ಕೆ. ನಾಗೇಂದ್ರಬಾಬು, ಕಾವೇರಿ ನದಿ ಸಂರಕ್ಷಣಾ ವೇದಿಕೆಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಗ್ರಾ.ಪಂ. ಸದಸ್ಯ ಕೆ.ಕೆ. ಭೋಗಪ್ಪ, ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಂ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಎಂ.ಎA. ಶಾಹೀರ್, ಅಭಿಯಾನದ ಸಂಯೋಜಕರೂ ಆದ ನಿರ್ದೇಶಕ ವಿ.ಸಿ. ಅಮೃತ್, ನಿರ್ದೇಶಕರಾದ ಆರ್.ಕೆ. ನಾಗೇಂದ್ರಬಾಬು, ಎಂ.ವಿ. ನಾರಾಯಣ, ಬಿ. ರಾಮಕೃಷ್ಣ, ರೇಖಾ ರಾಜಶೇಖರ್, ಕೆ.ಎಸ್. ಮಹೇಶ್, ಕೆ.ಸುರೇಶ್ ಕುಮಾರ್, ಎನ್.ಇ ಶಿವಪ್ರಕಾಶ್, ಎನ್. ನವೀನ್, ಕೆ.ಪಿ. ಶರತ್, ಸಿಇಓ ಶ್ರೀಜೇಶ್, ವ್ಯವಸ್ಥಾಪಕ ಆರ್.ರಾಜು, ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್ ನಾಯಕ್, ಮಾಜಿ ಅಧ್ಯಕ್ಷ ಕೆ.ಪಿ. ಕೃಷ್ಣ, ಸದಸ್ಯರಾದ ಕೆ.ಕೆ. ಭೋಗಪ್ಪ, ಶಿವಮ್ಮ, ಕುಮಾರ್, ಶಶಿಕಲಾ, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎನ್. ಪುಟ್ಟಸ್ವಾಮಿ, ಉಪಾಧ್ಯಕ್ಷೆ ಉಷಾ, ಸದಸ್ಯ ಜವರಯ್ಯ, ಸ್ಥಳೀಯ ಪ್ರಮುಖರಾದ ಕೆ.ಎಸ್. ರಾಜಾಚಾರಿ, ಕೆ.ಕೆ. ಪವನಕುಮಾರ್ , ಪರಮೇಶ್, ವಿಮಲ್ ಶಿಕ್ಷಕರು ಇದ್ದರು. ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಸ್ವಾಗತಿಸಿದರು.

ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ ನಿರ್ವಹಿಸಿದರು. ಶಿಕ್ಷಕ ಕೆ. ಗೋಪಾಲಕೃಷ್ಣ ವಂದಿಸಿದರು. ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು. ಇದೇ ವೇಳೆ ಶಾಲೆಯಲ್ಲಿ "ವನಸಿರಿ" ಯೋಜನೆಗೆ ಸಹಕರಿಸಿದ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅವರನ್ನು ಶಾಲೆಯ ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಸಂಘದ ನಿರ್ದೇಶಕರು, ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ಶಾಲಾವರಣದಲ್ಲಿ ೭೫ ಗಿಡಗಳನ್ನು ನೆಟ್ಟು ಗೊಬ್ಬರ ಹಾಕಿ ಗಿಡಗಳಿಗೆ ಟ್ರೀ ಗಾರ್ಡ್ ಹಾಕಲಾಯಿತು.