ಮಡಿಕೇರಿ ಡಿ.೧೫ : ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ಹೊದ್ದೂರು ಗ್ರಾಮದ ರಕ್ಷಕನಾದ ಶ್ರೀ ಶಾಸ್ತ ಈಶ್ವರ ದೇವರಿಗೆ ಬೆಳ್ಳಿಯ ಮತ್ತು ಕಂಚಿನ ಕವಚಧಾರಣೆ ಹಾಗೂ ಶ್ರೀ ಮಹಾಗಣಪತಿ ದೇವರಿಗೆ ಕಂಚಿನ ಕವಚಧಾರಣೆ ಮಹೋತ್ಸವ ತಾ.೧೮ ರಂದು ನಡೆಯಲಿದೆ.
ಅಂದು ಪ್ರಾತಃಕಾಲ ೬ ರಿಂದ ೯ ಗಂಟೆಗೆಯವರೆಗೆ ಶ್ರೀ ಗಣಪತಿ ಪೂಜೆ, ಶೃದ್ಧಿ ಪುಣ್ಯಾಹ, ಕಲಶ ಸ್ಥಾಪನೆ, ಶಾಂತಿ ಹೋಮ, ಶ್ರೀಮಹಾ ಪೂರ್ಣಾವತಿಯೊಂದಿಗೆ ಶ್ರೀ ಶಾಸ್ತ-ಈಶ್ವರ ದೇವರಿಗೆ ನೂತನ ಬೆಳ್ಳಿಯಹಾಗೂ ಕಂಚಿನ ಕವಚಧಾರಣೆ, ಶ್ರೀ ಮಹಾಗಣಪತಿ ದೇವರಿಗೆ ನೂತನ ಕಂಚಿನ ಕವಚ ಧಾರಣೆಯಾಗಲಿದೆ. ನಂತರ ಮಹಾ ಮಂಗಳಾರತಿ ಜರುಗಲಿದೆ.
ಶ್ರೀ ಬೇಟೆ ಅಯ್ಯಪ್ಪ ದೇವರಿಗೆ ಹಾಗೂ ಶ್ರೀ ವಿಷ್ಣುಮೂರ್ತಿ (ಚಾಮುಂಡಿ) ದೇವರಿಗೆ ಕಲಶ ಅಭಿಷೇಕ ಪೂಜೆಯೂ ನಡೆಯಲಿದೆ.
ಬೆಳಗ್ಗೆ ೧೦ ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥಪ್ರಸಾದ ಮತ್ತು ಅನ್ನ ಸಂತರ್ಪಣೆಯಾಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷÀ ಕೂಡಂಡ ರಾಜೇಂದ್ರ ಅಯ್ಯಮ್ಮ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದು, ಹೆಚ್ಚಿನ ಮಾಹಿತಿಗೆ ೯೮೪೫೫೭೧೨೯೦, ೯೮೮೦೨೯೫೫೬೪ ನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ.