ಮಡಿಕೇರಿ, ಡಿ. ೧೪: ಐತಿಹಾಸಿಕ ಹಿನ್ನೆಲೆಯಿರುವ., ಪುರಾತನವಾದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯದ ಆವರಣ ಗೋಡೆ (ಮೂರನೇ ಪೌಳಿ)ಯನ್ನು ಒಡೆದು ಆವರಣದೊಳಗಡೆ ಕಾರು ನುಗ್ಗಿಸಿ, ದೇವಾಲಯದ ಮೂಲ ಸ್ವರೂಪಕ್ಕೆ ಧಕ್ಕೆ ಉಂಟು ಮಾಡಿರುವ ದೇವಾಲಯದ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.

ಓಂಕಾರೇಶ್ವರ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪರಿಚಾರಕರಾಗಿ ಕೆಲಸ ನಿರ್ವಹಿಸುತ್ತಿ ರುವ ಪುನಿತ್ ಹಾಗೂ ಭರತ್ ಎಂಬವರುಗಳು ದೇವಾಲಯದ ಬಲಬದಿಯಲ್ಲಿರುವ ಆವರಣ ಗೋಡೆಯನ್ನು ಒಡೆದು ಹಾಕಿ ಕಾರನ್ನು ಆವರಣದೊಳಗಡೆ ನಿಲ್ಲಿಸುತ್ತಿದ್ದರು. ಈ ವಿಚಾರ ಅರಿತ ದೇವಾಲಯದ ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಪಿ.ಎಲ್. ದೇವರಾಜು ಅವರು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಗೋಡೆ

(ಮೊದಲ ಪುಟದಿಂದ) ಒಡೆದಿರುವುದಕ್ಕೆ ಕಾರಣ ಕೇಳಿ ಶೋಕಾಸ್ ನೋಟೀಸ್ ಕೂಡ ಜಾರಿ ಮಾಡಿದ್ದರು. ನೋಟೀಸ್‌ಗೆ ಉತ್ತರ ನೀಡಿರುವ ಸಿಬ್ಬಂದಿಗಳು ದೇವಾಲಯಕ್ಕೆ ಬೇಕಾಗುವ ತೆಂಗಿನಕಾಯಿ, ಇನ್ನಿತರ ಸಾಮಗ್ರಿಗಳನ್ನು ಕೊಂಡೊಯ್ಯುವ ಸಲುವಾಗಿ ಗೋಡೆ ಒಡೆದಿರುವದಾಗಿ ಸಮಜಾಯಿಷಿಕೆ ನೀಡಿರುವದಾಗಿ ತಿಳಿದು ಬಂದಿದೆ.

ಎಡಿಸಿಗೆ ವರದಿ : ಸಿಬ್ಬಂದಿಗಳು ನೀಡಿರುವ ಉತ್ತರದ ವರದಿಯನ್ನು ಸಿಇಓ ದೇವರಾಜು ಆವರು ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ ಅವರಿಗೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ಗೋಡೆ ದುರಸ್ತಿ: ಇತ್ತ ಪ್ರಕರಣ ಬಯಲಾಗುತ್ತಿದ್ದಂತೆ ಸಿಬ್ಬಂದಿಗಳನ್ನು ಅಧಿಕಾರಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಒಡೆದು ಹಾಕಿರುವ ಗೋಡೆಯನ್ನು ಸಿಬ್ಬಂದಿಗಳು ದುರಸ್ತಿಪಡಿಸಿದ್ದಾರೆ. ಓರ್ವ ವ್ಯಕ್ತಿ ದಾಟುವಷ್ಟು ಮಾತ್ರ ಇದ್ದ ಜಾಗವನ್ನು ಒಡೆದುಹಾಕಿ ಕಾರು ನುಗ್ಗಿಸುವಷ್ಟರ ಮಟ್ಟಿಗೆ ಮಾಡಿಕೊಂಡಿದ್ದರು. ಇದೀಗ ತಾವೇ ಅದನ್ನು ಪುನರ್ ನಿರ್ಮಿಸಿದ್ದಾರೆ. ? ಸಂತೋಷ್