ಮಡಿಕೇರಿ, ಡಿ. ೧೪: ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವಾಲಯದಲ್ಲಿ ಹೊರಾಂಗಣದ ಸುತ್ತ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗೆ ಗ್ರಾಮದ ಹಿರಿಯರಾದ ತೆನ್ನಿರ ತಿಮ್ಮಯ್ಯ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಆರಂಭದಲ್ಲಿ ದೇವನೆಲೆಯಲ್ಲಿ ದೇವಸ್ಥಾನದ ಪರವಾಗಿ ಆಡಳಿತ ಮಂಡಳಿಯ ಸದಸ್ಯ ಚೆರುಮಾಡಂಡ ಸತೀಶ್ ಸೋಮಣ್ಣ ಹಾಗೂ ಒಕ್ಕದ ಪರವಾಗಿ ತೆನ್ನಿರ ಮೈನ ಪ್ರಾರ್ಥನೆ ಮಾಡಿದರು.ದೇವಸ್ಥಾನದ ಮುಖ್ಯ ಅರ್ಚಕರಾದ ದೇವಿ ಪ್ರಸಾದ್ ರವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಗ್ರಾಮದ ಹಿರಿಯರಾದ ತೆನ್ನಿರ ಸಾಬು ಬೆಳ್ಯಪ್ಪ, ತೆನ್ನಿರ ಜಯ ದೇವಯ್ಯ, ಆಡಳಿತ ಮಂಡಳಿ ಖಜಾಂಚಿ ಮುಂಜಾAದಿರ ವಾಸು ನಾಣಯ್ಯ, ಕಾರ್ಯದರ್ಶಿ ಗೋವಿಂದಮ್ಮನ ರಾಮಯ್ಯ, ಸದಸ್ಯರಾದ ತೆನ್ನಿರ ಪೆಮ್ಮಯ್ಯ, ಚಾತುರನ ಅಶೋಕ್, ಕೋಳುಮಾಡಂಡ ಕಿರಣ್, ತಳೂರು ಸೋಮಣ್ಣ, ತೆನ್ನಿರ ರಮೇಶ್ ಪೊನ್ನಪ್ಪ, ತೆನ್ನಿರ ಕಾರ್ಯಪ್ಪ, ಚೆರುಮಾಡಂಡ ವಿನ್ಯಾಸ್ ಪೂವಯ್ಯ, ತೆನ್ನಿರ ಜಾಲಿ ಗಂಗಮ್ಮ, ಪೊನ್ನಮ್ಮ, ಲಿಲ್ಲಿ ದೇವಯ್ಯ, ಜಮುನಾ ಪೆಮ್ಮಯ್ಯ, ಪಟ್ಟತಿ ಕುಶ, ಗುತ್ತಿಗೆದಾರ ಬಿಜು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.