ಮಡಿಕೇರಿ, ಡಿ. ೧೬: ವಿದ್ಯಾಸಂಸ್ಥೆಯಲ್ಲಿ ಇನ್ನರ್‌ವೀಲ್ ಕ್ಲಬ್ ಆಫ್ ಮಡಿಕೇರಿ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಬಗ್ಗೆ ಸಮಾಲೋಚನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಡಾ. ಆರತಿ ಸೋಮಯ್ಯ ಭಾಗವಹಿಸಿ ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಉದ್ವೇಗದ ನಿಭಾಯಿಸುವಿಕೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷರಾದ ಡಾ. ರೇಣುಕ ಸುಧಾಕರ್, ಕಾರ್ಯದರ್ಶಿಗಳಾದ ಲಲಿತಾ ರಾಘವನ್, ಖಜಾಂಚಿ ರಶ್ಮಿ ಪ್ರವೀಣ್, ಸದಸ್ಯರಾದ ಉಮಾ ಗೌರಿ ಶಿವಪ್ರಸಾದ್, ಆ್ಯಗ್ನೇಸ್ ಮುತ್ತಣ್ಣ ಇವರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ದಾಕ್ಷಾಯಿಣಿ ವಾಸುದೇವ್, ಸಂಸ್ಥೆಯ ಕಾರ್ಯದರ್ಶಿಗಳಾದ ಸಚಿನ್ ವಾಸುದೇವ್ ಪಾಲ್ಗೊಂಡಿದ್ದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ದಿವ್ಯ ಆರೋರಾ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ್ ಪೂಜಾರ ಉಪಸ್ಥಿತರಿದ್ದರು.