ಮಡಿಕೇರಿ, ಡಿ. ೧೩: ಕೊಡವರ ಎಲ್ಲಾ ಕುಟುಂಬಗಳ ವಂಶಾವಳಿ ವೃಕ್ಷವನ್ನು ತಿತಿತಿ.ಞoಜಚಿvಚಿಛಿಟಚಿಟಿ. ಛಿom ಮೂಲಕ ಒಂದಕ್ಕೊAದು ಲಿಂಕ್ ಮಾಡಿ ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಣ ಪಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಕೊಡವ ಕ್ಲಾನ್ ಸಂಸ್ಥೆ ಇದೀಗ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ.
ತಾ.೨೪ ರಂದು ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲದ ‘ಕೂರ್ಗ್ ಎತ್ನಿಕ್’ನಲ್ಲಿ
(ಮೊದಲ ಪುಟದಿಂದ) ಎಲ್ಲಾ ಕುಟುಂಬಗಳ ಸುಮಾರು ೫ ಸಾವಿರ ಮಂದಿಯನ್ನು ಒಂದೆಡೆ ಸೇರಿಸಿ ಈಗಾಗಲೇ ಗಿನ್ನಿಸ್ ಬುಕ್ ನಲ್ಲಿ ದಾಖಲಾಗಿರುವ ೪೫೧೪ ಮಂದಿಯ “ಲಾರ್ಜೆಸ್ಟ್ ಫ್ಯಾಮಿಲಿ ಗ್ಯಾದರಿಂಗ್” ದಾಖಲೆಯನ್ನು ಮುರಿಯುವ ಗುರಿ ಇದಾಗಿದೆ ಎಂದು ಕೊಡವ ಕ್ಲಾನ್ ಸಂಸ್ಥೆಯ ಸಂಸ್ಥಾಪಕ ಗುಮ್ಮಟಿರ ಕಿಶು ಉತ್ತಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫ್ರಾನ್ಸ್ನಲ್ಲಿ ಒಲಿಮಿಯಾ ಕುಟುಂಬದ ೪೫೧೪ ಮಂದಿ ಒಂದೆಡೆ ಸೇರಿದ ದಾಖಲೆಯನ್ನು ಮುರಿಯುವುದಕ್ಕಾಗಿ ಸುಮಾರು ೫ ಸಾವಿರಕ್ಕೂ ಹೆಚ್ಚಿನ ಕೊಡವರನ್ನು ಸೇರಿಸಲಾಗುತ್ತಿದೆ. ಇಲ್ಲಿ ಬಂದು ಸೇರುವ ಎಲ್ಲಾ ಕೊಡವರು ಒಂದೇ ಕುಟುಂಬದವರೆAದು ದೃಢೀಕರಿಸಿ ಅವಿನಾಭಾವ ಸಂಬAಧವನ್ನು ಗಟ್ಟಿಗೊಳಿಸುವ ವಿಶ್ವಾಸವನ್ನು ಹೊಂದಿದ್ದೇವೆ. ಎಲ್ಲಾ ಕೊಡವರು ಒಂದೇ ಸ್ಥಳದಲ್ಲಿ ಸೇರುವ ಮೂಲಕ ಹೊಸ ವಿಶ್ವ ದಾಖಲೆ ಮಾಡಲಿದ್ದೇವೆ ಎಂದರು.
ತಾ.೨೪ರ ಕಾರ್ಯಕ್ರಮಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನ ಪ್ರತಿನಿಧಿಗಳು ಆಗಮಿಸಿ ಸಂಖ್ಯೆಯನ್ನು ದಾಖಲೀಕರಣ ಮಾಡಿಕೊಳ್ಳಲಿದ್ದಾರೆ. ನಂತರ ವಿಶ್ವ ದಾಖಲೆಗೆ ಶಿಫಾರಸ್ಸು ಆಗಲಿದೆ ಎಂದು ತಿಳಿಸಿದರು.
ಕೊಡವರು ಸೇರುವ “ಕೂರ್ಗ್ ಎತ್ನಿಕ್” ನಲ್ಲಿ ಹಲವು ಬಗೆಯ ಸುಮಾರು ೫೦ ಸ್ಟಾಲ್ಗಳನ್ನು ತೆರೆಯಲಾಗುವುದು. ವಿವಿಧ ಸ್ಪರ್ಧೆಗಳು, ಫ್ಯಾಷನ್ ಶೋ ಮತ್ತು ವಾಲಗತ್ತಾಟ್ ನಡೆಯಲಿದೆ. ಹಿರಿಯ ಕಲಾವಿದ ಮುಲ್ಲೆರ ಜಿಮ್ಮಿ ಅಯ್ಯಪ್ಪ ಅವರ ನೆನಪಿನಲ್ಲಿ ಅವರ ಹಾಡುಗಳನ್ನು ವೀರಾಜಪೇಟೆ ತಂಡದವರು ಹಾಡಲಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ ೮.೩೦ ಗಂಟೆಯಿAದ ಹೆಸರು ನೋಂದಣಿ ಮೂಲಕ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕೊಡವ ಕ್ಲಾನ್ ಸಂಸ್ಥೆ ಕಳೆದ ೮ ವರ್ಷಗಳಿಂದ ೨೧ ಸಾವಿರಕ್ಕೂ ಹೆಚ್ಚಿನ ಕೊಡವರು ಒಂದೇ ವಂಶ ವೃಕ್ಷದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು, ೧೮ ತಲೆಮಾರಿನ ಒಟ್ಟು ೭೫೧ ಕೊಡವ ಕುಟುಂಬಗಳ ದಾಖಲೆಗಳು ಕೊಡವ ಕ್ಲಾನ್ ವಂಶವೃಕ್ಷದಲ್ಲಿದೆ ಎಂದು ಕಿಶು ಉತ್ತಪ್ಪ ತಿಳಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಬಿಟ್ಟಂಗಾಲದಲ್ಲಿ ನಡೆಯುವ ಕೊಡವ ಸಾಹಿತಿಗಳಿಗೆ ತಾವು ಬರೆದ ಪುಸ್ತಕಗಳನ್ನು ಮಾರಾಟ ಮಾಡಲು ಪ್ರತ್ಯೇಕ ಪುಸ್ತಕ ಮಳಿಗೆಯನ್ನು ತೆರೆಯಲಾಗುವುದು. ಮಾರಾಟವಾಗಿ ಬಂದ ಹಣವನ್ನು ಆಯಾ ಪುಸ್ತಕ ರಚನೆಕಾರರಿಗೆ ನೀಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗೆ ೯೮೪೫೩ ೯೦೫೨೨ ಹಾಗೂ ೯೮೮೦೭ ೭೮೦೪೭ ದೂರವಾಣಿಯನ್ನು ಸಂಪರ್ಕಿಸಬಹುದೆAದು ತಿಳಿಸಿದರು.