(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಡಿ. ೧೩: ಈ ದೇಶಕ್ಕೆ ಅನ್ನ ನೀಡುವ ಅನ್ನದಾತನ ಕೈ ಹಿಡಿಯಲು ಈ ಬಾರಿ ಅಕಾಲಿಕ ಮಳೆ ಅಡ್ಡಿಪಡಿಸಿದೆ. ತನ್ನ ಭತ್ತದ ಗದ್ದೆಯನ್ನು ಉತ್ತಿ ಬಿತ್ತಿ ಬೆಳೆದ ಫಸಲು ಇನ್ನೇನು ಕೈ ಸೇರಬೇಕು ಅನ್ನುವಷ್ಟರಲ್ಲಿ ಅಕಾಲಿಕ ಮಳೆಯಿಂದಾಗಿ ಭತ್ತದ ಫಸಲು (ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಡಿ. ೧೩: ಈ ದೇಶಕ್ಕೆ ಅನ್ನ ನೀಡುವ ಅನ್ನದಾತನ ಕೈ ಹಿಡಿಯಲು ಈ ಬಾರಿ ಅಕಾಲಿಕ ಮಳೆ ಅಡ್ಡಿಪಡಿಸಿದೆ. ತನ್ನ ಭತ್ತದ ಗದ್ದೆಯನ್ನು ಉತ್ತಿ ಬಿತ್ತಿ ಬೆಳೆದ ಫಸಲು ಇನ್ನೇನು ಕೈ ಸೇರಬೇಕು ಅನ್ನುವಷ್ಟರಲ್ಲಿ ಅಕಾಲಿಕ ಮಳೆಯಿಂದಾಗಿ ಭತ್ತದ ಫಸಲು ಸಂಕಷ್ಟ ಮತ್ತಷ್ಟು ಬಿಗಡಾಯಿಸಿದ್ದು ಇರುವ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ರೈತ ತನ್ನ ಗದ್ದೆಯಲ್ಲಿ ಶ್ರಮಿಸುತ್ತಿದ್ದಾನೆ. ಆಗೊಮ್ಮೆ – ಈಗೊಮ್ಮೆ ಸೂರ್ಯನ ಕಿರಣಗಳು ಬೀಳುತ್ತಿರುವುದರಿಂದ ರೈತನ ಮೊಗದಲ್ಲಿ ಹರ್ಷ ಮೂಡಲಾರಂಭಿಸಿದೆ. ಆದರೂ ಕಟಾವಿಗೆ ಬಂದಿರುವ ಭತ್ತದ ಫಸಲು ಈಗಾಗಲೇ ಬಹುತೇಕ ರೈತರು ಗದ್ದೆಯಲ್ಲಿ ಕೊಯ್ದು ಒಣ ಹಾಕಿದ್ದಾರೆ. ಬಿಸಿಲಿನ ತಾಪವಿಲ್ಲದೆ ಹಸಿಯಾಗಿಯೆ ಉಳಿದುಕೊಂಡಿದೆ.

ದ.ಕೊಡಗಿನ ಕಿರುಗೂರು, ಹಳ್ಳಿಗಟ್ಟು, ಶ್ರೀಮಂಗಲ, ಕುರ್ಚಿ ಸೇರಿದಂತೆ ಅನೇಕ ಭಾಗಗಳಲ್ಲಿ ರೈತರು ಕೃಷಿ ಭೂಮಿಯನ್ನು ಇಂದಿಗೂ ಮುಂದುವರೆಸಿಕೊAಡು ಬೆಳೆಯುತ್ತಿದ್ದಾರೆ. ವರ್ಷಂಪ್ರತಿ ಭತ್ತ ಬೆಳೆಯುವ ರೈತನಿಗೆ ಒಂದಿಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಇದರಿಂದ ರೈತ

(ಮೊದಲ ಪುಟದಿಂದ) ಕಂಗಾಲಾಗಿದ್ದು ತನ್ನ ಭತ್ತದ ಭೂಮಿಯನ್ನು ಹಸನು ಮಾಡಿದರೂ ನಷ್ಟ ಅನುಭವಿಸುವ ಪರಿಸ್ಥಿತಿ ಬಂದೊದಗಿದೆ.

ರೂ. ೬ ಲಕ್ಷದಷ್ಟು ನಷ್ಟ

ಭತ್ತದ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನ ಅವಳಿ ಸಹೋದರರಾದ ರವಿಶಂಕರ್ ಹಾಗೂ ಜಯಶಂಕರ್ ಎಂಬವರು ಸಾಂಪ್ರದಾಯಿಕವಾಗಿ ತಮ್ಮ ಭತ್ತದ ಕೃಷಿಯನ್ನು ತಲಾತಲಾಂತರದಿAದ ಮುಂದುವರೆಸಿಕೊAಡು ಬರುತ್ತಿದ್ದಾರೆ. ೪೦ ಏಕರೆಗೂ ಅಧಿಕ ಭತ್ತದ ಭೂಮಿಯನ್ನು ಬೆಳೆಯುತ್ತಿರುವ ಈ ಅವಳಿ ಸಹೋದರರು ಯಾವುದೇ ಸಂದರ್ಭದಲ್ಲಿ ಏನೇ ಸಮಸ್ಯೆ ಎದುರಾದರೂ ಭತ್ತದ ಕೃಷಿಯನ್ನು ಬಿಟ್ಟಿಲ್ಲ. ಸ್ಥಳೀಯ ಕಾರ್ಮಿಕರಿಗೆ ಉದ್ಯೋಗವನ್ನು ನೀಡುತ್ತಾ ತಮ್ಮ ಭತ್ತದ ಕೃಷಿಯನ್ನು ಇಂದಿಗೂ ಮುಂದುವರೆಸುತ್ತಿದ್ದಾರೆ. ೩೫ಕ್ಕೂ ಅಧಿಕ ರೀತಿಯ ಭತ್ತದ ತಳಿಗಳನ್ನು ಬೆಳೆದಿರುವ ಈ ಅವಳಿ ಸಹೋದರರು ೨೫೦ಕ್ಕೂ ಅಧಿಕ ಕ್ವಿಂಟಾಲ್ ಭತ್ತದ ಬೀಜವನ್ನು ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ರೈತರಿಗೆ ಮಾರಾಟ ಮಾಡುತ್ತಲೇ ಬಂದಿದ್ದಾರೆ. ಇದರಿಂದ ಇವರ ವಾರ್ಷಿಕ ಆದಾಯ ಉತ್ತಮವಾಗಿದ್ದರೂ ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ೬ ಲಕ್ಷಕ್ಕೂ ಅಧಿಕ ಮೊತ್ತದ ಭತ್ತದ ಫಸಲು ನಷ್ಟಗೊಂಡಿದೆ.

ಭತ್ತದ ಗದ್ದೆಯಲ್ಲಿ ಅಕಾಲಿಕ ಮಳೆ ಸುರಿದಿರುವುದರಿಂದ ಬಹುತೇಕ ಫಸಲುಗಳು ಮೊಳಕೆ ಕಟ್ಟಲು ಆರಂಭಿಸಿವೆ. ೫೦ಕ್ಕೂ ಅಧಿಕ ಕಾರ್ಮಿಕರು ಬಿಡುವಿಲ್ಲದಂತೆ ಭತ್ತ ಕಟಾವು ನಡೆಸಿ ಮಳೆಯಿಂದ ಉಳಿದಿರುವ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾರೆ. ಮೋಡ ಮುಸುಕಿದ ವಾತಾವರಣವಿದ್ದು, ಮಳೆ ಬೀಳುವ ಸಂಭವ ಹೆಚ್ಚಾಗಿದೆ. ಮೋಡದ ವಾತಾವರಣದಿಂದಾಗಿ ಭತ್ತ ಬೆಳೆಯುವ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಕಾಲಿಕ ಮಳೆಯಿಂದಾಗಿ ಕೊಯ್ಲು ಮಾಡಿದ ಭತ್ತದ ಪೈರಿನ ಮೇಲೆ ನೀರು ಶೇಖರಣೆಗೊಂಡಿದೆ. ಹಲವು ರೈತರು ಭತ್ತ ಕಟಾವು ಮಾಡಿದ್ದಾರಾದರೂ ಅದು ಮಳೆಗೆ ಅಹುತಿಯಾಗುತ್ತಿದೆ.