ಮಡಿಕೇರಿ, ಡಿ. ೧೧: ಜಂಬೂರು-ಇಗ್ಗೋಡ್ಲು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಗ್ರಾಮಾಭಿವೃದ್ಧಿ ಯುವಕ ಸಂಘದ ೨೫ನೇ ವರ್ಷದ ಮಹಾಸಭೆ ಸಂಘದ ಅಧ್ಯಕ್ಷ ಎನ್.ಪಿ. ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಂದಿನ ಸಾಲಿಗಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಜೆ. ಅಂತೋನಿ, ಉಪಾಧ್ಯಕ್ಷರಾಗಿ ಬಿ.ಕೆ. ಸತೀಶ್ ಕುಮಾರ್, ಕಾರ್ಯದರ್ಶಿ ಟಿ.ಪಿ. ಪವನ್, ಸಹ ಕಾರ್ಯದರ್ಶಿ ಬಿ.ಕೆ. ಮಹೇಶ್ ಕುಮಾರ್, ಖಜಾಂಚಿ ಎಚ್.ಬಿ. ಮಂಜು ಹಾಗೂ ಗೌರವ ಅಧ್ಯಕ್ಷರಾಗಿ ಎನ್.ಪಿ. ಪೂಣಚ್ಚ ಆಯ್ಕೆಯಾದರು.
ಸಂಘದ ಬೆಳ್ಳಿಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಂದರ್ಭ ಮಾದಾಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಭರತ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸದಸ್ಯ ಪವನ್ ಸ್ವಾಗತಿಸಿ, ಮಜಿದ್ ವಂದಿಸಿದರು.