ಕುಶಾಲನಗರ, ಡಿ. ೧೬: ನಾಗಾಲೋಟದ ಅಭಿವೃದ್ಧಿಯ ನಡುವೆ ಮಾನವೀಯತೆ ಮರೆಯಾಗು ತ್ತಿರುವುದು ಆತಂಕಕಾರಿ ಬೆಳವಣಿಗೆ ಯಾಗಿದೆ ಎಂದು ನಿವೃತ್ತ ಪ್ರೊ. ಬಿ.ಎನ್ ಬಾಲಾಜಿ ತಿಳಿಸಿದ್ದಾರೆ.
ಅವರು, ಕುಶಾಲನಗರದಲ್ಲಿ ನಡೆದ ಲಯನ್ಸ್ ಸಂಸ್ಥೆಯ ವಲಯ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಲಯನ್ಸ್ ಸಂಸ್ಥೆ ಸೇವಾ ಮನೋಭಾವನೆಯಲ್ಲಿ ವಿಶ್ವದ ಎಲ್ಲೆಡೆ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ. ತಳಮಟ್ಟದ ಜನತೆಗೆ ಎಲ್ಲ ರೀತಿಯ ಸೌಲಭ್ಯ ದೊರೆಯುವಂತೆ ಮಾಡುವ ಕಾಯಕ ಸದಾ ಮುಂದುವರೆಯಲಿ ಎಂದರು.
ಕುಶಾಲನಗರದ ರೈತ ಸಹಕಾರ ಭವನ ಸಭಾಂಗಣದಲ್ಲಿ ವಲಯ ಅಧ್ಯಕ್ಷ ಕೆ. ಶಾಶ್ವತ್ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಕನ್ನಿಕಾ ಬೋಪಣ್ಣ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ವಲಯ ಅಧ್ಯಕ್ಷ ಶಾಶ್ವತ್ ಬೋಪಣ್ಣ, ಕೊಡಗು ಜಿಲ್ಲೆಯಲ್ಲಿ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಒಟ್ಟು ೧೪ ಲಯನ್ಸ್ ಕ್ಲಬ್ ಘಟಕಗಳ ೩೫೦ ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ ಎಂದರು.
ಕೊಡಗು ಸೇರಿದಂತೆ ಮಂಗಳೂರು, ಹಾಸನ, ಚಿಕ್ಕಮಗಳೂರು ಹಾಗೂ ಮೈಸೂರು ಗಡಿಭಾಗದ ಲಯನ್ಸ್ ಸಂಸ್ಥೆಗಳ ಪ್ರತಿನಿಧಿಗಳು, ಪ್ರಾಂತೀಯ ಅಧ್ಯಕ್ಷರುಗಳು, ಜಿಲ್ಲಾಧ್ಯಕ್ಷರುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಾಧನೆಗೈದ ಲಯನ್ಸ್ ಪ್ರಮುಖರು ಹಾಗೂ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾವೇಶದ ಆಯೋಜಕ ಸಮಿತಿಯ ಅಧ್ಯಕ್ಷರಾದ ಟಿ.ಕೆ ರಾಜೀವ್, ಕಾರ್ಯದರ್ಶಿ ಸಿ.ವಿ ನಿಖೇಶ್, ಖಜಾಂಚಿ ಗ್ಲೆನ್ ಮೆನೆಜಸ್, ಸುಂಟಿಕೊಪ್ಪ ಕ್ಲಬ್ ಅಧ್ಯಕ್ಷರಾದ ಚಮನ್ ಚಿಟ್ಟಿಯಪ್ಪ, ಕಾರ್ಯದರ್ಶಿ ಎಸ್.ಎಸ್ ಶಶಾಂಕ್, ಖಜಾಂಚಿ ಡಿ.ಜೆ ದರ್ಶನ್, ಸಲಹೆಗಾರರಾದ ಎ.ಎಂ ಚಂಗಪ್ಪ, ಕೆ.ಸಿ ವಿಶ್ವನಾಥ್ ಹಾಗೂ ವಿವಿಧ ವಲಯ ಅಧ್ಯಕ್ಷರಾದ ಎಂ.ಎ ಹರೀಶ್, ಮೋಹನ್ ಕುಮಾರ್, ವಿನಯ, ನಿತಿ ಪೂಣಚ್ಚ ಹಾಗೂ ವಲಯ ಪ್ರಮುಖರಾದ ನವೀನ್ ಅಂಬೇಕಲ್, ಮಂಜುನಾಥ ಚೌಟ, ನಟರಾಜ್ ಕೆಸ್ತೂರ್, ಮೋಹನ್ರಾಜ್, ವಿವೇಕ್ ಜೋಯಪ್ಪ ಸೇರಿದಂತೆ ಕ್ಲಬ್ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಇದ್ದರು.