ವೀರಾಜಪೇಟೆ, ಡಿ. ೧೫: ವೀರಾಜಪೇಟೆ ತಾಲೂಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವೇಶನ ರಹಿತರಿಗೆ ನಿವೇಶನ ನೀಡುವವರೆಗೆ ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಪಿಐ(ಎಂ)ನ ಜಿಲ್ಲಾ ಶಾಖಾ ಕಾರ್ಯದರ್ಶಿ ಎ ಮಹಾದೇವನ್ ಎಚ್ಚರಿಸಿದರು.

ವೀರಾಜಪೇಟೆ ಪ್ರೆಸ್Àಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಿವೇಶನ ರಹಿತರಿಗೆ ನೀವೇಶನ ನೀಡುವಂತೆ ನವೆಂಬರ್ ೧೧ ರಂದು ಅಮ್ಮತ್ತಿ ಕಾರ್ಮಾಡು ಪಂಚಾಯಿತಿ ಎದರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಪಂಚಾಯಿತಿ, ಕಂದಾಯ ಇಲಾಖೆ ಹಾಗು ತಾಲೂಕು ಆಡಳಿತ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ನಿವೇಶನ ನೀಡುವವರೆಗೆ ತಾ. ೧೯ರಿಂದ ಪಂಚಾಯಿತಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು. ಗೋಷ್ಠಿಯಲ್ಲಿ ನಿವೇಶನ ಹೋರಾಟ ಸಮಿತಿ ಅಧ್ಯಕ್ಷ ಪಾಪಣ್ಣ, ಉಪಾಧ್ಯಕ್ಷ ಮನೋಜ್, ಸದಸ್ಯರಾದ ಇಬ್ರಾಹಿಂ, ಯಶೋಧ, ಪುಪ್ಪಾ ಉಪಸ್ಥಿತರಿದ್ದರು.