ಮಡಿಕೇರಿ, ಡಿ. ೧೪: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ವ್ಯಾಸಂಗಮಾಡುತ್ತಿರುವ ಕೊಡವ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ೨೦೨೨-೨೩ನೇ ಸಾಲಿನ ಅಧ್ಯಕ್ಷರಾಗಿ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಕಾಂ. ಓದುತ್ತಿರುವ ಮಡಿ ಕೇರಿಯ ಮಂಡೇಪAಡ ನಂಜಪ್ಪ ಕುಟ್ಟಯ್ಯ ಹಾಗೂ ಕಾರ್ಯದರ್ಶಿಯಾಗಿ ಕಾಂಗೀರ ಬಿಷನ್ ಉತ್ತಪ್ಪ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಬಾಚಿನಾಡಂಡ ಶಿಮ್ಲ ಗಣಪತಿ, ಸಹ ಕಾರ್ಯದರ್ಶಿಯಾಗಿ ಬಾಳೆಯಡ ರಿಶ್ಚಿಕ ತಿಮ್ಮಯ್ಯ, ಖಜಾಂಚಿಯಾಗಿ ಚೌಂಡೀರ ಭೀಮಯ್ಯ ಮೇದಪ್ಪ, ಜಂಟಿ ಖಜಾಂಚಿಯಾಗಿ ಬದ್ದಂಜೆಟ್ಟಿರ ಸಾನಿಯ ತಿಮ್ಮಯ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಮಂಡುವAಡ ತಮ್ಮಯ್ಯ ಚಂಗಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚೆನ್ನಪಂಡ ಕುಶಾಲಪ್ಪ ಅಯ್ಯಣ್ಣ ನೇಮಕಗೊಂಡಿದ್ದಾರೆ.

ಪ್ರತಿವರ್ಷ ಸಂಘದಿAದ ಜನವರಿಯಲ್ಲಿ ೭ ಎ ಸೈಡೆಡ್ ಹಾಕಿ ಪಂದ್ಯಾವಳಿ ನಡೆಸುವುದು, ಮಾರ್ಚ್ನಲ್ಲಿ ವಾರ್ಷಿಕ ಹಬ್ಬ ನಡೆಸುವುದು ಹಾಗೂ ಮಂಗಳೂರಿಗೆ ತೆರಳಿದ ಸಂದರ್ಭ ಕೊಡವ ಜನಾಂಗದವರಿಗೆ ಯಾವುದಾದರೂ ಸಮಸ್ಯೆಗಳು ಎದುರಾದಲ್ಲಿ ಸಹಕರಿಸುವ ಉದ್ದೇಶ ಹೊಂದಿದೆ. ಅಗತ್ಯತೆ ಇರುವವರು ತುರ್ತು ಸಂದರ್ಭದಲ್ಲಿ ನಂಜಪ್ಪ (೯೪೮೧೨೫೩೨೫೪) ಬಿಷನ್ (೮೨೭೭೫೭೦೯೩೯) ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.