*ಗೋಣಿಕೊಪ್ಪ, ಡಿ. 12: ಆರೋಗ್ಯದ ಬಗ್ಗೆ ತೀವ್ರವಾದ ಕಾಳಜಿ ಹೊಂದುವುದರಿಂದ ಮನುಷ್ಯ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ ಬೋಪಯ್ಯ ಸಲಹೆ ನೀಡಿದರು.

ಬಾಳಲೆ ಕೊಡವ ಸಮಾಜದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇಂದ್ರ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ , ಬಾಳಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ಐಶ್ವರ್ಯ ಚಾರಿಟೇಬಲ್ ಟ್ರಸ್ಟ್, ಸ್ನೇಹಾಶ್ರಯ ಯೂಥ್ ಟ್ರಸ್ಟ್, ಬಾಳಲೆ, ನಿಟ್ಟೂರು, ಪೆÇನ್ನಪ್ಪಸಂತೆ, ಮಾಯಮುಡಿ, ಕಿರುಗೂರು, ಗ್ರಾಮ ಪಂಚಾಯಿತಿಗಳ ಆಶ್ರಯದಲ್ಲಿ ನಡೆದ ಆರೋಗ್ಯ ಅಮೃತ ಅಭಿಯಾನದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯ ಆರೋಗ್ಯವಾಗಿ ಇದ್ದರೆ ಮಾತ್ರ ಬದುಕನ್ನು ಸುಂದರವಾಗಿ ಸಾಗಿಸಲು ಸಾಧ್ಯವಿದೆ. ಅನಾರೋಗ್ಯದ ಪ್ರಾಥಮಿಕ ಹಂತದಲ್ಲಿಯೇ ವೈದ್ಯರನ್ನು ಕಾಣುವ ಮೂಲಕ ತಪಾಸಣೆಗೆ ಮುಂದಾಗಬೇಕು; ಇದರಿಂದ ಕಾಯಿಲೆಗಳು ಗಂಭೀರ ಪರಿಸ್ಥಿತಿ ಹೊಂದುವುದನ್ನು ನಿಯಂತ್ರಿಸಲು ಸಾಧ್ಯವಿದೆ.

ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದಷ್ಟು ಬಹುದೊಡ್ಡ ಆಪತ್ತಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ವೈದ್ಯರೊಂದಿಗೆ ಹೆಚ್ಚಿನ ಸಂಪರ್ಕ ಪಡೆದುಕೊಂಡು ರೋಗಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಮೂರನೇ, ನಾಲ್ಕನೆಯ ಹಂತದಲ್ಲಿ ವೈದ್ಯರನ್ನು ಕಾಣುವ ಮೊದಲೇ ಪ್ರಾಥಮಿಕವಾಗಿ ಚಿಕಿತ್ಸೆ ಪಡೆದು ಕೊಂಡಾಗ ಕ್ಯಾನ್ಸರ್‍ನಂತಹ ಗಂಭೀರ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಲು ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಪೂರ್ಣ ಜೀವನ ನಡೆಸಲು ಪ್ರತಿಯೊಬ್ಬರೂ ಆಸಕ್ತರಾಗಬೇಕು. ಈ ನಿಟ್ಟಿನಲ್ಲಿ ಆಯೋಜಿಸುವ ಶಿಬಿರಗಳಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಮುಂದಾಗಬೇಕು. ಗ್ರಾಮೀಣ ಭಾಗದ ಜನರು ನಾಟಿ ಔಷಧಿಗಳನ್ನೇ ಹೆಚ್ಚಾಗಿ ನಂಬಿಕೊಂಡಿರುವುದು ಕಾಣಬಹುದಾಗಿದೆ. ಪರಿಶಿಷ್ಟ ವರ್ಗ ಮತ್ತು ಜಾತಿಯ ಗಿರಿಜನ ಸಮುದಾಯದವರು ಈ ಬಗ್ಗೆ ಹೆಚ್ಚಿನ ಆಸಕ್ತರಾಗಿದ್ದಾರೆ. ಅಂತವರಿಗೆ ನೇರವಾಗಿ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅದರಂತೆ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತಿದೆ ಎಂದು ಹೇಳಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಂಜುಂಡಯ್ಯ ಮಾತನಾಡಿ ಶಿಬಿರದಲ್ಲಿ, ಚÀರ್ಮರೋಗ, ಮಕ್ಕಳ ಕಾಯಿಲೆ, ಗಂಟಲು, ಕಿವಿ, ಮೂಗು, ಆಯುಷ್ಮಾನ್ ಕಾರ್ಡ್ ವಿತರಣೆ, ಅಬಾ ಕಾರ್ಡ್ ನೋಂದಣಿ, ವಿಶೇಷಚೇತನರಿಗೆ ಗುರುತಿನ ಚೀಟಿ, ಮಕ್ಕಳ ಆರೋಗ್ಯ ತಪಾಸಣೆ, ಗರ್ಭಿಣಿಯರ ಆರೋಗ್ಯ ತಪಾಸಣೆ, ಮತ್ತು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಆರೋಗ್ಯ ಸೇವೆಗಳ ಜತೆಗೆ ಇನ್ನಿತರ ಸೇವೆ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಾಳಲೆ ಗ್ರಾ.ಪಂ. ಅಧ್ಯಕ್ಷ ಪೆÇಡಮಾಡ ಸುಕೇಶ್ ಭೀಮಯ್ಯ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಕಾಟಿಮಾಡ ಶರಿನ್ ಮುತ್ತಣ್ಣ, ಸದಸ್ಯ ಚೆಕ್ಕೆರ ಸೂರ್ಯ ಅಯ್ಯಪ್ಪ, ಬಾಳಲೆ ಗಾ.ಪಂ. ಸದಸ್ಯ ಮಹೇಶ್, ಕೊಡವ ಸಮಾಜ ಕಾರ್ಯದರ್ಶಿ ಆದೇಂಗಡ ಚಂದ್ರಶೇಖರ್, ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಸಿ.ಬಿ ವಿಶ್ವನಾಥ್, ಬಾಳಲೆ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್ ಸಿ.ಪಿ, ಮಾಯಮುಡಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಸೌಮ್ಯ ಉಪಸ್ಥಿತರಿದ್ದರು.