ವೀರಾಜಪೇಟೆ, ಡಿ. ೧೪: ತಾ. ೧೯ ರಿಂದ ೨೨ ರವರೆಗೆ ಕಂಡAಗಾಲ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶಾಲಾ ಕ್ರೀಡಾ ಸಮಿತಿಯಿಂದ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಮುಲ್ಲೆಂಗಡ ಅಶೋಕ್ ತಿಳಿಸಿದ್ದಾರೆ.
ಪಂದ್ಯಾಟವು ಬೇರಳಿನಾಡು ಮತ್ತು ಕುತ್ತುನಾಡುವಿನಲ್ಲಿರುವ ಐನ್ಮನೆ ಇರುವ ಕುಟುಂಬಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ೪ ಜನ ಅತಿಥಿ ಆಟಗಾರರನ್ನು ಯಾವುದೇ ಜಾತಿ, ಮತ, ಭೇದ ಇಲ್ಲದೆ ಸೇರಿಸಿಕೊಳ್ಳಬಹುದಾಗಿದೆ. ತಾ. ೨೨ ರಂದು ಪೂರ್ವಾಹ್ನ ೯ ಗಂಟೆಗೆ .೨೨ ಕೋವಿಯಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.