ನಾಪೋಕ್ಲು, ಡಿ. ೧೫: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪ್ರಾಮಾಣಿಕವಾಗಿ ಭಾಗವಹಿಸುವುದೇ ಮುಖ್ಯ ಎಂದು ಹೈಕೋರ್ಟ್ ವಕೀಲ ಅಜ್ಜಿಕುಟ್ಟಿರ ಪೊನ್ನಣ್ಣ ಹೇಳಿದರು. ಇಲ್ಲಿನ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆ ವತಿಯಿಂದ ಸಮೀಪದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರ ಪ್ರೌಢಶಾಲಾ ಹಾಕಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮಕ್ಕಳಿಗೆ ಈ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿ ಜೊತೆಗೆ ಸಹಬಾಳ್ವೆಗೆ ಪೂರಕವಾಗುತ್ತದೆ. ಇಂತಹ ಕ್ರೀಡಾಕೂಟಗಳ ಮೂಲಕ ರಾಷ್ಟಿçÃಯ ಅಂತರರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳನ್ನು ನಮ್ಮ ಜಿಲ್ಲೆಯಿಂದ ಸಜ್ಜುಗೊಳಿಸಲು ನಾವೆಲ್ಲರೂ ಪ್ರೇರಣೆಯಾಗಿ ಪ್ರೋತ್ಸಾಹಿಸವಂತಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಾರ್ವಜನಿಕರ ಉತ್ತಮ ಒಡನಾಟದಿಂದ ನಾಡಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವುದು ಆಶಾದಾಯಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಬೊಪ್ಪಂಡ ಜಾಲಿ ಬೋಪಯ್ಯ ವಹಿಸಿದ್ದರು. ಅತಿಥಿಗಳಾಗಿ ಬೆಳೆಗಾರ ಮಂಡಿರ ಜಯ ದೇವಯ್ಯ ,ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾ ಟಂಡ ಪೂಣಚ್ಚ, ಅಪ್ಪಾರಂಡ ಅಪ್ಪಯ್ಯ, ಬೊಪ್ಪಂಡ ಕುಶಾಲಪ್ಪ, ಮಕ್ಕಿ ಸುಬ್ರಹ್ಮಣ್ಯ ಭಟ್, ಕೊಂಬAಡ ಗಣೇಶ್, ಬೊಳ್ಳಚೆಟ್ಟಿರ ಸುರೇಶ್ , ನಾಯಕಂಡ ದೀಪು ಚಂಗಪ್ಪ ,ಅಪ್ಪಚೆಟ್ಟೋಳಂಡ ನವೀನ್, ಪ್ರಾಂಶುಪಾಲರಾದ ಶಾರದಾ ಅಪ್ಪಣ್ಣ, ಉಪಸ್ಥಿತರಿದ್ದರು. ಶ್ರೀ ರಾಮ ಟ್ರಸ್ಟ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಧಿ ಪೂವಮ್ಮ ಪ್ರಾರ್ಥನೆ ಮಾಡಿ ಶಿಕ್ಷಕಿ ಲೀಲಾವತಿ ಸ್ವಾಗತಿಸಿ, ಶಿಕ್ಷಕರಾದ ಅಂಬ್ರಾಟಿ ಭಗವತಿ ಪ್ರಸಾದ್, ಕಂಗಾAಡ ಸ್ಮಿತಾ ನಿರೂಪಿಸಿ, ಮೂಡೆರ ಕಾಳಯ್ಯ ವೀಕ್ಷಕ ವಿವರಣೆ ನೀಡಿದರು, ಪಾಡಿಯಮ್ಮಂಡ ಚಂದ್ರಕಲಾ ವಂದಿಸಿದರು. ತೀರ್ಪುಗಾರರಾಗಿ ಬೈಯಂಡ ಲವ ಅಪ್ಪಚ್ಚ, ಕರವಂಡ ಅಪ್ಪಣ್ಣ, ಕರೋಟಿರ ಬೋಪಣ್ಣ, ಮಣವಟ್ಟೀರ ಅಯ್ಯಪ್ಪ, ಪಟ್ರಪಂಡ ಮಂದಣ್ಣ, ಬೈಯಂಡ ರಘು ತಿಮ್ಮಯ್ಯ ಪಾಲ್ಗೊಂಡಿದ್ದರು..

ಇAದು ನಡೆದ ಅಂತಿಮ ಪಂದ್ಯದಲ್ಲಿ ಗೋಣಿಕೊಪ್ಪದ ಕಾಲ್ಸ್ ತಂಡವು ಕೂಡಿಗೆಯ ಕ್ರೀಡಾ ಶಾಲಾ ತಂಡದೊAದಿಗೆ ಸ್ಪರ್ಧಿಸಿತು. ಕೂಡಿಗೆ ಕ್ರೀಡಾಶಾಲೆಯ ತಂಡ ೫ ಗೋಲುಗಳನ್ನು ಗಳಿಸಿ ವಿಜಯಪತಾಕೆ ಹಾರಿಸಿತು. ಕಾಲ್ಸ್ ತಂಡವು ೪ ಗೋಲುಗಳನ್ನು ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪAದ್ಯಾಟದ ಶ್ರೇಷ್ಠ ಆಟಗಾರ ಪ್ರಶಸ್ತಿ: ಕೂಡಿಗೆಯ ಕ್ರೀಡಾಶಾಲೆಯ ವಿಶ್ವಜಿತ್, ಬೆಸ್ಟ್ ಗೋಲ್ ಕೀಪರ್: ಜನರಲ್ ತಿಮ್ಮಯ್ಯ ಶಾಲೆಯ ವಿಶ್ವ ಮಂದಣ್ಣ, ಬೆಸ್ಟ್ ಆಫ್: ಕಾಲ್ಸ್ ಶಾಲೆಯ ಹೃತಿಕ್ ಅಯ್ಯಪ್ಪ, ಬೆಸ್ಟ್ ಫುಲ್ ಬ್ಯಾಕ್ ಕೆಪಿಎಸ್ ಪೊನ್ನಂಪೇಟೆಯ ಚಂದನ್ ಬಿ.ಎಂ., ಬೆಸ್ಟ್ ಫಾರ್ವರ್ಡ್ ಕಕ್ಕಬ್ಬೆ ಪ್ರೌಢಶಾಲೆಯ ಆಕಾಶ್ ತಮ್ಮಯ್ಯ ಪಡೆದುಕೊಂಡರು.

-ದುಗ್ಗಳ ಸದಾನಂದ