ಮಡಿಕೇರಿ, ಡಿ. ೧೬: ಕೊಡವ ನ್ಯಾಷನಲ್ ಕೌನ್ಸಿಲ್ ನಿಯೋಗ ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ಅರ್ಥ ಶಾಸ್ತçಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರನ್ನು ಭೇಟಿಯಾಗಿ ಸ್ವಾಯತ್ತ ಕೊಡವ ಲ್ಯಾಂಡ್ ಬೇಡಿಕೆಯ ಕುರಿತು ಚರ್ಚಿಸಿತು.
ರೇವ ಯೂನಿವರ್ಸಿಟಿ - ಬ್ಯುಸಿನೆಸ್ ಸ್ಕೂಲ್ನಲ್ಲಿ ಡಾ. ಸ್ವಾಮಿ, ವಿಹೆಚ್ಎಸ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಹಾಗೂ ಸುಪ್ರೀಂ ಕೋರ್ಟ್ ವಕೀಲ ಸತ್ಯ ಸಬರ್ವಾಲ್ ಅವರನ್ನು ಭೇಟಿಯಾದ ಸಿಎನ್ಸಿ ನಿಯೋಗ ಕೊಡವ ನ್ಯಾಷನಲ್ ಡೇ ಯಲ್ಲಿ ನೀಡಿದ ಭರವಸೆಯಂತೆ ಕೊಡವ ಲ್ಯಾಂಡ್ ಕುರಿತು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿತು.ನಂತರ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ನ್ಯಾಯಾಲಯದ ರಜೆ ಮುಗಿದ ನಂತರ ರಿಟ್ ಅರ್ಜಿಯನ್ನು ಸಲ್ಲಿಸುವ ಭರವಸೆ ದೊರೆತ್ತಿದೆ. ನಮ್ಮ ಬೇಡಿಕೆ ಈಡೇರುವ ಬಗ್ಗೆ ಸಂಪೂರ್ಣ ವಿಶ್ವಾಸವಿದ್ದು, ಡಾ.ಸ್ವಾಮಿ ಅವರನ್ನು ಮತ್ತೆ ಭೇಟಿಯಾಗಿ ನ್ಯಾಯಾಲಯದಲ್ಲಿ ಕೈಗೊಳ್ಳಬೇಕಾದ ಪ್ರಕ್ರಿಯೆ ಕುರಿತು ಗೌರವಯುತವಾಗಿ ಮನವಿ ಮಾಡಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿಎನ್ಸಿ ಪ್ರಮುಖರಾದ ಕಲಿಯಂಡ ಮೀನಾ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಮುಕ್ಕಾಟೀರ ಶಾಂತಿ, ಕಲಿಯಂಡ ಪ್ರಕಾಶ್, ಅಲ್ಮಂಡ ಭೀಮಯ್ಯ, ವಾಟೇರಿರ ಪೂವಣ್ಣ, ಪಾಲಂದೀರ ಜೋಯಪ್ಪ, ಬೊಳ್ಳಾರಪಂಡ ಮಾಚಯ್ಯ ಮತ್ತಿತರರು ನಿಯೋಗದಲ್ಲಿದ್ದರು.