ಮೇಲ್ಮನವಿ ಸಲ್ಲಿಕೆಗೆ ನೀರವ್ ಮೋದಿಗೆ ಅನುಮತಿ ನಿರಾಕರಣೆ

ಲಂಡನ್, ಡಿ. ೧೫: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಬ್ರಿಟನ್ ಕೋರ್ಟ್ನಲ್ಲಿ ತೀವ್ರ ಹಿನ್ನಡೆಯಾಗಿದೆ. ಭಾರತಕ್ಕೆ ಹಸ್ತಾಂತರಿಸುವAತೆ ಆದೇಶಿಸಿದ ಲಂಡನ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ನೀರವ್ ಮೋದಿ ಸಲ್ಲಿಸಿದ್ದ ಮನವಿಯನ್ನು ಗುರುವಾರ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಲಂಡನ್‌ನ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್‌ನ ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರು ತೀರ್ಪು ಪ್ರಕಟಿಸಿದ್ದಾರೆ. ಆಗ್ನೇಯ ಲಂಡನ್‌ನ ವಾಂಡ್ಸ್ವರ್ತ್ ಜೈಲಿನಲ್ಲಿರುವ ೫೧ ವರ್ಷದ ಉದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವAತೆ ಕಳೆದ ಫೆಬ್ರವರಿಯಲ್ಲಿ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟೆçÃಟ್ ಕೋರ್ಟ್ ಆದೇಶಿಸಿತ್ತು. ಈ ತೀರ್ಪಿನ ವಿರುದ್ಧ ನೀರವ್ ಮೋದಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಯುಕೆ ಹೈಕೋರ್ಟ್ ವಜಾಗೊಳಿಸಿದೆ. ನೀರವ್ ಮೋದಿ ಅವರ ಮಾನಸಿಕ ಸ್ಥಿತಿಯ ಬಗ್ಗೆ ನಾವು ಸಾಕಷ್ಟು ತೃಪ್ತಿ ಹೊಂದಿದ್ದೇವೆ. ಅವರನ್ನು ಗಡಿಪಾರು ಮಾಡುವುದು ಅನ್ಯಾಯ ಅಥವಾ ದಬ್ಬಾಳಿಕೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ಪೂರಕ ಅಂಶಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ.

ನಕಲಿ ಮದ್ಯ ಸೇವಿಸಿ ೩೯ ಮಂದಿ ಸಾವು

ಪಾಟ್ನಾ, ಡಿ. ೧೫: ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟಿರುವವರ ಸಂಖ್ಯೆ ೩೯ಕ್ಕೆ ಏರಿಕೆಯಾಗಿದೆ. ಈ ದುರಂತದ ಹಿನ್ನೆಲೆಯಲ್ಲಿ ಛಾಪ್ರಾ ಠಾಣಾಧಿಕಾರಿ ರಿತೇಶ್ ಮಿಶ್ರಾ ಮತ್ತು ಕಾನ್ಸ್ಟೇಬಲ್ ವಿಕೇಶ್ ತಿವಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲಾಗಿದೆ. ನಕಲಿ ಮದ್ಯ ಸೇವೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ೪೭ ಜನರ ಪೈಕಿ ಕೆಲವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಅನೇಕ ಮಂದಿಯ ದೃಷ್ಟಿಗೆ ದೋಷವಾಗಿದೆ. ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಈ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ, ಸಿಎಂ ನಿತೀಶ್ ಕುಮಾರ್ ಹಾಗೂ ಮಹಾಘಟಬಂದನ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದೆ. ಬಿಜೆಪಿ ಆರೋಪಕ್ಕೆ ಉತ್ತರಿಸಿರುವ ನಿತೀಶ್ ಕುಮಾರ್, ಯಾರೆಲ್ಲಾ ನಕಲಿ ಮದ್ಯ ಸೇವಿಸ್ತಾರೋ ಅವರೆಲ್ಲಾ ಸಾಯೋದು ಖಂಡಿತ. ಖುದ್ದು ಜನರೇ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಕೆಲವೊಂದು ವ್ಯಕ್ತಿಗಳು ದುಡ್ಡಿಗಾಗಿ ಈ ಕೆಲಸ ಮಾಡ್ತಾರೆ. ಕೆಲವು ವ್ಯಕ್ತಿಗಳು ನಕಲಿ ಮದ್ಯ ಸೇವಿಸುವ ತಪ್ಪು ಮಾಡ್ತಾರೆ. ಇಂಥವನ್ನೆಲ್ಲಾ ಸೇವಿಸುವ ವ್ಯಕ್ತಿಗಳು ಖಂಡಿತವಾಗಿ ಸಾಯುತ್ತಾರೆ ಎಂದು ಹೇಳಿದ್ದಾರೆ. ಈ ಸಾವಿಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಎಫ್‌ಐಆರ್ ದಾಖಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಬಿಹಾರ ಅಬಕಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ೨೦೧೬ ಏಪ್ರಿಲ್‌ನಲ್ಲಿ ಮದ್ಯ ಮಾರಾಟ ಮತ್ತು ಸೇವೆನೆಯನ್ನು ನಿರ್ಬಂಧಿಸಿತ್ತು.

ಗಡಿ ವಿವಾದ-ನಿಗಾವಹಿಸಲು ಐಪಿಎಸ್ ಅಧಿಕಾರಿ ನೇಮಕ

ನವದೆಹಲಿ, ಡಿ. ೧೫: ಮಹಾರಾಷ್ಟç-ಕರ್ನಾಟಕ ಗಡಿ ಸಂಘರ್ಷ ವಿಚಾರವಾಗಿ ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾವಹಿಸಲು ಐಪಿಎಸ್ ಅಧಿಕಾರಿ ನೇಮಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಗಡಿ ವಿವಾದ ಕುರಿತು ಇಂದು ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ೨೦೦೪ ರಿಂದ ಏನೆಲ್ಲ ಆಯ್ತು ಎಂದು ಸಭೆಯಲ್ಲಿ ವಿವರಿಸಿದ್ದೇನೆ. ಮಹಾರಾಷ್ಟçದವರು ತಮ್ಮ ವಾದ ಮುಂದಿಟ್ಟರು. ಎರಡು ವಾದವನ್ನು ಕೇಳಿದ ಬಳಿಕ ಕೆಲವು ನಿರ್ದೇಶನ ನೀಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಿಗೂ ಅವರು ಮನವಿ ಮಾಡಿದ್ದಾರೆ. ರಾಜಕೀಯ ಹೊರತಾಗಿ ಒಂದಾಗಿ ಇರುವ ಬಗ್ಗೆ ಹೇಳಿದ್ದಾರೆ ಎಂದು ಹೇಳಿದರು. ಅಂತೆಯೇ ಸುಪ್ರೀಂ ಆದೇಶದವರೆಗೂ ಯಾವುದೇ ನಿರ್ಧಾರ ಸಾಧ್ಯವಿಲ್ಲ, ಸಣ್ಣಪುಟ್ಟ ಸಮಸ್ಯೆಗಳ ತಟಸ್ಥ ಸಮಿತಿಯಲ್ಲೇ ಪರಿಹರಿಸಿಕೊಳ್ಳಬೇಕು. ಜನರ ನಡುವೆ ಏನು ಸಮಸ್ಯೆ ಇಲ್ಲ. ಈ ಬಗ್ಗೆ ಯಾರು ಕೂಡ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಸುಪ್ರೀಂಕೋರ್ಟ್ ಈ ಬಗ್ಗೆ ಆದೇಶ ನೀಡಲಿದೆ. ಸಣ್ಣ ಪುಟ್ಟ ವಿಚಾರಗಳ ಸಮಸ್ಯೆಗಳಿದ್ದರೆ ತಟಸ್ಥ ಸಮಿತಿಯಲ್ಲಿ ಚರ್ಚಿಸಿ ಸರಿ ಮಾಡಿಕೊಳ್ಳುವಂತೆ ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಿದರು.

ಶರದ್ ಪವಾರ್‌ಗೆ ಜೀವ ಬೆದರಿಕೆ

ಮುಂಬೈ, ಡಿ. ೧೫: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ವ್ಯಕ್ತಿಯನ್ನು ಮುಂಬೈ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ತನ್ನ ಪತ್ನಿ ಎನ್‌ಸಿಪಿ ಕಾರ್ಯಕರ್ತನೊಂದಿಗೆ ಓಡಿಹೋದ ನಂತರ ಮತ್ತು ಪಕ್ಷದ ಮುಖ್ಯಸ್ಥರು ಈ ವಿಷಯದಲ್ಲಿ ಮಧ್ಯಪ್ರವೇಶಿಸದ ಕಾರಣ ಆಕ್ರೋಶಗೊಂಡು ಅವರಿಗೆ ಬೆದರಿಕೆ ಹಾಕಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ೪೬ ವರ್ಷದ ಆರೋಪಿ ಬಿಹಾರಕ್ಕೆ ಸ್ಥಳಾಂತರಗೊಳ್ಳುವ ಮೊದಲು ೧೦ ವರ್ಷಗಳ ಕಾಲ ತನ್ನ ಪತ್ನಿಯೊಂದಿಗೆ ಪುಣೆಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪವಾರ್ ಅವರ ಲ್ಯಾಂಡ್‌ಲೈನ್ ಫೋನ್‌ಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ಮುಂಬೈ ಪೊಲೀಸರು ಆರೋಪಿಯನ್ನು ಪಾಟ್ನಾದಿಂದ ಬುಧವಾರ ಬಂಧಿಸಿದ್ದಾರೆ. ಪ್ರಕರಣದಲ್ಲಿ ಆತನ ವಿಚಾರಣೆಯ ನಂತರ, ಆರೋಪಿಯನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆಯ ಸಮಯದಲ್ಲಿ, ಆರೋಪಿ ಬಿಹಾರಕ್ಕೆ ಸ್ಥಳಾಂತರಗೊಳ್ಳುವ ಮೊದಲು ತನ್ನ ಹೆಂಡತಿಯೊAದಿಗೆ ೧೦ ವರ್ಷಗಳ ಕಾಲ ಪುಣೆಯಲ್ಲಿ ವಾಸಿಸುತ್ತಿದ್ದ. ಈ ವೇಳೆ ತನ್ನ ಪತ್ನಿ ಎನ್‌ಸಿಪಿ ಕಾರ್ಯಕರ್ತನೊಂದಿಗೆ ಓಡಿಹೋಗಿ ಮದುವೆಯಾದಳು ಎಂದು ಆರೋಪಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರದ್ಧಾ ಹತ್ಯೆ ಪ್ರಕರಣ : ಡಿಎನ್‌ಎ ಹೋಲಿಕೆ

ನವದೆಹಲಿ, ಡಿ. ೧೫: ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಮೆಹ್ರುಲಿ ಅರಣ್ಯದಲ್ಲಿ ಸಿಕ್ಕಿದ್ದ ಮೂಳೆಗಳು ಶ್ರದ್ಧಾ ವಾಲ್ಕರ್ ಅವರದೇ ಎಂಬುದು ಡಿಎನ್‌ಎ ಪರೀಕ್ಷೆಯಿಂದ ಸಾಬೀತಾಗಿದೆ. ಶ್ರದ್ಧಾ ತಂದೆಯ ಡಿಎನ್‌ಎ ಜೊತೆಗೆ ಶ್ರದ್ಧಾ ಡಿಎನ್‌ಎ ಹೋಲಿಕೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಮಹತ್ವದ ಸಾಕ್ಷö್ಯ ಸಿಕ್ಕಿರುವುದರಿಂದ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ತಯಾರು ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲು ಅಫ್ತಾಬ್ ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತ ಮೇ ೧೮ ರಂದು ೨೬ ವರ್ಷದ ಶ್ರದ್ಧಾ ಎಂಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದ. ಬಳಿಕ ಪೊಲೀಸರ ಕಣ್ಣು ತಪ್ಪಿಸಲು ಆಕೆಯ ದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ ದೆಹಲಿಯ ಮೆಹರೌಲಿ ಅರಣ್ಯದಲ್ಲಿ ಎಸೆದಿದ್ದ. ಪ್ರಕರಣಕ್ಕೆ ಸಂಬAಧಿಸಿದAತೆ ಅಫ್ತಾಬ್‌ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಪ್ರಮುಖ ಸಾಕ್ಷö್ಯಗಳಾದ ಹತ್ಯೆಗೆ ಸಂಬAಧಿತ ಆಯುಧ, ಶ್ರದ್ಧಾ ಮೊಬೈಲ್ ಮತ್ತು ಕೊಲೆಯಾದ ದಿನ ಧರಿಸಿದ್ದ ಬಟ್ಟೆ ವಶಕ್ಕೆ ಪಡೆಯಲಾಗಿತ್ತು. ಪ್ರಮುಖ್ಯ ಸಾಕ್ಷö್ಯಗಳೇ ಲಭ್ಯವಾಗದಿರುವುದು ಪೊಲೀಸರಿಗೆ ವಿಚಾರಣೆಯಲ್ಲಿ ತೀವ್ರ ಹಿನ್ನಡೆ ಉಂಟು ಮಾಡಿತ್ತು. ಇದೀಗ ಡಿಎನ್‌ಎ ವರದಿ ಶ್ರದ್ಧಾ ಜೊತೆ ಹೋಲಿಕೆಯಾಗಿದೆ.