ಮಡಿಕೇರಿ, ಡಿ. ೧೪: ಪಿಯುಸಿ, ಸ್ನಾತಕ, ವೃತ್ತಿಪರ ಸ್ನಾತಕ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ. ೮೦ ಅಂಕ ಪಡೆದು ತೇರ್ಗಡೆಯಾಗಿ ವಿದ್ಯಾಭ್ಯಾಸ ಮುಂದುವರೆಸಲು ಬಯಸುವ ರಾಜ್ಯದ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಅರ್ಹ ಬಡ ವಿದ್ಯಾರ್ಥಿಗಳಿಗೆ ಧರ್ಮಾರ್ಥ ಸಂಸ್ಥೆಯಾದ ಕೃಷಿಕ್ ಸರ್ವೋದಯ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ೨೦೨೨-೨೦೨೩ನೇ ಸಾಲಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವ್ಯವಸಾಯ ಆಧಾರಿತ ಕುಟುಂಬಗಳು ಆರ್‌ಟಿಸಿ ಲಗತ್ತಿಸಬೇಕು. ಒಂದು ಹೆಕ್ಟೇರ್‌ಗಿಂತ ಕಡಿಮೆ ಒಣ ಭೂಮಿಯುಳ್ಳ ಸಣ್ಣ/ ಅತಿ ಸಣ್ಣ ವ್ಯವಸಾಯಗಾರರ ಮಕ್ಕಳು(ಪಹಣಿ ಲಗತ್ತಿಸಬೇಕು). ವ್ಯವಸಾಯ ಕೂಲಿ ಕಾರ್ಮಿಕರ ಮಕ್ಕಳು, ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ೧೦ನೇ ತರಗತಿಯವರೆಗೆ ವ್ಯಾಸಂಗ ಮಾಡಿರಬೇಕು.

ಅರ್ಜಿ ಸಲ್ಲಿಸಲು ಕಡೆಯ ದಿನಾಂಕವನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾ. ೩೧ ರವರೆಗೆ ವಿಸ್ತರಿಸಲಾಗಿದೆ. ಅರ್ಹತೆಯುಳ್ಳ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ತಾ. ೩೧ ರೊಳಗೆ ಕೃಷಿಕ್ ಸರ್ವೋದಯ ಫೌಂಡೇಶನ್, ನಂ. ೧೫, ೨ನೇ ಹಂತ ಗಾಲ್ಫ್ ಅವೆನ್ಯೂ ರಸ್ತೆ, ಹಳೆ ವಿಮಾನ ನಿಲ್ದಾಣದ ರಸ್ತೆ, ಕೋಡಿಹಳ್ಳಿ, ಬೆಂಗಳೂರು-೫೬೦೦೦೮ ಇಲ್ಲಿಗೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗೆ ದೂ. ೦೮೦-೨೫೨೦೨೨೯೯, ಮೊ. ೯೪೮೧೯೦೩೦೧೯, ವೆಬ್‌ಸೈಟ್ ತಿತಿತಿ.ಞsಜಿಞಚಿಡಿಟಿಚಿಣಚಿಞಚಿ.ಛಿom ನಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕೃಷಿಕ್ ಸರ್ವೋದಯ ಫೌಂಡೇಶನ್‌ನ ಕಾರ್ಯದರ್ಶಿ ಹೆಮ್ಮಿಗೆ ಮೋಹನ್ ತಿಳಿಸಿದ್ದಾರೆ.