ಮಡಿಕೇರಿ, ಡಿ. ೧೪: ಇತ್ತೀಚೆಗೆ ಸರಕಾರಿ ಪದವಿಪೂರ್ವ ಬಾಲಕರ ಕಾಲೇಜು, ಕುಶಾಲನ ಗರದಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಯಲ್ಲಿ ವೈಯಕ್ತಿಕ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿ ನಿಯಾದ ಭಾಂದವ್ಯ ಕೆ.ಎ. ರಸಾಯನಶಾಸ್ತç ವಿಷಯದಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದ್ದಾಳೆ. ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿಯಾದ ನೀಯಾ ಬೋಜಮ್ಮ ಕೆ.ಟಿ. ಸಹಕಾರ ನೀಡಿದ್ದಾಳೆ. ಇವರನ್ನು ಶಾಲೆಯ ವತಿಯಿಂದ ಗೌರವಿಸಿದ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಎಂ.ಬಿ. ಹಾಗೂ ಸಹಶಿಕ್ಷಕಿಯವರಾದ ಲೀನಾ ಸಿ.ಡಿ., ಚೈತ್ರ ಎನ್.ಬಿ. ಉಪಸ್ಥಿತರಿದ್ದರು.