ವೀರಾಜಪೇಟೆ, ಡಿ. ೧೪: ಅರಣ್ಯದ ಅಂಚಿನಲ್ಲಿ ವಾಸಮಾಡುವ ನಿವಾಸಿಗಳಿಗೆ ಅರಣ್ಯ ಕಾಯ್ದೆ ಅನ್ವಯ ಕೃಷಿ ಮಾಡಲು ಸ್ಥಳವನ್ನು ನೀಡಿದ್ದರು. ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ಆರೋಪಿಸಿರುವ ನಿವಾಸಿಗಳು ವೈಯಕ್ತಿಕ ಪಹಣಿ ಪತ್ರವನ್ನು ನೀಡುವಂತೆ ಒತ್ತಾಯಿಸಿ ಶಾಸಕ ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದರು.

ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ ಅವರ ನೇತೃತ್ವದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಶಾಸಕರ ಭವನದಲ್ಲಿ ಮನವಿ ಸಲ್ಲಿಸಿದ ನಿವಾಸಿ ಗಳು ವೀರಾಜಪೇಟೆ ತಾಲೂಕು ಚೆನ್ನಯ್ಯನಕೊಟೆ ಮತ್ತು ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಅಂಚಿನಲ್ಲಿ ವಾಸ ಮಾಡುವ ನಿವಾಸಿಗಳಿಗೆ ವೈಯಕ್ತಿಕ ಪಹಣಿ ಪತ್ರ (ಆರ್.ಟಿ.ಸಿ) ಹಾಗೂ ಕೃಷಿಗಾಗಿ ಬಳಸಲು ೧೦.ಹೆಚ್.ಪಿ ವಿದ್ಯುತ್ ಉಚಿತ ನೀಡುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ, ಸರ್ಕಾರವು ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ನಮಗೆ ಸ್ಥಳವನ್ನು ನೀಡಿದೆ. ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ನೀಡಲಾ ಗಿರುವ ಪಹಣಿ ಪತ್ರದಲ್ಲಿ ವೈಯಕ್ತಿಕ ಪಹಣಿ ಇಲ್ಲದಿರುವುದರಿಂದ ಸರ್ಕಾರದಿಂದ ದೊರಕುವ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ಶಾಸಕರ ಗಮನ ಸೆಳೆದರು.

೨೦ ರಿಂದ ೩೦ ಕುಟುಂಬಗಳಿಗೆ ಒಂದೇ ಪಹಣಿ ಪತ್ರದಲ್ಲಿ ಹೆಸರುಗಳು ನಮೂದಾಗಿರುವ ಕಾರಣದಿಂದಾಗಿ ಸರ್ಕಾರದ ವಿವಿಧ ಇಲಾಖೆಗಳಿಂದ ಹೊಂದುವ ಸವಲತ್ತುಗಳನ್ನು ಪಡೆಯುವಲ್ಲಿ ವಿಫಲರಾಗುತಿದ್ದೇವೆ. ಅಲ್ಲದೆ ಕೃಷಿಯನ್ನು ನಂಬಿಕೊAಡು ಜೀವನ ಸಾಗಿಸುತ್ತಿರುವ ನಮಗೆ ಈಗಾಗಲೇ ಸರ್ಕಾರವು ೧೦ ಹೆಚ್.ಪಿ ವರೆಗಿನ ವಿದ್ಯುತ್ ಉಚಿತವಾಗಿ ನೀಡುವ ಯೋಜನೆಯು ಜಾರಿಗೆ ಬಂದಿದ್ದರು. ಪಹಣಿ ಇಲ್ಲದಿರುವು ದರಿಂದ ವಿದ್ಯುತ್ ಇಲಾಖೆಯು ಉಚಿತ ವಿದ್ಯುತ್ ನೀಡುತ್ತಿಲ್ಲ ಎಂದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಅರಣ್ಯ ಹಕ್ಕು ಅಧಿನಿಯ ಮದಂತೆ ಅರಣ್ಯ ಅಂಚಿನಲ್ಲಿರುವ ವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಕಂದಾಯ ಇಲಾಖೆಯಿಂದ ನೀಡಲಾಗಿರುವ ಪಹಣಿ ಪತ್ರದಲ್ಲಿ ಸಾಮೂಹಿಕವಾಗಿ ಕುಟುಂಬಗಳನ್ನು ಅಳವಡಿಸಿಕೊಂಡು ಹಕ್ಕುಪತ್ರ ನೀಡಲಾಗಿದೆ.

ವೈಯಕ್ತಿಕವಾಗಿ ಪಹಣಿ ನೀಡಿದಲ್ಲಿ ಮಾರಾಟ ಮಾಡುವ ಅವಕಾಶಗಳಿವೆ. ಇದು ಸರ್ಕಾರದ ಮಟ್ಟದ ಸಮಸ್ಯೆಯಲ್ಲಾ ಬದಲಿಗೆ ಸ್ಥಳೀಯವಾಗಿ ಸಮಸ್ಯೆಯನ್ನು ಬಗೆಹರಿಸುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಮಾಲ್ದಾರೆ ಗ್ರಾ.ಪಂ. ಸದಸ್ಯೆ ಜೆ.ಎಲ್. ಶೋಭಾ, ಚೆನ್ನಯ್ಯನಕೋಟೆ ಗ್ರಾ.ಪಂ ಸದಸ್ಯೆ ಜೆ.ಎ. ಜಯಮ್ಮ, ಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕರಾದ ಜೆ.ಕೆ. ಅಣ್ಣಯ್ಯ, ಚಿಕ್ಕರೇಶ್ಮೆಯ ಪಿ.ಎಸ್. ಕಾಶಿ, ಪಿ. ರವಿ ಪಿ.ಎಂ. ಮಲ್ಲ, ಪಾಪಣ್ಣ ಸೇರಿದಂತೆ ದಿಡ್ಡಳ್ಳಿ, ತಟ್ಟಳ್ಳಿ, ಗೇಟ್ ಹಾಡಿ, ಚೊಟ್ಟೆಪಾರೆ, ಬಸವನಹಳ್ಳಿ, ಕೆಸುವಿನ ಕೆರೆ, ದಯ್ಯದ ಹಡ್ಲು, ಚಿಕ್ಕರೇಶ್ಮೆ, ದೊಡ್ಡರೇಶ್ಮೆ, ಬಗ್ಗದ ಹಡ್ಲು, ಹಸುವಿನ ತೋಟ ವ್ಯಾಪ್ತಿಯ ನಿವಾಸಿಗಳು ಹಾಜರಿದ್ದರು.