ಮಡಿಕೇರಿ, ಡಿ. ೧೩: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆ ಆದ ದಿನವಾದ ತಾ. ೧೫ ರಂದು ಮಡಿಕೇರಿಯಲ್ಲಿ ಅರೆಭಾಷೆ ದಿನಾಚರಣೆಯನ್ನು ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದೇವರಗುಂಡ ಸದಾನಂದ ಗೌಡ ಅವರು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾಗಿ, ಕೊಂಬಾರನ ಜಿ. ಬೋಪಯ್ಯ ಅವರು ವಿಧಾನ ಸಭಾಧ್ಯಕ್ಷರಾಗಿದ್ದ ಸಂದರ್ಭ ದಿನಾಂಕ ೧೫.೧೨.೨೦೧೧ ರಂದು ಕರ್ನಾಟಕ ಸರಕಾರ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿತು.

೨೦೧೧ ರಿಂದ ೨೦೨೨ರವರೆಗೆ ಎನ್.ಎಸ್. ದೇವಿಪ್ರಸಾದ್, ಕೊಲ್ಯದ ಆರ್. ಗಿರೀಶ್, ಪಿ.ಸಿ. ಜಯರಾಮ್ ಹಾಗೂ ಲಕ್ಷಿö್ಮನಾರಾಯಣ ಕಜೆಗದ್ದೆ ಇವರುಗಳು ಅಕಾಡೆಮಿಯ ಅಧ್ಯಕ್ಷರುಗಳಾಗಿ ಅರೆಭಾಷಿಕ ಜನಾಂಗದ ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಶ್ರಮಿಸಿದ್ದಾರೆ. ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ಡಿಸೆಂಬರ್ ೧೫ನ್ನು ಅಕಾಡೆಮಿ ವತಿಯಿಂದ ಅರೆಭಾಷೆ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಕಾಡೆಮಿಯಲ್ಲಿ ಅಧಿಕಾರದಲ್ಲಿದ್ದ ತಂಡ ತಾ. ೧೫.೧೦.೨೦೨೨ ರಂದು ಅವಧಿ ಪೂರ್ಣಗೊಳಿಸಿ ಬರಕಾಸ್ತು ಗೊಂಡಿದೆ. ಹಾಗೆಯೇ ನೂತನ ಆಡಳಿತ ತಂಡ ಸರಕಾರದಿಂದ ಘೋಷಣೆಗೆ ಬಾಕಿ ಇರುವುದರಿಂದ ೨೦೨೨ನೇ ಸಾಲಿನ ಅರೆಭಾಷೆ ದಿನಾಚರಣೆಯನ್ನು ಕೊಡಗು ಗೌಡ ಸಮಾಜಗಳ

(ಮೊದಲ ಪುಟದಿಂದ) ಒಕ್ಕೂಟ ಎಲ್ಲಾ ಗೌಡ ಸಮಾಜಗಳ ಸಹಭಾಗಿತ್ವದಲ್ಲಿ ತಾ. ೧೫ ರಂದು ಆಚರಿಸಲು ನಿರ್ಧರಿಸಿ ಪೂರ್ವಭಾವಿ ತಯಾರಿ ನಡೆಸಿದೆ. ತಾ. ೧೫ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟವು ಕೊಡಗು ಗೌಡ ಸಮಾಜ ಮಡಿಕೇರಿ, ಕೊಡಗು ಗೌಡ ವಿದ್ಯಾಸಂಘ, ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ನಿವೃತ್ತ ನೌಕರರ ಸಂಘ, ಕೊಡಗು ಗೌಡ ಮಾಜಿ ಸೈನಿಕರ ಸಂಘ, ಮದೆನಾಡು ಗೌಡ ಸಮಾಜ, ಕೊಡಗು ಗೌಡ ಮಹಿಳಾ ಒಕ್ಕೂಟ, ಮಕ್ಕಂದೂರು ಗೌಡ ಸಮಾಜ ಇವುಗಳ ಸಹಭಾಗಿತ್ವದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಅರೆಭಾಷೆ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದೆ.

ಉಳಿದ ಗೌಡ ಸಮಾಜಗಳು ಈ ದಿನಾಚರಣೆಯನ್ನು ಅದೇ ದಿನ ಆಯಾಯ ಸಮಾಜಗಳಲ್ಲಿ ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಿಕೊಂಡಿವೆ. ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅರೆಭಾಷೆ ಸಾಂಸ್ಕೃತಿಕ ಅಕಾಡೆಮಿ ಮಾಜಿ ಅಧ್ಯಕ್ಷ ತುಂತಜೆ ಗಣೇಶ್, ಮಡಿಕೇರಿ ತಾಲೂಕು ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಮಿಟ್ಟು ರಂಜಿತ್, ಮಡಿಕೇರಿ ನಗರಸಭಾ ಮಾಜಿ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹಾಗೂ ಎಲ್ಲಾ ಗೌಡ ಸಮಾಜ ಸಂಘಟನೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಸೂರ್ತಲೆ ಸೋಮಣ್ಣ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಅಂಬೆಕಲ್ ನವೀನ್, ಗೌರವ ಕಾರ್ಯದರ್ಶಿ ಪೇರಿಯನ ಉದಯ, ನಿರ್ದೇಶಕ ಪಾಣತ್ತಲೆ ಪಳಂಗಪ್ಪ, ಗೌಡ ಯುವವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಉಪಸ್ಥತರಿದ್ದರು.