ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ ತಿಂಗಳಿನಲ್ಲಿ ಜೆಮಿನಿಡ್ (ಮಿಥುನ ರಾಶಿ) ಉಲ್ಕೆಪಾತ(ಮೀಟಿಯಾರ್ ಶವರ್) ರಾತ್ರಿಯಾಕಾಶದಲ್ಲಿ ರಾರಾಜಿಸುತ್ತಿದೆ. ನವೆಂಬರ್ ೧೯ ರಿಂದ ಪ್ರಾರಂಭವಾಗಿರುವ ಉಲ್ಕಾಪಾತವು ಡಿಸೆಂಬರ್ ೨೪ರವರೆಗೂ ಬರಿಗಣ್ಣಿಗೆ ರಾತ್ರಿ ಸಮಯ ಕಾಣಸಿಗಲಿದೆ. ತಾ.೧೪ರ ಮಧ್ಯರಾತ್ರಿ ಅತಿ ಹೆಚ್ಚು ಸಂಖ್ಯೆಯಲ್ಲಿ ಉಲ್ಕೆಗಳು ಭೂಮಿಯ ವಾತಾವರಣಕ್ಕೆ ಅಪ್ಪಳಿಸಿ ಭಸ್ಮವಾಗುತ್ತಿದ್ದ ರೋಮಾಂಚನಕಾರಿ ದೃಶ್ಯವನ್ನು ಕೊಡಗು ಜಿಲ್ಲೆಯ ಹಲವು ಖಗೋಳಾಸಕ್ತರು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ. ಗಂಟೆಗೆ ಗರಿಷ್ಠ ೧೨೦ ಉಲ್ಕೆಗಳಾದರೂ ಮೋಡರಹಿತ ಕೃತಕ ಬೆಳಕು ರಹಿತ ಆಕಾಶದಲ್ಲಿ ಸುಲಭವಾಗಿ ಕಾಣಸಿಗಲಿವೆ. ಉಲ್ಕೆಯು ವಾತಾವರಣಕ್ಕೆ ತಗುಲಿ ಸಂಭವಿಸುವ ಘರ್ಷಣೆಯಿಂದಾಗಿ ಕ್ಷಣಾರ್ಧದಲ್ಲಿ ಭಸ್ಮವಾದರೂ ಬರಿಗಣ್ಣಿಗೆ ಸುಲಭವಾಗಿ ಗೋಚರಿಸಲಿದೆ.

ಏನಿದು ಮೀಟಿಯಾರ್..?

ಸುಮಾರು ೧ ಮೀಟರ್ ಗರಿಷ್ಠ ಸುತ್ತಳತೆ ಹೊಂದಿರುವ ಬಾಹ್ಯಾಕಾಶದಿಂದ ಭೂಮಿಯ ವಾತಾವರಣಕ್ಕೆ ಅಪ್ಪಳಿಸಿ ಭಸ್ಮಗೊಳ್ಳುವ ಪದಾರ್ಥಗಳಿಗೆ ಉಲ್ಕೆ (ಮೀಟಿಯಾರ್) ಎನ್ನುತ್ತಾರೆ. ೧ ಮೀಟರ್ ಸುತ್ತಳತೆಯ ಉಲ್ಕೆಗಳು ಬಹಳ ಅಪರೂಪವಾಗಿದ್ದು, ೧ ರಿಂದ ೨ ಗ್ರಾಂ ತೂಕವಿರುವ ಹಾಗೂ ಗಾತ್ರದಲ್ಲಿ ಸಣ್ಣ ಕಲ್ಲಿನ ಗಾತ್ರದಿಂದ ಮರಳಿನ ಗಾತ್ರದಷ್ಟು ಸಣ್ಣವಿರುವ ಉಲ್ಕೆಗಳು ಬಹಳ ಸಾಮಾನ್ಯವಾಗಿವೆ. ಇಂತಹ ಉಲ್ಕೆಗಳು ಇಷ್ಟು ಸಣ್ಣವಿದ್ದರೂ ಅತೀ ವೇಗದಿಂದ ಭೂಮಿಯ ವಾತಾವರಣಕ್ಕೆ ಘರ್ಷಿಸುವುದರಿಂದ ಸುಲಭವಾಗಿ ನಾಶವಾಗಿ ಭೂಮಿಯ ಮೇಲ್ಮೆöÊವರೆಗೂ ಈ ಘಟನೆ ಕಾಣಸಿಗಲಿದೆ.

ಸೂರ್ಯನ ಸುತ್ತದ ಕಕ್ಷೆಯಲ್ಲಿ ಚಲಿಸುವ ಧೂಮಕೇತು (ಅomeಣ) ಗಳು ಅಥವಾ ಕ್ಷÄದ್ರಗ್ರಹಗಳು (ಚಿsಣeಡಿoiಜ) ಸೂರ್ಯನ ಹತ್ತಿರ ಚಲಿಸುವಾಗ ಹೆಚ್ಚಿನ ತಾಪಮಾನದ ಕಾರಣ ಅವುಗಳಲ್ಲಿನ ಧೂಳು, ಕಲ್ಲು ಪದಾರ್ಥಗಳು ಬೇರ್ಪಟ್ಟು ಭೂಮಿಗೆ ಬಹುತೇಕ ಸಮಾನವಾದ ಸೂರ್ಯನ ಸುತ್ತದ ಕಕ್ಷೆಯನ್ನು ಹೊಂದುತ್ತವೆ. ಭೂಮಿಯ ಕಕ್ಷೆ ಹಾಗೂ ಈ ಪದಾರ್ಥಗಳ ಕಕ್ಷೆ ವಾರ್ಷಿಕವಾಗಿ ಮಿಲನಗೊಂಡಾಗ ಈ ಪದಾರ್ಥಗಳು ಭೂಮಿಯ ವಾತಾವರಣಕ್ಕೆ ಅಪ್ಪಳಿಸಿ ಉಲ್ಕಾಪಾತ ಸಂಭವಿಸುತ್ತದೆ.

ಜೆಮಿನಿಡ್ ಉಲ್ಕೆ

ಪ್ರಸ್ತುತ ನಡೆಯುತ್ತಿರುವ ಉಲ್ಕಾಪಾತ ಆಗಸದ ಮಿಥುನ(ಜೆಮಿನಿಡ್) ರಾಶಿಯಲ್ಲಿನ ನಕ್ಷತ್ರಗಳಿಂದ ಉದ್ಭವಿಸುವಂತೆ ಭಾಸವಾಗುವ ಕಾರಣ ಅದಕ್ಕೆ ಈ ಹೆಸರು. ಈ ಉಲ್ಕಾಪಾತವು ರಾತ್ರಿ ೧೦ ಗಂಟೆಯ ಬಳಿಕ ಮಧ್ಯರಾತ್ರಿ ೨ ಗಂಟೆಯವರೆಗೂ ಗೋಚರಿಸಲಿದೆ. ಬೆಳಕು ರಹಿತ, ಮೋಡ ರಹಿತ ಪ್ರದೇಶಗಳಲ್ಲಿ ಆಗಸದತ್ತ ಗಮನಿಸಿದರೆ ಉಲ್ಕಾಪಾತ ವೀಕ್ಷಿಸಬಹುದಾಗಿದೆ. ಕನಿಷ್ಟ ೧೫ ರಿಂದ ೨೦ ನಿಮಿಷಗಳಾದರೂ ಮಂದ ಬೆಳಕಿನ ವಾತಾವರಣಕ್ಕೆ ನಮ್ಮ ಕಣ್ಣು ಹೊಂದಿಕೊAಡ ಬಳಿಕ ವೀಕ್ಷಣೆ ಸುಲಭವಾಗಲಿದೆ.

(ಪಿ.ಜಿ.ಆರ್.)