ನಾಪೆÇೀಕ್ಲು, ಡಿ. 12: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ನಿರಂತರ ಅಭ್ಯಾಸ ಮತ್ತು ಭಾಗವಹಿಸುವುದು ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ, ನಿವೃತ್ತ ಉಪನ್ಯಾಸಕಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಹೇಳಿದರು.
ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ವತಿಯಿಂದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಅಂತರ ಪ್ರೌಢಶಾಲಾ ಹಾಕಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ನಾಲ್ಕುನಾಡು ವ್ಯಾಪ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರ ಹೊಮ್ಮಿದ್ದಾರೆ. ಈ ವ್ಯಾಪ್ತಿಗೆ ಉತ್ತಮ ಸುಸಜ್ಜಿತವಾದ ಕ್ರೀಡಾ ಮೈದಾನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿದ್ದಾಗ ಟರ್ಫ್ ಮೈದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಕಾರ್ಯಗತವಾಗಿಲ್ಲ. ನಾಲ್ಕುನಾಡು ವ್ಯಾಪ್ತಿಗೆ ಸುಸಜ್ಜಿತವಾದ ಕ್ರೀಡಾ ಮೈದಾನ ಒದಗಿಸುವ ನಿಟ್ಟಿನಲ್ಲಿ ಕ್ರೀಡಾಪ್ರೇಮಿಗಳು ಶ್ರಮಿಸಬೇಕು ಎಂದರು.
ಅತಿಥಿಯಾಗಿದ್ದ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ. ಸದಾಶಿವ ಪಲ್ಲೇದ್ ಮಾತನಾಡಿ, ಬದುಕು ಕಟ್ಟಿಕೊಳ್ಳಲು ಆಹಾರ, ಉಡುಗೆ- ತೊಡುಗೆ ನಮಗೆ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಬೆಳವಣಿಗೆಗೆ ಕ್ರೀಡೆ ಅವಶ್ಯಕ ಇದೆ. ಇಂದಿನ ವಿದ್ಯಮಾನದಲ್ಲಿ ಕ್ರೀಡೆಯನ್ನು ಆಧುನಿಕ ಮೊಬೈಲ್ ನುಂಗಿ ಹಾಕಿದೆ. ಊರಿಗೊಂದು ಕ್ರೀಡಾಂಗಣವಿದ್ದರೆ ಅಭಿವೃದ್ಧಿ ಹಾಗೂ ಮಕ್ಕಳ ಅಭಿವೃದ್ಧಿಗೆ, ಸದೃಢತೆಗೆ ಸಹಕಾರಿ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೆÇನ್ನಚ್ಚನ ಶ್ರೀನಿವಾಸ್ ಮಾತನಾಡಿ, ಇತರ ಜಿಲ್ಲೆಗಳನ್ನು ನೋಡಿದರೆ ಕೊಡಗಿನಲ್ಲಿ ಕ್ರೀಡೆಗೆ ಉತ್ತಮ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ಶಾಲಾ ಆಡಳಿತ ಹಾಗೂ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಬೊಪ್ಪಂಡ ಡಾ. ಜಾಲಿ ಬೋಪಯ್ಯ ವಹಿಸಿ ಶುಭ ಕೋರಿದರು. ಟ್ರಸ್ಟಿನ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಅಪ್ಪಾರಂಡ ಅಪ್ಪಯ್ಯ, ಬಿದ್ದಾಟಂಡ ಪಾಪು ಮುದ್ದಯ್ಯ, ಕೊಂಬಂಡ ಗಣೇಶ್, ಪೆÇ್ರ. ಕಲ್ಯಾಟಂಡ ಪೂಣಚ್ಚ, ಮಕ್ಕಿ ಸುಬ್ರಮಣ್ಯ ಭಟ್, ಬೊಪ್ಪಂಡ ಕುಶಾಲಪ್ಪ, ಬಿದ್ದಾಟಂಡ ಮುತ್ತಣ್ಣ, ಬೊಳ್ಳಚೆಟ್ಟೀರ ಸುರೇಶ್, ಅಪ್ಪಚೆಟ್ಟೋಳಂಡ ನವೀನ್, ನಾಯಕಂಡ ದೀಪು ಚಂಗಪ್ಪ, ವಿವಿಧ ಶಾಲಾ ಶಿಕ್ಷಕ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಬೈಯಂಡ ಲವ ಅಪ್ಪಚ್ಚ, ಕರವಂಡ ಅಪ್ಪಣ್ಣ, ಕರೋಟಿರ ಬೋಪಣ್ಣ, ಮಣವಟ್ಟೀರ ಅಯ್ಯಪ್ಪ, ಪಟ್ರಪಂಡ ಮಂದಣ್ಣ, ಬೈಯಂಡ ರಘು ತಿಮ್ಮಯ್ಯ ಪಾಲ್ಗೊಂಡಿದ್ದರು.
ಶಿಕ್ಷಕ ಅಂಬ್ರಾಟಿ ಭಗವತಿ ಪ್ರಸಾದ್ ನಿರೂಪಿಸಿ ಮೂಡೆರ ಕಾಳಯ್ಯ ವೀಕ್ಷಕ ವಿವರಣೆ ನೀಡಿದರು. ವಿದ್ಯಾರ್ಥಿನಿ ತಂಗಮ್ಮ ಮತ್ತು ತಂಡ ಪ್ರಾರ್ಥಿಸಿ, ಪ್ರಾಂಶುಪಾಲೆ ಶಾರದಾ ಅಪ್ಪಣ್ಣ ಸ್ವಾಗತಿಸಿದರು. ಶಿಕ್ಷಕಿ ಕಂಗಾಂಡ ಶ್ವೇತ ವಂದಿಸಿದರು. ಬಳಿಕ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಹಾಗೂ ಕಕ್ಕಬೆ ಪ್ರೌಢಶಾಲೆಗಳ ನಡುವೆ ಆರಂಭಿಕ ಪಂದ್ಯ ನಡೆಯಿತು.
ಆರಂಭಿಕ ಪಂದ್ಯದಲ್ಲಿ ಕಕ್ಕಬ್ಬೆ ಪ್ರೌಢಶಾಲೆಯು ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ತಂಡದ ವಿರುದ್ಧ 6-0 ಅಂತರದ ಗೆಲುವು ಸಾಧಿಸಿತು. ಗೋಣಿಕೊಪ್ಪದ ಕಾಲ್ಸ್ ತಂಡವು ಸೇಕ್ರೆಡ್ ಹಾರ್ಟ್ ತಂಡದ ವಿರುದ್ಧ 4-0 ಅಂತರದಲ್ಲಿ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಗೋಣಿಕೊಪ್ಪದ ಕಾಲ್ಸ್ ತಂಡವು ಕಕ್ಕಬ್ಬೆ ಪ್ರೌಢಶಾಲೆಯ ವಿರುದ್ಧ 3-2 ಅಂತರದ ಗೆಲುವು ಸಾಧಿಸಿತು. ಪೆÇನ್ನಂಪೇಟೆಯ ಕೆಪಿಎಸ್ ತಂಡವು ನಾಪೆÇೀಕ್ಲುವಿನ ಕೆಪಿಎಸ್ ತಂಡದ ವಿರುದ್ಧ 5-0 ಅಂತರದ ಗೆಲುವು ಸಾಧಿಸಿತು. ದಿನದ ಕೊನೆಯ ಪಂದ್ಯದಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲಾ ತಂಡವು ಚೇರಂಬಾಣೆಯ ಅರುಣ ಪ್ರೌಢಶಾಲೆಯ ತಂಡದ ವಿರುದ್ಧ 1-0 ಅಂತರದ ಗೆಲುವು ಸಾಧಿಸಿತು.
- ದುಗ್ಗಳ ಸದಾನಂದ.