ವೀರಾಜಪೇಟೆ: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಕುಂದ ಸಮೀಪವಿರುವ ಕೈಮುಡಿಕೆ ಕೋಲ್ ಮಂದ್‍ನಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೊಟ್ಟಿಯತ್‍ನಾಡ್, ಕುತ್ತ್‍ನಾಡ್ ಹಾಗೂ ಬೇರಳಿನಾಡ್ ಈ ಮೂರು ನಾಡಿನ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರು ಮೂರು ಕಡೆಯಿಂದ ಸಾಂಪ್ರದಾಯಿಕ ಪಟ್ಟ್ ಹಿಡಿದು ಓಡಿಬಂದು ಕೋಲ್‍ಮಂದ್‍ನ ಮಧ್ಯ ಭಾಗದಲ್ಲಿರುವ ಅರಳಿ ಮರಕ್ಕೆ ಕೋಲು ಹೊಡೆಯುವ ಮೂಲಕ ಪುತ್ತರಿ ಕೋಲ್ ಮಂದ್ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮೂರು ನಾಡಿನ ತಕ್ಕ ಮುಖ್ಯಸ್ಥರು ಸೇರಿ ಸಾಂಪ್ರದಾಯಿಕ ಪುತ್ತರಿ ಕೋಲ್ ಹೊಡೆಯುವ ಮೂಲಕ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಈ ಬಾರಿ ಜಿಲ್ಲಾಮಟ್ಟದಲ್ಲಿ ವಿವಿಧ ಪೈಪೆÇೀಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜನರು ಕಿಕ್ಕಿರಿದು ಸೇರಿದ್ದು ವಿಶೇಷವಾಗಿತ್ತು. ಸೇರಿದ್ದ ಜನರಿಗೆ ಸಾಂಸ್ಕೃತಿಕ ರಸದೌತಣವನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಉಣ ಬಡಿಸಲಾಯಿತು.

ಈ ಬಾರಿಯ ವಿಶೇಷ ಎಂಬಂತೆ ಅಳಿವಿನಂಚಿನಲ್ಲಿರುವ ಯರವ ಜನಾಂಗಕ್ಕೆ ಯರವಾಟ್ ಕಾರ್ಯಕ್ರಮದೊಂದಿಗೆ ಚೀನಿದುಡಿ ನುಡಿಸುವ ಪೈಪೆÇೀಟಿಯನ್ನು ನೀಡಲಾಗಿತ್ತು. ಗೋಣಿಕೊಪ್ಪ ಕಾವೇರಿ ಕಾಲೇಜು, ಪೆÇನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ಸೇರಿದಂತೆ ಪೆÇನ್ನಂಪೇಟೆ ಕೊಡವ ಸಮಾಜ ತಂಡ, ತಿಂಗಕೋರ್ ಮೊಟ್ಟ್ ತಲಕಾವೇರಿಕ್ ತಂಡಗಳ ನಡುವಿನ ವಿವಿಧ ಪೈಪೆÇೀಟಿ ಕಾರ್ಯಕ್ರಮಗಳು ಗಮನ ಸೆಳೆದವು. ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಚೌರಿಯಾಟ್, ಕತ್ತಿಯಾಟ್, ಪರೆಯಕಳಿ, ವಾಲಗತಾಟ್, ಕೊಡವ ಪಾಟ್ ಪೈಪೆÇೀಟಿ ಸೇರಿದಂತೆ ವಿವಿಧ ಪೈಪೆÇೀಟಿ ಕಾರ್ಯಕ್ರಮ ಜನಮೆಚ್ಚುಗೆ ಪಡೆಯಿತು.

ಸಭಾ ಕಾರ್ಯಕ್ರಮ

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾನಿಗಳಾದ ಕುಂಞಂಗಡ ಕಿರಣ್ ಕಾರ್ಯಪ್ಪ ಮಾತನಾಡಿ, ನಮ್ಮ ಹಿರಿಯರು ಹಾಕಿಕೊಟ್ಟಿರುವ ಇಂತಹ ಸಂಸ್ಕೃತಿ ಹಾಗೂ ಸಂಪ್ರದಾಯಗಳು ನಮ್ಮ ಜನಾಂಗದ ಹೆಗ್ಗುರುತಾಗಿದ್ದು ಇದನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಮೂರು ನಾಡಿನ ತಕ್ಕ ಮುಖ್ಯಸ್ಥರು ಹಾಗೂ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ವಹಿಸಿ ಮಾತನಾಡಿ, ಕಳೆದ ಎರಡು ವರ್ಷ ಕೊರೊನಾ ಮಹಾಮಾರಿಯಿಂದ ಸರಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು, ಈ ಬಾರಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಗಿದೆ. ಎಲ್ಲರೂ ಒಂದೆಡೆ ಸೇರಲು ಈ ರೀತಿಯ ಹಬ್ಬಗಳು ಸಹಕಾರಿಯಾಗುತ್ತದೆ ಎಂದರಲ್ಲದೆ ಕೊಡವ ಜನಾಂಗದಲ್ಲಿ ನಡೆಯುವ ಮದುವೆ ಶುಭ ಕಾರ್ಯದ ಮುಹೂರ್ತ ಸಮಯದಲ್ಲಿ ಮದ್ಯಪಾನವನ್ನು ನಿಷೇಧ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಕುತ್ತ್‍ನಾಡ್ ತಕ್ಕರಾದ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿ ನಾಡ್ ತಕ್ಕ ಮಳವಂಡ ಭುವೇಶ್ ದೇವಯ್ಯ, ಕೊಡಗು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸೇರಿದಂತೆ ಮೂರು ನಾಡಿನ ವಿವಿಧ ತಕ್ಕಮುಖ್ಯಸ್ಥರಾದ ಚಮ್ಮಟೀರ ಸುಗುಣ ಮುತ್ತಣ್ಣ, ಅಚ್ಚಿಯಂಡ ಗಣಪಮಯ್ಯ, ತೀತಮಾಡ ಉಮೇಶ್ ಉತ್ತಪ್ಪ, ಕೊಡಂದೇರ ಸುಬ್ಬಯ್ಯ, ಕಾಡ್ಯಮಾಡ ಸುಮನ್, ಕೋಲತಂಡ ಮಂಜು ಮಂದಣ್ಣ, ಕೊಂಗಾಂಡ ಡೆಟ್ರಾನ್, ಕುಂಞಂಗಡ ಗೌತಮ್ ಹಾಗೂ ಕೈಮುಡಿಕೆ ಮಂದ್ ಸಹ ಕಾರ್ಯದರ್ಶಿ ತೀತಮಾಡ ವಾಸು ಗಣಪತಿ ಹಾಗೂ ತೀತಿಮಾಡ ಗಾಂದಿ ಗಣೇಶ್, ಪೆÇರ್ಕೊಂಡ ಗ್ರೀಷ್ಮಾ, ಉಮೇಶ್ ಕೇಚಮಯ್ಯ, ಅಪ್ಪಂಡೇರಂಡ ಮನು ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ ಹಾಗೂ ಬಾಳೋಪಾಟ್ ಸೇರಿದಂತೆ ಶಾಲಾ ಕಾಲೇಜು ಹಾಗೂ ಸಾರ್ವಜನಿಕರ ಮೂರು ವಿಭಾಗಗಳಲ್ಲಿ ತಲಾ ಒಂದೊಂದು ತಂಡವಿದ್ದ ಕಾರಣ ಎಲ್ಲರಿಗೂ ಸಮಾನವಾಗಿ ಮೊದಲನೇ ಬಹುಮಾನವನ್ನು ನೀಡಲಾಯಿತು.ಅರಮೇರಿ ಬೆಪ್ಪುನಾಡ್ ನಾಡ್ ಮಂದ್

ವೀರಾಜಪೇಟೆ: ಅರಮೇರಿ ಬೆಪ್ಪುನಾಡ್ ನಾಡ್ ಮಂದ್‍ನಲ್ಲಿ ಸಂಭ್ರಮದಿಂದ ಹುತ್ತರಿ ಕೋಲಾಟ್ ನಡೆಯಿತು. ಅರಮೇರಿ ಗ್ರಾಮದ ಮಾದ ಪಟ್ಟ್ ನಾಡ್ ಪರಂಬು ಬೆಪ್ಪುನಾಡ್ ನಾಡ್ ಮಂದ್‍ನಲ್ಲಿ 10 ಗ್ರಾಮಗಳ ಗ್ರಾಮಸ್ಥರ ಸಮ್ಮುಖದಲ್ಲಿ ಕೋಲಾಟ್ ಪ್ರದರ್ಶನ ನಡೆಯಿತು.

ವೀರಾಜಪೇಟೆ ಗ್ರಾಮಾಂತರ ಪ್ರದೇಶಗಳಾದ ಅರಮೇರಿ, ಕದನೂರು, ಕಡಂಗಮರೂರು, ನಾಲ್ಕೇರಿ, ಮೈತಾಡಿ, ಬೊಳ್ಳರಿಮಾಡು, ಕೊಟ್ಟೋಳಿ, ಕುಂಜಿಲಗೇರಿ, ಬೊಳ್ಳುಮಾಡು, ಕೆದಮುಳ್ಳೂರು ದಶ ಗ್ರಾಮಗಳು ಒಂದುಗೂಡಿ ಆಚರಿಸಿದರು. ಈಶ್ವರ ಸಾನ್ನಿಧಿಯಲ್ಲಿ ದುಡಿ ಕೊಟ್ಟ್ ನುಡಿಸುವ ಮೂಲಕ ಸಂಪ್ರದಾಯಕ ಕೋಲಾಟ್‍ಗೆ ಚಾಲನೆ ನೀಡಲಾಯಿತು. ಗ್ರಾಮದಲ್ಲಿ ನೆಲೆ ಕಂಡಿರುವ ಕೆಂಬಟ್ಟಿ ಸಮುದಾಯ ವ್ಯಕ್ತಿಗಳು ಕಳಿ (ವಿವಿಧ ವೇಷ ಭೂಷಣ) ಧರಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಊರು ತಕ್ಕರಾದ ಅಳಮಂಡ ಪೂಣಚ್ಚ ಅವರ ನೇತೃತ್ವದಲ್ಲಿ ಮಾದ ಪಟ್ಟ್ ನಾಡ್ ಪರಂಬುವಿನಲ್ಲಿ ಆಲ ಮರದ ಮುಂದೆ ಬಾಳೊ ಪಾಟ್ ಹಾಡಿ ಮತ್ತು ದುಡಿ ನುಡಿಸಿ ನಮನಗಳನ್ನು ಸಲ್ಲಿಸಿ ಸಾಮೂಹಿಕ ಕೋಲು ಪ್ರದರ್ಶನ ಕಂಡಿತು.ಬೊಮ್ಮಂಜಿಕೇರಿ ಮಾನಿವಾಡೆ ಮಂದ್

ನಾಪೆÇೀಕ್ಲು: ಇಲ್ಲಿಗೆ ಸಮೀಪದ ಬೊಮ್ಮಂಜಿಕೇರಿ ಮಾನಿವಾಡೆ ಮಂದ್ ನಲ್ಲಿ ಭಾನುವಾರ ಗ್ರಾಮಸ್ಥರು ಸೇರಿ ಹುತ್ತರಿ ಹಬ್ಬದ ಪ್ರಯುಕ್ತ ವಿವಿಧ ರೀತಿಯ ಕೋಲಾಟವಾಡುವುದರೊಂದಿಗೆ ಹುತ್ತರಿ ಕೋಲಾಟ ಸಂಪನ್ನಗೊಂಡಿತು.ಕರಡ ಬೇಲ್ಯಾಣೆ ಮಂದ್

ಚೆಯ್ಯಂಡಾಣೆ: ಕರಡದ ಬೇಲ್ಯಾಣೆ ಮಂದ್‍ನಲ್ಲಿ ಪ್ರತಿವರ್ಷದ ಆಚರಣೆಯಂತೆ ಈ ಬಾರಿಯೂ ಹುತ್ತರಿ ಹಬ್ಬದ ನಂತರ ನಡೆಸುವ ಕೋಲಾಟವನ್ನು ನಡೆಸಲಾಯಿತು.

ಈ ಸಂದರ್ಭ ಈಶ್ವರ ಹಾಗೂ ಭಗವತಿ ದೇವಸ್ಥಾನದ ಉಪಾಧ್ಯಕ್ಷರಾದ ಪಟ್ರಪಂಡ ಜಗದೀಶ್ ಅಪ್ಪಯ್ಯ, ಪ್ರಮುಖರಾದ ಐತಿಚಂಡ ಭೀಮಯ್ಯ, ಐಯ್ಯಣ್ಣ, ದಿನೇಶ್, ಕಾಳಪ್ಪ, ನಾಚಪ್ಪ, ರಮೇಶ್, ಜಿಮ್ಮಿ, ಕಿಶು, ವಿಲಿನ್, ಮೇದರ ಕಟ್ಟಿ, ಅಪ್ಪಯ್ಯ, ನಾಗೇಶ್ ಇನ್ನಿತರರು ಪಾಲ್ಗೊಂಡಿದರು.ನಾಪೆÇೀಕ್ಲು ಹಳೆ ತಾಲೂಕು

ನಾಪೆÇೀಕ್ಲು: ಹುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕವಾಗಿ ಪ್ರತಿ ವರ್ಷ ನಡೆಸಲಾಗುವ ನಾಪೆÇೀಕ್ಲು ಗ್ರಾಮದ ಹುತ್ತರಿ ಕೋಲಾಟ ಹಳೆ ತಾಲೂಕಿನ ಊರು ಮಂದ್‍ನಲ್ಲಿ ನೆರವೇರಿತು.

ಈ ಸಂದರ್ಭ ಊರಿನ ಪ್ರಮುಖರಾದ ಭಗವತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲೇಟಿರ ಗುರುವಪ್ಪ, ಕಾರ್ಯದರ್ಶಿ ಕಂಗಾಂಡ ಜಾಲಿ ಪೂವಪ್ಪ, ನಾಟೋಳಂಡ ಭೀಮಯ್ಯ, ಕೇಲೆಟ್ಟಿರ ಬಸಪ್ಪ, ಕುಲ್ಲೇಟಿರ ಅರುಣ್ ಬೇಬ ,ಅಜಿತ್ ನಾಣಯ್ಯ ಇನ್ನಿತರ ಭಾಗವಹಿಸಿದ್ದರು.